Advertisement

ಇನ್ಫೋಸಿಸ್‌ ಉದ್ಯೋಗಿಗಳ ಅಮೆರಿಕ ಕನಸಿಗೆ ತಣ್ಣೀರು!

10:19 AM Apr 17, 2017 | Team Udayavani |

ಮುಂಬಯಿ: ಅಮೆರಿಕಕ್ಕೆ ತೆರಳಿ, ಇನ್ಫೋಸಿಸ್‌ ಕಚೇರಿಯಲ್ಲಿ ಕೆಲಸ ಮಾಡಬೇಕೆಂಬ ಐಟಿ ಉದ್ಯೋಗಿಗಳ ಕನಸು ನನಸಾಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಕಾರಣ, ಇನ್ಫೋಸಿಸ್‌ ತನ್ನ ಅಮೆರಿಕ ಕಚೇರಿಗಳಲ್ಲಿನ ವಿವಿಧ ಹುದ್ದೆಗಳಿಗೆ ಭಾರತದಿಂದ ಉದ್ಯೋಗಿಗಳನ್ನು ಕರೆಸಿಕೊಳ್ಳುತ್ತಿದ್ದ ಸಂಸ್ಕೃತಿಗೆ ಪೂರ್ಣ ವಿರಾಮ ಹಾಕಲು ನಿರ್ಧರಿಸಿದೆ. ಅಮೆರಿಕದ ಯುವಜನತೆಗೇ  ಮಣೆ ಹಾಕಲು ಮುಂದಾಗಿದೆ. ಅಲ್ಲದೆ ಈ ಸಂಬಂಧ ಅಭಿವೃದ್ಧಿ ಹಾಗೂ ತರಬೇತಿ ಕೇಂದ್ರಗಳನ್ನು ಕೂಡ ಸಂಸ್ಥೆ ತೆರೆಯಲಿದೆ.

Advertisement

ಟ್ರಂಪ್‌ ಅಧ್ಯಕ್ಷರಾದ ಅನಂತರ ವೀಸಾ ನೀತಿ ಮತ್ತು ವಿತರಣೆ ವಿಷಯದಲ್ಲಿ ಉಂಟಾದ ಬಿಕ್ಕಟ್ಟುಗಳ ಹಿನ್ನೆಲೆಯಲ್ಲಿ ಇನ್ಫೋಸಿಸ್‌ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಳ್ಳುತ್ತಿದೆ. “ವೀಸಾ ನೀತಿಗಳಿಗೆ ಅನುಗುಣವಾಗಿ ಪರಿಸ್ಥಿತಿ ನಿರ್ವಹಿಸುತ್ತಿದ್ದೇವೆ. 24 ತಿಂಗಳಿನಿಂದ ಅಮೆರಿಕದಲ್ಲಿ ಪ್ರಬಲ ಅಸ್ತಿತ್ವ ಹೊಂದಲು ಯತ್ನಿಸುತ್ತಿರುವ ನಾವು, ಸ್ಥಳೀಯರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಆದ್ಯತೆ ನೀಡಿದ್ದೇವೆ’ ಎಂದು ಇನ್ಫಿ ಸಿಇಒ ಯು.ಬಿ. ಪ್ರವೀಣ್‌ ರಾವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next