Advertisement
ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ನಿಟ್ಟಿನಲ್ಲಿ ಗೋಕುಲ ರಸ್ತೆಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸುಮಾರು 17.42 ಹೆಕ್ಟೇರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೈಗೊಂಡಿತ್ತು. 2018ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಘಟಕ ಆರಂಭ ಆಗಿರಲಿಲ್ಲ. ಕೋವಿಡ್ ಇನ್ನಿತರ ಕಾರಣಗಳಿಂದ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಇದೀಗ ಇನ್ಫೋಸಿಸ್ ಘಟಕ ಕಾರ್ಯಾರಂಭದ ಮೂಲಕ ಹಲವರ ನಿರೀಕ್ಷೆ ಈಡೇರಿದೆ. ಆದರೆ, ಕಂಪೆನಿ ಇದುವರೆಗೂ ಸ್ಪಷ್ಟ ಹಾಗೂ ಅಧಿಕೃತ ರೀತಿಯಲ್ಲಿ ಹುಬ್ಬಳ್ಳಿ ಘಟಕದ ಆರಂಭ ಬಗ್ಗೆ ಘೋಷಣೆ ಮಾಡಿಲ್ಲ.
ಬೆಳಗ್ಗೆ ಸುಮಾರು 45ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸಕ್ಕೆ ಹಾಜರಾದರು ಎಂದು ಹೇಳಲಾಗುತ್ತಿದೆ.
Related Articles
Advertisement
ಉದ್ಯೋಗಕ್ಕೆ ರೈತರ ಮನವಿಇನ್ಫೋಸಿಸ್ಗೆ ಭೂಮಿ ನೀಡಿದ ಸುಮಾರು 14 ರೈತರು ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ತಮ್ಮ ಮನೆಯಲ್ಲಿ ಒಬ್ಬರಿಗೆ ಇನ್ಫೋಸಿಸ್‌ನಲ್ಲಿ ನೌಕರಿ ನೀಡಬೇಕೆಂದು ಮನವಿ ಮಾಡಿದರು. ರೈತರು ಆಗಮಿಸಿ ಇನ್ಫೋಸಿಸ್ ಕಚೇರಿ ಹೊರಗೆ ನಿಂತಿದ್ದರು. ನಂತರ ಭದ್ರತಾ ಸಿಬ್ಬಂದಿ ಮೂಲಕ ಮಾಹಿತಿ ತಿಳಿಸಿದಾಗ ಇಬ್ಬರು ರೈತರನ್ನು ಚರ್ಚೆಗೆ ಕಚೇರಿ ಒಳಗೆ ಆಹ್ವಾನಿಸಲಾಯಿತು. ಇನ್ಫೋಸಿಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊರಬಂದ ರೈತರಾದ ನಾಗೇಂದ್ರ ಪೂಜಾರ ಮತ್ತು ಕೃಷ್ಣ ಅವರು ಅಲ್ಲಿನ ಮಾನವ ಸಂಪನ್ಮೂಲ ವಿಭಾಗದ ಸಂದೀಪ ಅವರೊಂದಿಗೆ ಚರ್ಚಿಸಿದೆವು. ಆರಂಭದಲ್ಲಿ ಆ ರೀತಿ ನೌಕರಿ ನೀಡಿಕೆ ಅಸಾಧ್ಯ ಎಂದರಾದರೂ, ದಾಖಲೆಯಲ್ಲಿ ಲಿಖೀತವಾಗಿ ಇರುವ ಮಾಹಿತಿ ತೋರಿಸಿದಾಗ ನಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೇಳಿದರಲ್ಲದೆ, ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ನೀಡಲು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಕಂಪೆನಿಯ ಇ-ಮೇಲ್ ವಿಳಾಸ ನೀಡಿ ಇದಕ್ಕೆ ಉದ್ಯೋಗ ಪಡೆಯಲು ಇಚ್ಛಿಸುವವರ ವೈಯಕ್ತಿಕ ಪರಿಚಯ, ವಿದ್ಯಾರ್ಹತೆ ಕಳುಹಿಸಿ ಎಂದು ಹೇಳಿದ್ದಾರೆ ಎಂದರು. 1,500 ಉದ್ಯೋಗಿಗಳು ಬರುವವರೆಗೂ ಅಭಿಯಾನ
ಇನ್ಫೋಸಿಸ್ ಘಟಕ ಆರಂಭದ ಹಿನ್ನೆಲೆಯಲ್ಲಿ ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ವೃತ್ತಿಪರ ತಂಡದವರು ಕಚೇರಿ ಬಳಿ ಆಗಮಿಸಿ ಉದ್ಯೋಗಿಗಳಿಗೆ ಶುಭ ಕೋರಿದರಲ್ಲದೆ, ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಎನ್.ಎಸ್. ಇನ್ಫೋಟೆಕ್ ಸಂಸ್ಥಾಪಕ ಸಂತೋಷ ಹುರಳಿಕೊಪ್ಪಿ ಮಾತನಾಡಿ, ಉತ್ತರ ಕರ್ನಾಟಕ ಮಟ್ಟಿಗೆ ಇದು ಐತಿಹಾಸಿಕ ದಿನ. ಉತ್ತರದಲ್ಲಿ ಅವಕಾಶ ಇಲ್ಲವೆಂದು ಇಲ್ಲಿನ ಅನೇಕ ಐಟಿ ಪ್ರತಿಭೆಗಳು ವಲಸೆ ಹೋಗುವಂತಾಗಿತ್ತು. ಇದೀಗ ಇನ್ಫೋಸಿಸ್ ಆರಂಭದ ಮೂಲಕ ಯುವಕರು ಮೆಟ್ರೋ ನಗರಗಳಿಗೆ ಹೋಗುವುದನ್ನು ತಡೆದಂತಾಗಲಿದೆ ಎಂದರು.ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿಯ ರೂವಾರಿ ಸಂತೋಷ ನರಗುಂದ ಮಾತನಾಡಿ, ಇನ್ಫೋಸಿಸ್ ಹುಬ್ಬಳ್ಳಿಯಲ್ಲಿ ಕಾರ್ಯಾರಂಭಕ್ಕೆ ಕೈಗೊಂಡ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಉತ್ತರ ಕರ್ನಾಟಕದ ಜನತೆಗೆ ಇದೊಂದು ಮಹತ್ವದ ಕೊಡುಗೆಯಾಗಿದೆ. ಘಟಕದಲ್ಲಿ ಸುಮಾರು 1,500 ಉದ್ಯೋಗಿಗಳು ಬರುವವರೆಗೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದರು.ಐಬಿಎಂಆರ್ ಕಾಲೇಜು ನಿರ್ದೇಶಕ ರಿಯಾಜ್ ಬಸರಿ, ಪ್ರೊ| ಪ್ರಸಾದ ರೂಢಗಿ, ಶಾಮ ನರಗುಂದ, ವಿಜಯ ಸಾಯಿ, ಆರ್.ಜೆ. ರಾಶಿದ, ಒಟ್ಟಿಲಿ ಅನುºಕುಮಾರ, ಪ್ರೊ| ಶಿವಯೋಗಿ ಹುಬ್ಳಿಕರ, ನಚಿಕೇತ ಜಮಾದರ, ಶಿವಾನಂದ ಬೆಳವಟಗಿ, ರಾಮಪ್ರಸಾದ ದೇಶಪಾಂಡೆ, ಪ್ರಕಾಶಸಿಂಗ್, ಆನಂದ ಬಸವಾ, ಯಶ ರಜಪೂತ, ಶ್ರೀರಾಮ ರಾಯ್ಕರ್, ರೋಮಾ ಹಿರೇಮಠ, ಉದಯ ಪೆಂಡ್ಸೆ, ಭೀಮಸಿಂಗ ಇನ್ನಿತರರಿದ್ದರು.