ಬೆಂಗಳೂರು: ಬಿ ಫಾರ್ಮ್ ಪಡೆದು ಗೆದ್ದವರು ಕೇಂದ್ರ ಶಿಸ್ತು ಸಮಿತಿ ಕೆಳಗೆ ಬರುತ್ತಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರದಲ್ಲಿ ಕೇಂದ್ರದ ಶಿಸ್ತು ಸಮಿತಿಗೆ ಎಲ್ಲಾ ಮಾಹಿತಿ ನೀಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಯತ್ನಾಳ್ ಶಾಸಕಾಂಗ ಪಕ್ಷ ಸಭೆ ಕರೆಯಲು ಹೇಳಿರುವುದಲ್ಲಿ ತಪ್ಪಿಲ್ಲ. ಸಚೇತಕ ಸುನೀಲ್ ಕುಮಾರ್ ಬರೆದಿದ್ದ ಪತ್ರ ಕೂಡಾ ಸರಿಯಾಗಿದೆ. ಆ ಹಿನ್ನಲೆಯಲ್ಲಿ ಇಂದು ವಿಭಾಗವಾರು ಸಭೆ ಮಾಡಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕರ ವಿಭಾಗವಾರು ಸಭೆಯಲ್ಲಿ ಸಿಎಂ ಯಡಿಯೂರಪ್ಪ ಕಳೆದ ಒಂದು ವರ್ಷದ ಅವಲೋಕನ ಮಾಡಿದ್ದಾರೆ. ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರು ಉಲ್ಲೇಖ ಮಾಡಿದ್ದಾರೆ. ಶಾಸಕರ ಬೇಡಿಕೆಗಳ ಬಗ್ಗೆ ಕೇಳಿ ಸಿಎಂ ಉತ್ತರ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ:ಯಾವದೇ ಪಕ್ಷದೊಂದಿಗೆ ವಿಲೀನವಿಲ್ಲ, 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ: ಎಚ್ ಡಿಕೆ
ಸಚಿವರ ಹಸ್ತಕ್ಷೇಪದ ಬಗ್ಗೆ ಯಾವ ಶಾಸಕರು ಆರೋಪ ಮಾಡಿಲ್ಲ. ನಾಳೆಯೂ ಸಿಎಂ ಯಡಿಯೂರಪ್ಪ ಶಾಸಕರ ಸಮಸ್ಯೆ ಆಲಿಸುತ್ತಾರೆ ಎಂದ ಅವರು, ನಾಳೆ ಪ್ರಧಾನಿ ಕಾರ್ಯಕ್ರಮ ಇರುವ ಕಾರಣ ನಾನು ಮಂಗಳೂರಿನಲ್ಲಿ ಇರುತ್ತೇನೆ ಎಂದು ನಳಿನ್ ಕುಮಾರ್ ಹೇಳಿದರು.