Advertisement

ಕೋವಿಡ್ ಫ‌ಲಿತಾಂಶದೊಂದಿಗೆ ಮಾಹಿತಿ ಪತ್ರ

07:33 AM Jul 18, 2020 | mahesh |

ಬೆಂಗಳೂರು: ಕೋವಿಡ್ ಫ‌ಲಿತಾಂಶದ ಜತೆಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ಒಳಗೊಂಡ ಮಾಹಿತಿ ಪತ್ರವನ್ನು ಮುದ್ರಿಸಿ ನೀಡಲು ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಆದೇಶ ಹೊರಡಿಸಿದ್ದಾರೆ.

Advertisement

ಮಾಹಿತಿ ಪತ್ರ ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿರಲಿದ್ದು, ಸೋಂಕು ಪರೀಕ್ಷೆ ಫ‌ಲಿತಾಂಶ ಬಂದ ಕೂಡಲೇ ಸೋಂಕು ದೃಢಪಟ್ಟವರು ಮತ್ತು ನೆಗೆಟಿವ್‌ ಬಂದವರು ಏನು ಮಾಡಬೇಕು ಎಂದು ನಮೂದಿಸಲಾಗಿದೆ. ಉಚಿತ ಆ್ಯಂಬುಲೆನ್ಸ್‌ ಸೇವೆಗಾಗಿ 108ಕ್ಕೆ ಕರೆ ಮಾಡಬೇಕು. ಒತ್ತಡದಲ್ಲಿದ್ದರೆ, ಆತಂಕಕ್ಕೆ ಒಳಗಾಗಿದ್ದರೆ, ಮನಃಸ್ಥಿತಿ ಸರಿ ಇಲ್ಲದಿದ್ದರೆ, ನಿದ್ರೆ ಬಾರದಿರುವುದು ಹಾಗೂ ಹೊಟ್ಟೆಯಲ್ಲಿ ತೊಂದರೆ ಇದ್ದರೆ 104ಕ್ಕೆ ಕರೆ ಮಾಡಿ 4 ಅನ್ನು ಒತ್ತಿ. ಸೋಂಕು ಫ‌ಲಿತಾಂಶ ನೆಗೆಟಿವ್‌ ಬಂದರೆ ಅಂತಹ ವ್ಯಕ್ತಿಗಳಿಗೆ ಜ್ವರ, ಕೆಮ್ಮು, ಉಸಿರಾಟ ತೊಂದರೆಯ ಲಕ್ಷಣ ಕಂಡು ಬಂದರೆ ಕೂಡಲೇ ಆಪ್ತಮಿತ್ರ (14410) ಸಹಾಯ ವಾಣಿಗೆ ಕರೆ ಮಾಡಬೇಕು. ಜತೆಗೆ ಯಾವಾಗಲೂ ಧನಾತ್ಮಕವಾಗಿ ಯೋಚಿಸಿ. ಧನಾತ್ಮಕವಾಗಿದ್ದರೆ ಬೇಗ ಚೇತರಿಸಿಕೊಳ್ಳಬಹುದು. ಅತ್ಯಾವಶ್ಯಕ ಸಂದರ್ಭಗಳಲ್ಲಿ ಹೊರತುಪಡಿಸಿ ಹೊರಗೆ ಹೋಗಬಾರದು ಇತ್ಯಾದಿ ಸಲಹೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next