ರೋಗಿಗಳಿಗೆ ಉಪಯೋಗಿಸುವ ಉಪಕರಣ ಒಂದು ಲಕ್ಷದವರೆಗೆ ಇತ್ತು. ಆದರೆ ಈಗ 18 ಸಾವಿರ ರೂ. ಗಳಿಗೆ ಲಭ್ಯವಿದೆ. ಮಂಡಿ ಚಿಕಿತ್ಸೆಗೆ ಸುಮಾರು 4 ಲಕ್ಷ ರೂ. ವೆಚ್ಚ ತಗುಲಲಿದ್ದು, ಇಂದು ಡಾ| ವಿ. ಎಂ. ಶೆಟ್ಟಿ ಅವರ ಸಮಾಜ ಸೇವೆಯಿಂದಾಗಿ 99,000 ರೂ. ಗಳಿಗೆ ಲಭ್ಯ ವಾಗಿದ್ದು. ಗ್ರಾಮೀಣ ಭಾಗದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಬೇಕೆಂಬ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ರವೀಂದ್ರ ಚವಾಣ್ ನುಡಿದರು.
Advertisement
ಮಾ. 31ರಂದು ಡೊಂಬಿವಲಿ ಪೂರ್ವದ ಠಾಕೂರ್ ಸಭಾಗೃಹದಲ್ಲಿ ಸಿಟಿ ಆಸ್ಪತ್ರೆಯ ಡಾ| ವಿಜಯ ಎಂ. ಶೆಟ್ಟಿ ಅವರ ವೈದ್ಯಕೀಯ ಸೇವೆಯ 20ನೇ ವರ್ಷಾಚರಣೆಯ ಅಂಗವಾಗಿ ನಡೆದ ಕೃತಕ ಮಂಡಿ ಜೋಡಣೆ ಮಾಹಿತಿ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಪ್ರಧಾನಮಂತ್ರಿ ಆಯುಷ್ಮಾನ್ ಯೋಜನೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿ ಜರಗಲಿದೆ. ಡಾ| ವಿ. ಎಂ. ಶೆಟ್ಟಿ ಅವರಂತೆ ವೈದ್ಯಕೀಯ ರಂಗದ ಸಮಾಜ ಸೇವೆ ಇತರ ವೈದ್ಯರಿಗೆ ಮಾದರಿಯಾಗಲಿ ಎಂದು ಅಭಿಪ್ರಾಯಿಸಿದರು.
Related Articles
Advertisement
ಅತಿಥಿಯಾಗಿ ಪಾಲ್ಗೊಂಡ ಡಾ| ಅರುಣ್ ಪಾಟೀಲ್ ಅವರು, ಡಾ| ವಿ. ಎಂ. ಶೆಟ್ಟಿ ಅವರ ಯಶಸ್ಸಿನ ಹಿಂದೆ ಅವರ ಪತ್ನಿ ಹಾಗೂ ಆಸ್ಪತ್ರೆಯ ಸಿಬಂದಿಗಳ ಪಾಲು ಬಹಳಷ್ಟಿದೆ. ಇಂದು ಡೊಂಬಿವಲಿಕರ್ ಅವರು ಮಂಡಿ ನೋವಿನ ಬಗ್ಗೆ ಒಳ್ಳೆಯ ಉಪನ್ಯಾಸವನ್ನು ನೀಡಿದ್ದಾರೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯಬೇಕು. ಇಂತಹ ಸೇವೆ ರಾಜ್ಯದ ಆದಿವಾಸಿ ಕ್ಷೇತ್ರಗಳಲ್ಲಿ ಬಹಳಷ್ಟು ಅಗತ್ಯವಿದೆ. ಡೊಂಬಿವಲಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಡಾ| ವಿ. ಎಂ. ಶೆಟ್ಟಿ ಸಂತರಾಗಿ ಮೂಡಿಬರಲಿ ಎಂದರು.
ಅತಿಥಿಗಳಾಗಿ ಆಗಮಿಸಿದ ವಿಶ್ವ ಬಂಟರಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ವರಿಗೆ ಮಂಡಿ ನೋವಿನ ಸಮಸ್ಯೆಯನ್ನು ಮನಗಂಡ ಡಾ| ವಿ. ಎಂ. ಶೆಟ್ಟಿ ಅವರು ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿ ನೋವು ನಿವಾರಿಸುವ ಕಾರ್ಯಕ್ಕೆ ಮುಂದಾಗಿರುವುದು ಅಭಿನಂದನೀಯವಾಗಿದೆ ಎಂದು ನುಡಿದು ಶುಭ ಹಾರೈಸಿದರು.
ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರು ಮಾತನಾಡಿ, ಉತ್ತಮ ಗುಣಮಟ್ಟದ ಸಲಕರಣೆಯೊಂದಿಗೆ ಗುಣಮಟ್ಟದ ಸೇವೆ ನೀಡುತ್ತಿರುವ ಡಾ| ವಿ. ಎಂ. ಶೆಟ್ಟಿ ಅವರು ಅಭಿನಂದನಾರ್ಹರು. ಬಂಟರ ಸಂಘ ಈ ಸೇವೆಗೆ ಸಹಕರಿಸಲಿದೆ. ಬಂಟರ ಸಂಘ ಪ್ರತಿ ತಿಂಗಳು 3 ಲಕ್ಷ ರೂ.ಗಳನ್ನು ಆರೋಗ್ಯ ಸಂಬಂಧಿ ಚಿಕಿತ್ಸೆೆಗಳಿಗೆ ವಿತರಿಸುತ್ತಿದೆ. ಪ್ರತೀ ವರ್ಷದ ಸುಮಾರು 5 ಕೋ. ರೂ. ಸಮಾಜ ಕಲ್ಯಾಣಕ್ಕಾಗಿ ವಿತರಿಸುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.
ಕರ್ನಾಟಕ ಸಂಘ ಡೊಂಬಿವಲಿ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮಾತನಾಡಿ, ಡಾ| ವಿ. ಎಂ. ಶೆಟ್ಟಿ ಅವರು ಕೇವಲ ವೈದ್ಯರಾಗಿರದೆ ಓರ್ವ ಸಮಾಜ ಸೇವಕರಾಗಿದ್ದಾರೆ. ಕಳೆದ 20 ವರ್ಷಗಳಿಂದ ಕಷ್ಟಪಟ್ಟು ಪ್ರಾಮಾಣಿಕ ಸೇವೆಯಿಂದಾಗಿ ತನ್ನನ್ನು ತಾನು ಗುರುತಿಸಿ ಕೊಂಡು ಡೊಂಬಿವಲಿಯಲ್ಲಿ ಓರ್ವ ಉತ್ತಮ ವೈದ್ಯರಾಗಿ ಪ್ರಸಿದ್ಧರಾಗಿದ್ದಾರೆ ಎಂದರು.
ಬಂಟರ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮಾತನಾಡಿ, ವೈದ್ಯರು ದೇವರ ಪ್ರತಿರೂಪ. ಡಾ| ವಿ. ಎಂ. ಶೆಟ್ಟಿ ಆರ್ಥಿಕ ವಾಗಿ ಹಿಂದುಳಿದ ಹಿರಿಯರ ಕಣ್ಣೀರೊರೆಸುವ ದೇವತಾ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.
ಅತಿಥಿಯಾಗಿ ಪಾಲ್ಗೊಂಡ ಉಮೇಶ್ ಶೆಣೈ ಅವರು ಮಾತನಾಡಿ, ಹಿರಿಯರ ಮಂಡಿ ನೋವಿನ ಸಮಸ್ಯೆಗೆ ಡಾ| ವಿ. ಎಂ. ಶೆಟ್ಟಿ ಅವರಿಂದ ನಗೆಯ ಪರಿಹಾರ ಅಭಿನಂದನೀಯವಾಗಿದೆ ಎಂದರು. ನಗರ ಸೇವಕ ದಯಾಶಂಕರ್ ಶೆಟ್ಟಿ ಅವರು ಮಾತನಾಡಿ, ಡಾ| ಶೆಟ್ಟಿ ಅವರು ಡೊಂಬಿವಲಿ ಪರಿಸರದಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ನುಡಿದು ಶುಭ ಹಾರೈಸಿದರು.
ಡಾ| ಯೋಗಿನಿ ಶೆಟ್ಟಿ, ಸುನಂದಾ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಡಾ| ರಾಮ ಪ್ರಭು, ಡಾ| ಸುರೇಶ್ ಶೆಟ್ಟಿ, ಡಾ| ಅರುಣ್ ಪಾಟೀಲ್, ಸಚಿವ ರವೀಂದ್ರ ಚವಾಣ್, ಐಕಳ ಹರೀಶ್ ಶೆಟ್ಟಿ, ಪದ್ಮನಾಭ ಪಯ್ಯಡೆ, ಭಾಸ್ಕರ ಶೆಟ್ಟಿ ಗುರುದೇವ್, ದಿವಾಕರ ಶೆಟ್ಟಿ ಇಂದ್ರಾಳಿ, ಸುಕುಮಾರ್ ಶೆಟ್ಟಿ, ಕಲ್ಲಡ್ಕ ಕರುಣಾಕರ್ ಶೆಟ್ಟಿ, ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಉಮೇಶ್ ಪೈ, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಕಳೆದ ಇಪ್ಪತ್ತು ವರ್ಷಗಳ ಹಿಂದೆ ಹೊಸ ಭಾಷೆ, ವಿಭಿನ್ನ ಜನರ ನಡುವೆ ಹೊಸ ಸಂಸ್ಕೃತಿಯೊಂದಿಗೆ ವೈದ್ಯಕೀಯ ರಂಗವನ್ನು ಪ್ರಾರಂಭಿಸಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಯಶಸ್ಸನ್ನು ಕಂಡಿದ್ದೇನೆ. ಹಲವಾರು ಏರುಪೇರು ಈ ವೈದ್ಯಕೀಯ ರಂಗದಲ್ಲಿ ಕಂಡಿದ್ದೇನೆ. ಡಾ| ಸುರೇಶ್ ಶೆಟ್ಟಿ ಅವರ ಸಹಕಾರ ಎಂದೆಂದಿಗೂ ಮರೆಯುವಂತಿಲ್ಲ. ಕಳೆದ 12 ವರ್ಷಗಳಿಂದ ಹಲವಾರು ಶಸ್ತ್ರಚಿಕಿತ್ಸೆಗಳನ್ನು ಮಾಡಿ ರೋಗಿಗಳ ಮುಖದಲ್ಲಿ ನಗುವನ್ನು ಕಂಡಿದ್ದೇನೆ. ಆಸ್ಪತ್ರೆಯ 20 ವರ್ಷದ ಸವಿನೆನಪಿಗಾಗಿ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಸುಮಾರು 2 ಲಕ್ಷ ದಿಂದ 4 ಲಕ್ಷ ರೂ. ಗಳ ವರೆಗೆ ತಗಲುತ್ತಿದ್ದ ವೆಚ್ಚವನ್ನು ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಉಪಕರಣದೊಂದಿಗೆ ನನ್ನ ಹಾಗೂ ಇತರರ ವೆಚ್ಚವನ್ನು ಕಡಿಮೆ ಮಾಡಿ ಕೇವಲ 99 ಸಾವಿರ ರೂ. ಗಳಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ನಾವು ಸದಾ ತಯಾರಿದ್ದೇವೆ. 60 ವರ್ಷಗಳ ಅನಂತರ ಕಾಲಿನ ಮೇಲೆ ಹೆಚ್ಚಿನ ಭಾರ ಬಿದ್ದು ಸಂಧಿಗಳು ಸವೆದು ಮಂಡಿನೋವಿನ ಸಮಸ್ಯೆ ಕಾಡುತ್ತದೆ. ಇದರ ನೋವು ಸಹಿಸಲು ಆಗುವುದಿಲ್ಲ. ಹಣದ ಕೊರತೆಯಿಂದಾಗಿ ಹೆಚ್ಚಿನವರು ಈ ಶಸ್ತ್ರ ಚಿಕಿತ್ಸೆಯನ್ನು ಮಾಡುವುದಿಲ್ಲ. ಇದನ್ನು ಮನಗಂಡು ನಾನು ಕರ್ಮಭೂಮಿಯಲ್ಲಿ ಈ ತರಹದ ಸಮಾಜ ಸೇವೆಗೆ ನಾಂದಿ ಹಾಡಿದ್ದೇನೆ. ನನಗೆ ಅಮಿತಾಭ್ ಬಚ್ಚನ್ ರೋಲ್ ಮಾಡೆಲ್ ಆಗಿದ್ದು, ನಿಮ್ಮೆಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ– ಡಾ| ವಿಜಯ್ ಎಂ. ಶೆಟ್ಟಿ (ಸಿಟಿ ಹಾಸ್ಪಿಟಲ್ ಡೊಂಬಿವಲಿ ಪಶ್ಚಿಮ). ಚಿತ್ರ-ವರದಿ: ಗುರುರಾಜ ಪೋತನೀಸ್