Advertisement

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

08:38 AM Jan 21, 2022 | Team Udayavani |

ಬೆಂಗಳೂರು: ರಾಜ್ಯವನ್ನು ಭಾದಿಸುತ್ತಿರುವ ಇನ್ಫುಯೆನ್ಸಾ ಫ್ಲೂ (ಐಎಲ್‌ಐ) ಪ್ರಕರಣಗಳಲ್ಲಿ ಕೇವಲ ಶೇ. 18ರಷ್ಟು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ.

Advertisement

ಕೊರೊನಾ ಲಕ್ಷಣ ಇರುವವರ ತಪಾಸಣೆ ಮಾಡಿದಾಗ ಪರೀಕ್ಷಾ ವರದಿಯಲ್ಲಿ ಕೊರೊನಾ ಪತ್ತೆಯಾಗುತ್ತಿಲ್ಲ. ಬದಲಿಗೆ ಇನ್ಫುಯೆನ್ಸಾ ಫ್ಲೂ (ಮೈಕೈ ನೋವು, ಜ್ವರ, ತಲೆ ನೋವು, ನೆಗಡಿ) ಲಕ್ಷಣಗಳೇ ಹೆಚ್ಚು. ಹೀಗಾಗಿ, ಕೊರೊನಾಗಿಂದ ಜನರನ್ನು ಇದೇ ಹೆಚ್ಚು ಬಾಧಿಸುತ್ತಿದೆ.

ಜ. 1ರಿಂದ 20ರ ವರೆಗೆ ರಾಜ್ಯಾದ್ಯಂತ ಪರೀಕ್ಷೆಗೊಳಪಟ್ಟ 2.95 ಲಕ್ಷ ಮಂದಿಯಲ್ಲಿ 2.40 ಲಕ್ಷ ಮಂದಿ ಐಎಲ್‌ಐನಿಂದ ಬಳುತ್ತಿದ್ದಾರೆ. ಇದರ ಹೊರತಾಗಿ ಸರಕಾರದ ಗಮನಕ್ಕೆ ಬಾರದೇ ಇರುವ ಪ್ರಕರಣಗಳ ಸಂಖ್ಯೆ ಬಹಳಷ್ಟು ಇದೆ. ಪ್ರಸ್ತುತ ಬಹಳಷ್ಟು ಜನರಿಗೆ ಶೀತ, ಜ್ವರ, ತಲೆ ನೋವು, ಕೆಮ್ಮು, ಮೈ-ಕೈ ನೋವು ಲಕ್ಷಣಗಳಿದ್ದು, ಎರಡರಿಂದ ಮೂರು ದಿನದಲ್ಲಿ ಸೋಂಕು ಗುಣಮುಖವಾಗುತ್ತಿದೆ. ಸಾಮಾನ್ಯವಾಗಿ ಈ ಸೋಂಕು 7ದಿನಗಳು ತೆಗೆದುಕೊಳ್ಳುತ್ತದೆ ಎನ್ನುವುದು ವೈದ್ಯರ ಮಾತು.

ರಾಜ್ಯದಲ್ಲಿ ಹಾಸನದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಶೀತ, ಜ್ವರ, ಕೆಮ್ಮ, ತಲೆ ನೋವು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೀದರ್‌, ಉಡುಪಿ, ಬೆಂಗಳೂರು ನಗರ,ಧಾರವಾಡ, ಕೊಡಗು, ಹಾಸನ, ಮೈಸೂರು ಜಿಲ್ಲೆಯಲ್ಲಿ ಐಎಲ್‌ಐ ಪ್ರಕರಣಗಳ ಸಂಖ್ಯೆ ಶೇ. 3ರಿಂದ 5ರಷ್ಟಿದ್ದು, ಈ ಭಾಗಲ್ಲಿ ಕೊರೊನಾ ಪ್ರಕರಣಗಳ ತೀವ್ರತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next