Advertisement

ಮೈಷುಗರ್‌ ಆರಂಭಕ್ಕೆ ಪ್ರಭಾವಿಗಳ ಅಡ್ಡಿ

04:43 AM May 31, 2020 | Team Udayavani |

ನಾಗಮಂಗಲ: ಕೆಲ ರಾಜಕೀಯ ಪ್ರಭಾವಿಗಳಿಂದ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗದಂತೆ ಸಂಚು ನಡೆಯುತ್ತಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಆರೋಪಿಸಿದರು.

Advertisement

ಪಟ್ಟಣದಲ್ಲಿ ಕೆಪಿಸಿಸಿ ನೂತನ ಅಧ್ಯಕ್ಷ  ಡಿ.ಕೆ. ಶಿವಕುಮಾರ್‌ ಪದಗ್ರಹಣ ಪೂರ್ವಭಾವಿ ಸಭೆ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮೈಷುಗರ್‌ ಮತ್ತು ಪಿಎಸ್‌ ಎಸ್‌ಕೆ ಸಕ್ಕರೆ ಕಾರ್ಖಾನೆಗಳು ಜಿಲ್ಲೆಯ ರೈತರ ಜೀವನಾಡಿಯಾಗಿವೆ. ಆದರೆ, ಕೆಲ  ಪ್ರಭಾವಿಗಳ ಒಳಸಂಚಿನಿಂದಾಗಿ ಎರಡೂ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವುದಕ್ಕೆ ವಿಳಂಬವಾಗುತ್ತಿದೆ ಎಂದು ಹೇಳಿದರು.

ರೈತರಿಗೆ ಅನುಕೂಲವಾಗಲಿ: ಜನಪ್ರತಿನಿಧಿಗಳು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಪ್ರೋತ್ಸಾಹಿಸಬೇಕೆ ಹೊರತು ಅದನ್ನು ತಡೆಯುವ ಕೆಲಸ ಮಾಡಬಾರದು. ಅದು ಅವರಿಗೆ ಶೋಭೆ ತರುವುದಿಲ್ಲ.  ಯಾರೆ ಕಾರ್ಖಾನೆ ಪ್ರಾರಂಭಿ ಸಲಿ ಅದು ರೈತರಿಗೆ ಅನುಕೂಲವಾದರೆ ಸಂತೋಷ ಪಡಬೇಕು ಎಂದು ಪರೋಕ್ಷವಾಗಿ ಜೆಡಿಎಸ್‌ ನಾಯಕರ ಕಾಲೆಳೆದರು.

ಜನಪ್ರತಿನಿಧಿಗಳು ಕೇವಲ ಐದು ವರ್ಷ ಮಾತ್ರ ಅಧಿಕಾರದಲ್ಲಿರುತ್ತಾರೆ. ಈ ಅವಧಿಯಲ್ಲಿ ರೈತರಿಗೆ ಹಾಗೂ ಮತ ನೀಡಿದ ಜನ ರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಳ್ಳೆಯ ಕೆಲಸ ಮಾಡಬೇಕು. ವೈಯಕ್ತಿಕ ಹಿತದೃಷ್ಟಿಯಿಂದ ಜನಜೀವನದ ಜೊತೆ ಚೆಲ್ಲಾಟವಾಡ ಬಾರದು ಎಂದು ಟೀಕಿಸಿದರು.

ಜೂ.7ಕ್ಕೆ ಡಿಕೆಶಿ ಪದಗ್ರಹಣ: ಪ್ರದೇಶ ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆ  ಯಾಗಿ ರುವ ಮಾಜಿ ಸಚಿವ ಡಿ.ಕೆ.ಶಿವ  ಕುಮಾರ್‌ ಪದಗ್ರಹಣ ಜೂ.7ರಂದು ಬೆಂಗಳೂರಿ ನಲ್ಲಿ ನಡೆಯಲಿದೆ. ಕೊರೊನಾ ಸೋಂಕಿನ ನಿಯಂತ್ರಣಾ  ದೃಷ್ಟಿಯಿಂದ ಅದೂರಿ ಸಮಾರಂಭ ಆಯೋಜಿಸಲು ಸಾಧ್ಯವಾಗುತ್ತಿ ಲ್ಲ. ಬೆಂಗಳೂರಿನ ಕೆಪಿಸಿಸಿ ಕಚೇರಿ  ಯಲ್ಲಿ ಸರಳ ಸಮಾರಂಭ ಆಯೋಜಿಸಲಾಗಿದೆ.

Advertisement

ಈ ಸಮಾರಂಭದ ದೃಶ್ಯಗಳನ್ನು ಗ್ರಾಪಂ ಮಟ್ಟದಲ್ಲಿ ಎಲ್‌ಇಡಿ ಪರದೆಗಳ  ಮೂಲಕ ನೇರ ಪ್ರಸಾರ ಮಾಡಿಸಲಾಗು ವುದು. ಪಕ್ಷದ ಕಾರ್ಯಕರ್ತರು, ಡಿಕೆಶಿ ಅಭಿ  ಮಾನಿಗಳು ಸಾಮಾಜಿಕ ಅಂತರ ಕಾಯ್ದು ಕೊಂಡು ಸಮಾರಂಭವನ್ನು ವೀಕ್ಷಿಸಬೇಕೆಂದು ಮನವಿ ಮಾಡಿದರು. ಕೆಪಿಸಿಸಿ ಪ್ರಧಾನ ಕಾರ್ಯìದರ್ಶಿ  ಸಂಪಂಗಿ, ಕೆಪಿಸಿಸಿ ವೀಕ್ಷಕ ಜಯರಾಮ್‌, ವಿಜಯಕುಮಾರ್‌ಸಿಂಹ, ಜಿಲ್ಲಾ ಕಾಂಗ್ರೆಸ್‌ ವೀಕ್ಷಕಿ ರಶ್ಮಿ, ಜಿಲ್ಲಾಧ್ಯಕ್ಷ ಗಂಗಾಧರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನ, ಕೃಷ್ಣೇಗೌಡ, ರಾಜೇಶ್‌ ಹಾಜರಿದ್ದರು.

ಮನವಿಗೆ ಸ್ಪಂದಿಸಿರುವ ಸಿಎಂ: ನಾನು ಪ್ರಸ್ತುತ ಚುನಾಯಿತ ಪ್ರತಿನಿಧಿ ಯಲ್ಲದಿದ್ದರೂ ಜಿಲ್ಲೆಯ ಜನರ ಋಣ ನನ್ನ ಮೇಲಿರುವುದಲ್ಲದೆ ರೈತರ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಸುಧೀರ್ಘ‌ವಾಗಿ ಚರ್ಚಿಸಿ,  ಕಾರ್ಖಾನೆಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಸ್ಪಂದಿಸಿರುವ ಸಿಎಂ ಜಿಲ್ಲೆಯ ಎರಡೂ ಕಾರ್ಖಾನೆಗಳನ್ನು ಶೀಘ್ರದಲ್ಲಿಯೇ ಪ್ರಾರಂಭ ಮಾಡುವು ದಾಗಿ ಭರವಸೆ ನೀಡಿದ್ದಾರೆ ಎಂದು ಮಾಜಿ ಸಚಿವ ಚಲುವನಾರಾಯಣ ಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next