Advertisement

Viral: ಅಯೋಧ್ಯೆ ರಾಮಮಂದಿರ ಭೇಟಿ ಮಾಡುವ ಸೆಕ್ಯೂರಿಟಿ ಗಾರ್ಡ್‌ ಕನಸನ್ನು ನನಸಾಗಿಸಿದ ಯುವಕ

05:36 PM Jun 05, 2024 | Team Udayavani |

ನವದೆಹಲಿ: ವ್ಯಕ್ತಿಯೊಬ್ಬನ ʼರಾಮ ಮಂದಿರʼ ಭೇಟಿಯ ಕನಸನ್ನು ಸೋಶಿಯಲ್‌ ಮೀಡಿಯಾ ಪ್ರಭಾವಿ ಯುವಕನೊಬ್ಬ ನನಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಅನೀಶ್ ಭಗತ್  ಎನ್ನುವ ಸೋಶಿಯಲ್‌ ಮೀಡಿಯಾ ಪ್ರಭಾವಿ 65 ವರ್ಷದ ವ್ಯಕ್ತಿಯ ಕನಸನ್ನು ನನಸಾಗಿಸಿದ್ದಾರೆ.

ಸೆಕ್ಯೂರಿಟ್‌ ಗಾರ್ಡ್‌ ಆಗಿ ಕೆಲಸ ಮಾಡುವ ಬಯಾಸ್ ಜಿ ಅವರ ಬಳಿ ಮೊಬೈಲ್‌(ವ್ಲಾಗ್) ಹಿಡಿದುಕೊಂಡು ಹೋದ ಅನೀಶ್‌ “ಈ ವಯಸ್ಸಿನಲ್ಲಿ ನೀವ್ಯಾಕೆ ಕೆಲಸ ಮಾಡುತ್ತಿದ್ದೀರಿ?” ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೆ ಬಯಾಸ್‌  ಅವರು, “ನನಗೆ ಒಬ್ಬನೇ ಮಗನಿದ್ದಾನೆ ಅವನು ನನ್ನನು ದೂರ ಮಾಡಿದ್ದಾನೆ” ಎಂದಿದ್ದಾರೆ.

“ಒಂದು ದಿನದ ಮಟ್ಟಿಗೆ ನೀವು ನನ್ನನ್ನೇ ಮಗನೆಂದು ತಿಳಿದುಕೊಂಡು ನಿಮ್ಮ ಆಸೆಗಳೇನು ಎನ್ನುವುದನ್ನು ನನ್ನ ಬಳಿ ಹೇಳಿಕೊಳ್ಳಿ” ಎಂದು ಅನೀಶ್‌ ಕೇಳಿದ್ದಾರೆ.

ಅನೀಶ್‌ ಮಾತಿಗೆ ಮೊದಲು ಹಿಂಜರಿದ ಬಯಾಸ್‌ ಆ ಬಳಿಕ “ನನ್ನ ಮಗನ ಜೊತೆ ನನಗೆ ರಾಮ ಮಂದಿರ ಭೇಟಿ ನೀಡುವ ಕನಸಿದೆ” ಎಂದು ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

Advertisement

ಇದನ್ನು ಕೇಳಿದ ಬಳಿಕ ಅದೇ ದಿನ ರಾತ್ರಿ ಅನೀಶ್‌ ಟಿಕೆಟ್‌ ಬುಕ್‌ ಮಾಡಿ  ಬಯಾಸ್‌ ಅವರಿಗೆ ಕರೆ ಮಾಡಿದ್ದಾರೆ. “ನಾವು ಅಯೋಧ್ಯೆಗೆ ತಡವಾಗುತ್ತಿದ್ದೇವೆ” ಎಂದಿದ್ದಾರೆ. ಖುಷಿಯಿಂದ ಅನೀಶ್‌ ತನ್ನ ಬಟ್ಟೆಗಳನ್ನೆಲ್ಲ ಪ್ಯಾಕ್‌ ಮಾಡಿ ಅನೀಶ್‌ ಅವರೊಂದಿಗೆ ʼರಾಮಲಲ್ಲಾʼನ ದರ್ಶನಕ್ಕೆ ತೆರೆಳಿದ್ದಾರೆ.

ಪುಣೆಯಿಂದ ಲಕ್ನೋಗೆ ಜೀವನದಲ್ಲಿ ಮೊದಲ ಬಾರಿಗೆ ಅವರು ವಿಮಾನವನ್ನು ಹತ್ತಿದ್ದಾರೆ. ಪಯಣದ ಸಂದರ್ಭದಲ್ಲಿನ ಬಯಾಸ್‌ ಜೀ ಅವರ ಸಂತಸವನ್ನು, ರಾಮಲಲ್ಲಾನನ್ನು ನೋಡುವಾಗಿನ ಉಲ್ಲಾಸವನ್ನು, ಹುಮ್ಮಸ್ಸನ್ನು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋಗೆ ಭಾರೀ ಮೆಚ್ಚುಗೆ ಆಗಿದ್ದು, ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next