Advertisement
ವಾಡಿಕೆಯಂತೆ ಮಳೆಗಾಲ ಆರಂಭವಾಗಿ ತಿಂಗಳು ಗತಿಸಿದರೂ ಆಲಮಟ್ಟಿಯ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಿರಲಿಲ್ಲ. ವರುಣನ್ನು ನಂಬಿ ರೈತರು ಬಿತ್ತನೆ ಮಾಡಬೇಕೆಂದರೂ ಸಮರ್ಪಕವಾಗಿ ರೋಹಿಣಿ ಹಾಗೂ ಮೃಗಶಿರಾ ಮಳೆ ಆಗದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಿಲ್ಲ.
Related Articles
Advertisement
ಕೃಷ್ಣಾ ಮೇಲ್ದಂಡೆ ಯೋಜನೆಯ ಅವಳಿ ಜಲಾಶಯಗಳಾಗಿರುವ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಮತ್ತು ನಾರಾಯಣಪುರದ ಬಸವಸಾಗರಗಳ ವ್ಯಾಪ್ತಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನ ವ್ಯಾಪ್ತಿಯ ಎಲ್ಲ ಫಲಾನುಭವಿ ಜಿಲ್ಲೆಗಳ ಸುಮಾರು 6.22 ಲಕ್ಷ ಹೆಕ್ಟೇರ್ ಪ್ರದೇಶ ನೀರಾವರಿಗೊಳಪಡಲಿದೆ.
ಈಗ ಆರಂಭವಾಗಿರುವ ಒಳ ಹರಿವಿನಲ್ಲಿ ವ್ಯಾಪಕವಾಗಿ ಏರಿಕೆಯಾದರೆ 8-10ದಿನಗಳಲ್ಲಿಯೇ ಜಲಾಶಯಗಳು ಭರ್ತಿಯಾಗಲಿವೆ ಎನ್ನುವುದು ರೈತರ ಲೆಕ್ಕಾಚಾರ. 519.60 ಮೀ. ಗರಿಷ್ಠ ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಶನಿವಾರ 513.15 ಮೀ. ಎತ್ತರವಾಗಿ 48.489 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 3,691ಕ್ಯೂಸೆಕ್ ನೀರು ಒಳ ಹರಿವು ಮತ್ತು ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಭಾಷ್ಪಿಭವನ ಸೇರಿ 451ಕ್ಯೂಸೆಕ್ ನೀರು ಹೊರ ಹೋಗುತ್ತಿದೆ.