Advertisement
ದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ಮಾಡಿ, ಹೆಚ್ಚು ಖರೀದಿಗೂ ಉತ್ತೇಜನ ಮಾಡಲಾಗಿತ್ತು. ಆದರೆ ಈಗ ಹೆಚ್ಚುತ್ತಿರುವ ಹಣದುಬ³ರವನ್ನು ಗಮನದಲ್ಲಿಟ್ಟುಕೊಂಡು ರೆಪೋದರವನ್ನು 40 ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ. ಹಾಗಾದರೆ ರೆಪೋ ದರ ಏರಿಕೆ ಮಾಡಿದರೆ, ಹಣದುಬ್ಬರ ಇಳಿಯುತ್ತಾ? ಈ ಕುರಿತ ಒಂದು ತಿಳಿಸಾರ ಇಲ್ಲಿದೆ…
Related Articles
Advertisement
ಹೆಚ್ಚುತ್ತಿರುವ ಹಣದುಬ್ಬರ, ರಷ್ಯಾ-ಉಕ್ರೇನ್ ಕಾಳಗ, ಕಚ್ಚಾತೈಲದ ದರ ಹೆಚ್ಚಳ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್‌ಬಿಐ ರೆಪೋ ದರ ಏರಿಕೆ ಮಾಡಿದೆ.
ಈಗ ಹಣದುಬ್ಬರ ಕಡಿಮೆಯಾಗುತ್ತದೆಯೇ?
ಕಡಿಮೆಯಾಗಬಹುದು ಎಂಬುದು ಆರ್‌ಬಿಐ ಆಶಾವಾದ. ಸದ್ಯ ಜಗತ್ತಿನಾದ್ಯಂತ ಕಾಡುತ್ತಿರುವುದು ಪೂರೈಕೆ ಆಧರಿತ ಹಣದುಬ್ಬರ. ಅಂದರೆ ನಮ್ಮ ಅಗತ್ಯಕ್ಕೆ ತಕ್ಕಂತೆ, ವಸ್ತುಗಳ ಪೂರೈಕೆಯಾಗುತ್ತಿಲ್ಲ. ರೆಪೋ ದರ ಹೆಚ್ಚಳ ಮಾಡಿ, ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸಿದರೆ, ಜನ ಬ್ಯಾಂಕುಗಳಿಂದ ಸಾಲ ಪಡೆಯುವುದಿಲ್ಲ. ಆಗ, ಖರೀದಿಸುವವರ ಸಂಖ್ಯೆ ಇಳಿಯುತ್ತದೆ. ಇಂಥ ವೇಳೆ, ಬೇಡಿಕೆ ಇಲ್ಲದ ಕಾರಣದಿಂದಾಗಿ ವಸ್ತುಗಳ ದರವೂ ಇಳಿಕೆಯಾಗುತ್ತದೆ. ಒಂದು ವೇಳೆ ರೆಪೋ ದರ ಹೆಚ್ಚಳ ಮಾಡದೇ ಹೋದರೆ ಜನರ ಕಡೆ ಹಣದ ಹರಿವು ಹೆಚ್ಚಾಗಿ ವಸ್ತುಗಳಿಗೆ ಮತ್ತಷ್ಟು ಬೇಡಿಕೆ ಬರುತ್ತದೆ. ಆಗ ಆ ವಸ್ತುಗಳ ದರ ಹೆಚ್ಚಾಗಿ ಹಣದುಬ್ಬರ ಉಂಟಾಗುತ್ತದೆ ಎಂದು ಹೇಳುತ್ತಾರೆ ಆರ್ಥಿಕ ತಜ್ಞರು.