Advertisement

ಪಾಕ್‌ ಹಣದುಬ್ಬರ ಏಷ್ಯಾದಲ್ಲೇ ಅಧಿಕ

11:37 PM May 02, 2023 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ಥಾನದ ಪಾಡು ನೆರೆಯ ಶ್ರೀಲಂಕಾವನ್ನೂ ಮೀರಿಸುವ ಹಂತ ತಲುಪಿದೆ.

Advertisement

ರೂಪಾಯಿ ಮೌಲ್ಯ ಕುಸಿತ­ದೊಂದಿಗೆ ಏಷ್ಯಾದಲ್ಲೇ ಅತೀ ವೇಗದ ಹಣದುಬ್ಬರ ದಾಖಲಿಸುತ್ತಿರುವ ರಾಷ್ಟ್ರವಾಗಿ ಗುರುತಿಸಿ­ಕೊಂಡಿದೆ.

ಪಾಕಿಸ್ಥಾನದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಗ್ರಾಹಕ ಬೆಲೆಗಳು ಏಪ್ರಿಲ್‌ನಲ್ಲಿ ಶೇ.36.4ರಷ್ಟು ಏರಿಕೆ ಕಂಡಿವೆ ಇದು 1964ರಿಂದ ಈ ವರೆಗಿನ ಅತಿಹೆಚ್ಚು ಏರಿಕೆಯಾಗಿದೆ.

ಇದೇ ಮಾದರಿಯ ಬಿಕ್ಕಟ್ಟಿಗೆ ತುತ್ತಾಗಿರುವ ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಶೇ.35.3 ಆಗಿದೆ. ಪಾಕಿಸ್ಥಾನದಲ್ಲಿ ಸಾರಿಗೆ ಶುಲ್ಕಗಳು ಶೇ.56.8, ಆಹಾರ ಹಣದುಬ್ಬರ ಪ್ರಮಾಣ ಶೇ.48.1, ಬಟ್ಟೆ ಹಾಗೂ ಪಾದರಕ್ಷೆಗಳ ಬೆಲೆ ಶೇ.21.6 ಹಾಗೂ ವಸತಿ, ನೀರು, ವಿದ್ಯುತ್‌ ಬೆಲೆ ಶೇ.16.19 ಈಗಾಗಲೇ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next