Advertisement
ಹಲವು ಸಮಯಗಳಿಂದ ಬಂಡಿಮಠ ಬಸ್ ನಿಲ್ದಾಣದ ಬೀದಿದೀಪ ಉರಿಯುತ್ತಿಲ್ಲ. ದೀಪಗಳಿಲ್ಲದ್ದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಬಸ್ ನಿಲ್ದಾಣದಲ್ಲಿ ಬಸ್‌ಗೆ ಕಾಯಲು ಭಯ ಪಡುವಂತಾಗಿದೆ.
ಬಸ್ ನಿಲ್ದಾಣ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಹೈಮಾಸ್ಟ್ ದೀಪ ಅಳವಡಿಸ ಲಾಗಿತ್ತು. ಅದರಲ್ಲಿರುವ ಬಲ್ಬ್ಗಳೆಲ್ಲ ಹಲವು ಸಮಯದಿಂದ ಕೆಟ್ಟು ಹೋಗಿವೆ. ದುರಸ್ತಿಗೆಂದು ಹೈಮಾಸ್ಟ್ ದೀಪದ ಕಂಬದಲ್ಲಿ ಬಲ್ಬ್ಗಳಿರುವ ಯುನಿಟ್ ಅನ್ನು ಕೆಳಗಿಳಿಸಿ ದುರಸ್ತಿ ನಡೆಸದೆ ಹಾಗೆಯೇ ಬಿಡಲಾಗಿದೆ.
Related Articles
Advertisement
ರಾತ್ರಿ ಮದ್ಯ ಸೇವನೆ ಮಾಡಿ ಸುತ್ತಾಡುವುದು, ಸಾರ್ವಜನಿಕ ಸ್ಥಳ ಗಳಲ್ಲಿ ಸಿಗರೇಟು, ಬೀಡಿ ಸೇದುವುದು ಇಲ್ಲಿ ಸಾಮಾನ್ಯವಾಗಿದೆ. ಬಸ್ ನಿಲ್ದಾಣದ ಒಳಗೆ ಕೆಲವರು ಮಲಗಿರುತ್ತಾರೆ.
ಸ್ವಚ್ಛತೆ ಕೊರತೆ ಬಸ್ ನಿಲ್ದಾಣ ಪರಿಸರದಲ್ಲಿ ಸ್ವಚ್ಛತೆ ಕೊರತೆಯೂ ಕಂಡು ಬರುತ್ತಿದೆ. ಪರಿಸರದ ಅಲ್ಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖಾಲಿ ಮದ್ಯದ ಬಾಟಲಿಗಳು ಬಿದ್ದಿವೆ. ಬೀಡಿ, ಸಿಗರೇಟು ತುಂಡುಗಳನ್ನು ಎಸೆಯಲಾಗಿದೆ. ಲಾಕ್‌ಡೌನ್ ಬಳಿಕ ಬಸ್ ಸಂಚಾರ ಎಂದಿನಂತೆ ಇದೆ. ಆದರೆ ಬೆಳಕು ಇನ್ನಿತರ ಕೆಲ ಮೂಲ ಸೌಕರ್ಯ ಕೊರತೆಯಿಂದ
ಹೆಣ್ಣುಮಕ್ಕಳು ಇತ್ತ ಸುಳಿಯಲು ಹಿಂದೇಟು ಹಾಕುತ್ತಿದ್ದಾರೆ. ಬೆಳಕಿನ ವ್ಯವಸ್ಥೆ ಜತೆಗೆ ರಾತ್ರಿ ಇಲ್ಲಿ ಮದ್ಯ ಸೇವನೆ ಮಾಡುವುದಕ್ಕೆ ನಿಯಂತ್ರಣ ಹೇರಬೇಕಿದೆ ಎನ್ನುತ್ತಾರೆ ಪ್ರಯಾಣಿಕರು. ಕೊಟೇಶನ್ ಸಿದ್ಧ
ಬಂಡಿಮಠ ಬಸ್ ನಿಲ್ದಾಣದಲ್ಲಿ ಹೈಮಾಸ್ಟ್ ದೀಪ ದುರಸ್ತಿಗೆ ಕೊಟೇಶನ್ ಸಿದ್ಧವಾಗಿದೆ. ದುರಸ್ತಿಗೆಂದು ಕಂಬದಿಂದ ಬಲುºಗಳನ್ನು ಕೆಳಗೆ ಇಳಿಸಲಾಗಿದೆ. ಶೀಘ್ರ ಇದರ ದುರಸ್ತಿ ನಡೆಸಲಾಗುವುದು.
-ಪದ್ಮನಾಭ, ಎಂಜಿನಿಯರ್ , ಪುರಸಭೆ, ಕಾರ್ಕಳ