Advertisement

ಇನ್ಫಿ ಮೂರ್ತಿ ನಮ್ಮ ಹಿತೈಷಿ, ಪಾಲುದಾರರೂ ಹೌದು

08:25 AM Jul 27, 2017 | Harsha Rao |

ಮುಂಬಯಿ: ಇನ್ಫೋಸಿಸ್‌ ಸಂಸ್ಥಾಪಕ ಡಾ| ಎನ್‌.ಆರ್‌.ನಾರಾಯಣ ಮೂರ್ತಿ ಅವರನ್ನು ಹಿತೈಷಿ ಎಂದುಕೊಂಡಿದ್ದೇವೆಯೇ ಹೊರತು, ಎಂದೂ ಪಾಲುದಾರ ಎನ್ನುವ ರೀತಿಯಲ್ಲಿ ನೋಡಿಯೇ ಇಲ್ಲ’ ಎಂದು ಕಂಪೆನಿ ಸಹ ಅಧ್ಯಕ್ಷ ರವಿ ವೆಂಕಟೇಶನ್‌ ಹೇಳಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು, “ಮೂರ್ತಿ ಅವರನ್ನು ಕಂಪೆನಿಯ ಹಿತೈಷಿಯಾಗಿ ನೋಡಲು ನಾವೆಲ್ಲ ಇಷ್ಟಪಡುತ್ತೇವೆ. ಮುಂದೆ ಯೂ ಇದೇ ಮಾದರಿಯಲ್ಲಿ ನೋಡುತ್ತೇವೆ’ ಎಂದಿದ್ದಾರೆ.

Advertisement

ನಾರಾಯಣಮೂರ್ತಿಯವರನ್ನು  ಎ ಅಥವಾ ಬಿ ಎನ್ನುವ ಹಣೆಪಟ್ಟಿ ಇಟ್ಟು ನಾವು ನೋಡಿಲ್ಲ. ನೋಡುವುದೂ ಇಲ್ಲ.

ಕಂಪೆನಿಯ ಪ್ರತಿಯೊಂದು ಹೆಜ್ಜೆಯಲ್ಲಿ ಅವರ ಸಲಹೆ, ಮಾರ್ಗದರ್ಶನ ಇದ್ದೇ ಇರುತ್ತದೆ’ ಎಂದು ಹೇಳಿದ್ದಾರೆ. ಮೂರ್ತಿ ಅವರು ಕಂಪೆನಿ ಸಂಸ್ಥಾಪಕರಷ್ಟೇ ಅಲ್ಲ. ಸಲಹೆಗಾರ ರಾಗಿ ಕಂಪೆನಿ ಜತೆ ಬಾಂಧವ್ಯ ಉಳಿಸಿಕೊಂಡಿದ್ದು, ಅದು ಮುಂದೆಯೂ ಹಾಗೇ ಇರಲಿದೆ ಎಂದಿದ್ದಾರೆ. ಇನ್ಫೋಸಿಸ್‌ ಕಾರ್ಪೊರೇಟ್‌ ಆಡಳಿತದ ಗುಣಮಟ್ಟದ ಬಗ್ಗೆ ಮೂರ್ತಿ ಅವರು ಪರೋಕ್ಷ ಆರೋಪ ಮಾಡುತ್ತಿರುವ ಹಿನ್ನೆಲೆಯಲ್ಲಿ ವೆಂಕಟೇಶನ್‌ ಹೇಳಿಕೆಗೆ ಮಹತ್ವ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next