Advertisement

ಮಲೇಬೆನ್ನೂರಲ್ಲಿ ಇಬ್ಬರಿಗೆ ಸೋಂಕು

10:42 AM Jul 28, 2020 | Suhan S |

ಮಲೇಬೆನ್ನೂರು: ಪಟ್ಟಣದಲ್ಲಿ ಸೋಮವಾರ 2 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿದ್ದು, ಒಬ್ಬರನ್ನು ಹರಿಹರ ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಿಕೊಡಲಾಗಿದ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಲಕ್ಷ್ಮೀದೇವಿ ತಿಳಿಸಿದ್ದಾರೆ.

Advertisement

ಹರಳಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ಪುರುಷನಿಗೆ ಪಾಸಿಟಿವ್‌ ಬಂದಿದೆ. ಆತನಿಗೆ ಕೋವಿಡ್ 19 ಲಕ್ಷಣಗಳಿಲ್ಲ. ಹಾಗಾಗಿ ಆತನಿಗೆ ಮತ್ತು ಮನೆಯಲ್ಲಿರುವ 4 ಜನರಿಗೆ ಐಸೋಲೇಷನ್‌ನಲ್ಲಿರುವಂತೆ ತಿಳಿಸಲಾಗಿದೆ. ಮತ್ತೂಬ್ಬ ವ್ಯಕ್ತಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಆತ ಪ್ರತಿದಿನ ದಾವಣಗೆರೆಯಿಂದ ಬಂದು ಹೋಗುತ್ತಿದ್ದ. ಜು. 22ರಂದು ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು. ಆತನಿಗೆ ಇಂದು ಪಾಸಿಟಿವ್‌ ಇರುವುದು ದೃಢಪಟ್ಟಿದ್ದು, ಗುತ್ತೂರಿನಲ್ಲಿರುವ ಕೋವಿಡ್ ಕೇರ್‌ ಸೆಂಟರ್‌ಗೆ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next