Advertisement

ಹೊರಗಿನಿಂದ ಬಂದವರಿಗೇ ಸೋಂಕು ಹೆಚ್ಚು

06:49 AM May 24, 2020 | Lakshmi GovindaRaj |

ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್‌ 19  ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಪೊಲೀಸರ ಹದ್ದಿನ ಕಣ್ಣು ತಪ್ಪಿಸಿ ಹೊರ ರಾಜ್ಯದಿಂದ ಜಿಲ್ಲೆಗೆ ಕಳ್ಳದಾರಿಯಲ್ಲಿ ಬರು ತ್ತಲೇ ಇದ್ದಾರೆ. ನಗರದಲ್ಲಿದ್ದ ಸೋಂಕು ಹಳ್ಳಿ  ಗಳತ್ತ ಮುಖ ಮಾಡಿದೆ. ಇನ್ನು ಸಮು ದಾಯದಲ್ಲಿ ಹರಡಿದರೆ ಏನು ಗತಿ ಎನ್ನುವ ಆತಂಕ ಜಿಲ್ಲೆಯ ಜನರಲ್ಲಿ ಹೆಚ್ಚಿದೆ.

Advertisement

ಹಳ್ಳಿಗಳತ್ತ ಕೋವಿಡ್‌ 19 ಮುಖ: ಹೊರ ರಾಜ್ಯ, ಜಿಲ್ಲೆಯಿಂದ ಬರುವವರ ಮೇಲೆ ಪೊಲೀಸರು ಹದ್ದಿನ  ಕಣ್ಣಿಟ್ಟಿದ್ದಾರೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ಜಿಲ್ಲೆಗೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಗಡಿ ನುಸುಳಿ ಹಳ್ಳಿಗಳ ಮೂಲಕ ತಮ್ಮ ಗ್ರಾಮಗಳಿಗೆ ಬರುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕು ಕಾಣಿಸಿ  ಕೊಂಡಿರುವುದು ರೋಗ ಹರಡುತ್ತಿರುವುದು ಬೇರೆ ಭಾಗದಿಂದ ಜಿಲ್ಲೆಗೆ ಬಂದಿರುವವರಿಂದಲೇ ಆಗಿದ್ದು, ಈಗ ಮೂಲ ನಿವಾಸಿಗಳಿಗೆ ಸೋಂಕು ಕಾಣಿಸಿ ಕೊಳ್ಳುತ್ತಿದೆ, ಇದರ ಜೊತೆಗೆ ಸೋಂಕಿನ ಸಂಪರ್ಕದಲ್ಲಿ ಇದ್ದವರಿಗೆ ಕೋವಿಡ್‌ 19  ತನ್ನ ಕಬಂದ ಬಾಹು ಚಾಚಿದೆ.

ದಿಢೀರನೇ ಸೋಂಕು ಹೆಚ್ಚು: ಸೋಂಕು ಪ್ರಕರಣಗಳು ಕಡಿಮೆ ಇದ್ದ ಜಿಲ್ಲೆಯಲ್ಲಿ ಈಗ ದಿಢೀರನೆ ಹೆಚ್ಚುತ್ತಿರುವುದು ಪ್ರತಿದಿನ ಹೊರ ರಾಜ್ಯಗಳಿಂದ ಜಿಲ್ಲೆಗೆ ಬಂದವರಿಗೆ ಸೋಂಕು  ಕಾಣಿಸಿ ಕೊಳ್ಳುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ  ಕಾರಣವಾಗಿದೆ.

ಮುಂಬೈ ನಂಟು: ಮುಂಬೈನಿಂದ ಬಂದಿದ್ದ ಪಿ-1401, 28 ವರ್ಷದ ಮಹಿಳೆ, 1402, 30 ವರ್ಷದ ಮಹಿಳೆ, ಪಿ-1403, 10 ವರ್ಷದ ಹುಡುಗ, ಪಿ-1404, 12 ವರ್ಷದ ಹುಡುಗಿ ಗೆ ಕಾಣಿಸಿ ಕೊಂಡಿತ್ತು. ಇವರೆಲ್ಲರೂ ಮುಂಬೈ  ನಿಂದ ಬಂದವರೇ  ಆಗಿದ್ದರು. ಈಗ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ತುಮಕೂರಿನ ಖಾದರ್‌ ನಗರ ನಿವಾಸಿ ಲಾರಿ ಚಾಲಕ ಪಿ.1561 ಮುಂಬೈಗೆ ಹೋಗಿ ಬಂದು ಮನೆ ಸೇರಿದ್ದ ಆತನನ್ನು ಪತ್ತೆ ಹಚ್ಚಿ ಪರೀಕ್ಷಿಸಿದಾಗ ಕೋವಿಡ್‌ 19 ಇರುವುದು ದೃಢವಾಗಿದೆ.  ಇನ್ನೂ 1,243 ಜನರ ಮಾದರಿ ವರದಿ ಲ್ಯಾಬ್‌ ನಿಂದ ಬರಬೇಕಾಗಿದ್ದು, ಈ ವರದಿಯಲ್ಲಿ ಇನ್ನೂ ಎಷ್ಟು ಜನರಿಗೆ ಸೋಂಕು ಇದೆಯೋ ಎನ್ನುವ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ.

ಆಂಧ್ರದಿಂದ 133 ಮಂದಿ ಆಗಮನ: ಈವರೆಗೂ ಹೊರ ರಾಜ್ಯಗಳಿಂದ 462 ಮಂದಿ ಜಿಲ್ಲೆಗೆ ಬಂದಿದ್ದು, ಇವರಲ್ಲಿ ಆಂಧ್ರಪ್ರದೇಶದಿಂದಲೇ ಅತಿ ಹೆಚ್ಚು 133 ಮಂದಿ, ಮಹಾರಾಷ್ಟ್ರದಿಂದ 113, ತಮಿಳು ನಾಡಿನಿಂದ 103 ಜನರು  ಬಂದಿದ್ದಾರೆ. ಹೊರ ರಾಜ್ಯದಿಂದ ಬಂದವರೆಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸ ಲಾಗಿದ್ದು, ವರದಿ ಬರಬೇಕಾಗಿದೆ. ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್‌ ಮಾಡಲಾಗಿದೆ . ಈ ವರೆಗೆ 8,417 ಜನರ  ಗಂಟಲು ದ್ರವ ಪರೀಕ್ಷೆ ನಡೆದಿದೆ, ಅದರಲ್ಲಿ 7,112 ಜನರ ವರದಿ ನೆಗೆಟಿವ್‌ ಎಂದು ಬಂದಿದೆ, ಈಗ 2,049 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದ್ದು, 900 ಜನ ಐಸೋಲೇಷನ್‌ ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ನಗರದ ಪಿಎಚ್‌ ಕಾಲೋನಿಯನ್ನು ನಿಯಂತ್ರಿತ ವಲಯ ಕಂಟೈನ್ಮೆಂಟ್‌ ಜೋನ್‌ ನಿಂದ ತೆರವುಗೊಳಿಸಲಾಗಿದೆ. ಕಳೆದ 28 ದಿನಗಳಿಂದ ಪಿಎಚ್‌ ಕಾಲೋನಿಯಲ್ಲಿ ಯಾವುದೇ ಕೋವಿಡ್‌-19 ಪ್ರಕರಣ ವರದಿಯಾಗದೆ ಇರುವುದರಿಂದ ಈ  ಕ್ರಮ ಕೈಗೊಳ್ಳಲಾಗಿದೆ.
-ಡಾ.ಕೆ.ರಾಕೇಶ್‌ಕುಮಾರ್‌, ಜಿಲ್ಲಾಧಿಕಾರಿ

* ಚಿ.ನಿ.ಪುರುಷೋತ್ತಮ್

Advertisement

Udayavani is now on Telegram. Click here to join our channel and stay updated with the latest news.

Next