Advertisement

ಕೆಎಸ್‌ಆರ್‌ಪಿ ಪೇದೆಗೂ ತಗುಲಿತು ಸೋಂಕು

03:45 PM Jul 03, 2020 | Suhan S |

ಬೆಳಗಾವಿ: ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೂ ಜಿಲ್ಲೆಯಲ್ಲಿ ವ್ಯಾಪಿಸುತ್ತಿದ್ದು, 45 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗುವುದರ ಜತೆಗೆ ಮತ್ತೆ 7 ಹೊಸ ಪ್ರಕರಣಗಳು ಗುರುವಾರ ದೃಢಪಟ್ಟಿವೆ.

Advertisement

ಪತ್ತೆಯಾದ 7 ಜನರ ಪೈಕಿ ಬೆಳಗಾವಿ ನಗರದ 46 ವರ್ಷದ ಕೆಎಸ್‌ಆರ್‌ಪಿ ಪೇದೆಗೂ ಸೋಂಕು ತಗುಲಿದೆ. ಪೇದೆ ನಿಪ್ಪಾಣಿ ಬಳಿಯ ಕೊಗನೊಳ್ಳಿ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯ ಮುಗಿಸಿ ಬಂದ ಬಳಿಕ ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಜೂ.30ರಂದು ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕೇರಳ ರಾಜ್ಯದಿಂದ ಬಂದ 27 ವರ್ಷದ ಯುವಕ, ಮಹಾರಾಷ್ಟ್ರದಿಂದ ಆಗಮಿಸಿದ್ದ 35 ವರ್ಷದ ವ್ಯಕ್ತಿ, ಗುಜರಾತ್‌ದಿಂದ ಬಂದ 54 ವರ್ಷದ ವ್ಯಕ್ತಿ, ಮಹಾರಾಷ್ಟ್ರದಿಂದ ಆಗಮಿಸಿದ್ದ 52 ವರ್ಷದ ವ್ಯಕ್ತಿ ಬೆಳಗಾವಿ ನಗರಕ್ಕೆ ಆಗಮಿಸಿದ್ದರು. ಗೋಕಾಕನ 8 ವರ್ಷದ ಬಾಲಕಿಗೆ ಸೋಂಕು ದೃಢವಾಗಿದೆ.

ಜತೆಗೆ 45 ವರ್ಷದ ಅಥಣಿಯ ವ್ಯಕ್ತಿ ಕೋವಿಡ್ ದಿಂದ ಬಲಿಯಾಗಿದ್ದಾರೆ. ಈ ಹೊಸ ಎಂಟು ಪ್ರಕರಣಗಳಿಂದ ಜಿಲ್ಲೆಯಲ್ಲಿ 338 ಸೋಂಕಿತರು ಆಗಿದ್ದು, ಇದರ ಪೈಕಿ 306 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ -19 ವಾರ್ಡ್‌ ನಲ್ಲಿ ಸದ್ಯ 29 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 345ಕ್ಕೇರಿದ್ದು, ಇದರಲ್ಲಿ 306 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌-19 ವಾರ್ಡ್‌ನಲ್ಲಿ ಸದ್ಯ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next