Advertisement
ಮಲಪ್ಪುರಂ-4, ಕಣ್ಣೂರು, ಕೋಯಿಕ್ಕೋಡ್, ಪಾಲಾಟ್ ತಲಾ 2, ಕಾಸರಗೋಡು, ತೃಶ್ಶೂರ್, ಕೊಲ್ಲಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ತಲಾ ಒಬ್ಬರನ್ನು ಸೋಂಕು ಬಾಧಿ ಸಿದೆ. ರಾಜ್ಯದಲ್ಲಿ ಒಟ್ಟು 101 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೆ 497 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರಲ್ಲಿ ಇಬ್ಬರು ಕುವೈಟ್ ಮತ್ತು ಯುಎಇಯಿಂದ ಬಂದವರು. ಉಳಿದ 10 ಮಂದಿ ಅನ್ಯರಾಜ್ಯಗಳಿಂದ ಬಂದವರು. ಅವರಲ್ಲಿ 7 ಮಂದಿ ತಮಿಳುನಾಡಿನಿಂದ, ಮೂವರು ಮಹಾರಾಷ್ಟ್ರ ದಿಂದ ಬಂದವರು. ಎರ್ನಾಕುಳಂ ಜಿಲ್ಲೆಯಲ್ಲಿ ಬಾಧಿತ ವ್ಯಕ್ತಿ ಮಾಲಿ ದ್ವೀಪದಿಂದ ಬಂದ ಉತ್ತರ ಪ್ರದೇಶ ನಿವಾಸಿ. ಕೊಲ್ಲಂ ಜಿಲ್ಲೆಯಲ್ಲಿ ಆರೋಗ್ಯ ಕಾರ್ಯಕರ್ತೆಯನ್ನು ಸೋಂಕು ಬಾಧಿಸಿದೆ. ಮೇ 6ರಂದು ಚೆನ್ನೈಯಿಂದ ಬಂದ ಪುಲ್ಲೂರು- ಪೆರಿಯ ಪಂಚಾಯತ್‌ನಲ್ಲಿ ವಾಸಿಸುವ 25 ವರ್ಷ ಪ್ರಾಯದ ಯುವಕನಿಗೆ ಕಾಸರಗೋಡು ಜಿಲ್ಲೆಯಲ್ಲಿ ರವಿವಾರ ರೋಗ ದೃಢೀಕರಿಸಲಾಗಿದೆ. ಆತನನ್ನು ಉಕ್ಕಿನಡ್ಕ ದಲ್ಲಿರುವ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರ ಗೋಡು ಜಿಲ್ಲೆಯಲ್ಲಿ ಇದೀಗ ಒಟ್ಟು 16 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 179 ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
Related Articles
ಲಾಕ್‌ಡೌನ್ ಉಲ್ಲಂಘನೆಯ ಆರೋಪ ದಲ್ಲಿ ಜಿಲ್ಲೆಯಲ್ಲಿ 71 ಪ್ರಕರಣ ಗಳನ್ನು ದಾಖಲಿಸಿ ಕೊಳ್ಳಲಾಗಿದೆ. 21 ಮಂದಿಯನ್ನು ಬಂಧಿಸಿ ಆರು ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Advertisement