Advertisement

28 ಮಂದಿಯಲ್ಲಿ ಸೋಂಕು

06:32 PM May 05, 2020 | Suhan S |

ದಾವಣಗೆರೆ: ಕೋವಿಡ್ 19 ಸೋಂಕು ಪರೀಕ್ಷೆಗಾಗಿ ಸೋಮವಾರ 94 ಮಂದಿ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಈಗ ಪರೀಕ್ಷೆ ಒಟ್ಟು 1147 ಮಂದಿಯ ಗಂಟಲು ದ್ರವ ಸಂಗ್ರಹಿಸಿದಂತಾಗಿದೆ. ಇದೇ ದಿನ 122 ಮಂದಿಗೆ ಸಂಬಂಧಿಸಿದಂತೆ ನೆಗಟಿವ್‌ ವರದಿ ಬಂದಿದೆ. ಮನೆಯಲ್ಲೇ ಪ್ರತ್ಯೇಕವಾಗಿ 140 ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ 209 ಮಂದಿಯನ್ನು ಇರಿಸಲಾಗಿದೆ. ಇದುವರೆಗೂ 146 ಜನರು ಸೂಕ್ತ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.ಕೊರೊನಾ ವೈರಸ್‌ ಪರೀಕ್ಷೆಗಾಗಿ ಈವರೆಗೂ ಕಳುಹಿಸಲಾಗಿರುವ 1147 ಮಾದರಿಗಳಲ್ಲಿ 847 ಮಾದರಿಗಳು ನೆಗೆಟಿವ್‌ ವರದಿ ಬಂದಿವೆ.

Advertisement

ಈವರೆಗೂ 32 ಮಂದಿಯಲ್ಲಿ ಕೋವಿಡ್ 19  ಸೋಂಕು ಖಚಿತಪಟ್ಟಿದ್ದು, ಇಬ್ಬರು ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಬ್ಬರು ಮೃತಪಟ್ಟಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಕೋವಿಡ್‌-19 ಪ್ರಕರಣ 28 ಇವೆ. ಮೇ 1ರಂದು ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ನಗರದ 48 ವರ್ಷದ ಮಹಿಳೆ (ರೋಗಿ- 651) ಮೇ 2ರ ಮಧ್ಯರಾತ್ರಿ 1.50ರ ಸಮಯದಲ್ಲಿ ಮೃತಪಟ್ಟಿದ್ದಾರೆ. ಉಸಿರಾಟದ ತೊಂದರೆ, ರಕ್ತದೊತ್ತಡ, ಮಧುಮೇಹ ಹಾಗೂ ಹೈಪೊಥೈರೂಡಿಸಮ್‌ ಸಮಸ್ಯೆಯಿಂದ ಬಳಲುತ್ತಿದ್ದರು. ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿರುವ ಇಮಾಮ್‌ ನಗರ, ಬೇತೂರು ರಸ್ತೆ ಪ್ರದೇಶಗಳನ್ನು ಕಂಟೈನ್‌ಮೆಂಟ್‌ ಝೋನ್‌ ಎಂದು ಆದೇಶಿಸಲಾಗಿದೆ.

2 ಪ್ರದೇಶಗಳಲ್ಲಿ ಪ್ರತಿ ದಿನ ಜ್ವರ/ ಐಎಲ್‌ಐ/ಸಾರಿ ಸಮೀಕ್ಷೆ ನಡೆಸಲಾಗುತ್ತಿದೆ. 3 ದಿನಗಳಿಗೊಮ್ಮೆ ಬಫರ್‌ ಝೋನ್‌ನಲ್ಲಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next