ಹಾಸನ: ರೋಗ ಲಕ್ಷಣಗಳೇ ಇಲ್ಲದೆ ಶೇ.70 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಜಿಲ್ಲಾಡಳಿತವು ಮನೆ-ಮನೆಗೆ ತೆರಳಿ ತಪಾಸಣೆ ನಡೆಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಮನೆಗೆ ಭೇಟಿ ನೀಡಿ ರೋಗ ಲಕ್ಷಣಗಳಿಲ್ಲದಿರುವವರನ್ನೂ ತಪಾಸಣೆ ಮಾಡಲಿದ್ದು, ಸಹಕಾರ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.
ರೋಗ ಲಕ್ಷಣಗಳಿಲ್ಲದ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವುದು ವಿಳಂಬವಾದರೆ ಅವರಿಂದ ಇನ್ನಷ್ಟು ಮಂದಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಎಲ್ಲರನ್ನೂ ತಪಾಸಣೆ ಮಾಡಲಾಗುವುದು. ವೃದ್ಧರು, ರಕ್ತದೊತ್ತಡ, ಮಧುಮೇಹ, ಹೃದ್ರೋಗ ಮತ್ತಿತರರಿಗೆ ಕೋವಿಡ್ ಬಹುಬೇಗ ಹರಡುತ್ತದೆ. ಇಂತಹವರು ಲಕ್ಷಣಗಳಿಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ಸಾವಿನ ಪ್ರಮಾಣ ಹೆಚ್ಚಳ: ಕೋವಿಡ್ ಲಕ್ಷಣ ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯದೆ ಉದಾಸೀನ ಮಾಡಿದರೆ, ರೋಗ ಉಲ್ಬಣಿಸಿ ಚಿಕಿತ್ಸೆ ಫಲಿಸದೆ ಸಾವೀಗಿಡಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಲಕ್ಷಣಗಳಿಲ್ಲದಿರುವವರನ್ನೂ ತಪಾಸಣೆಗೊಳಪಡಿಸಲು ತೀರ್ಮಾನಿಸಲಾಗಿದೆ.ಜಿಲ್ಲೆಯಲ್ಲಿ ಈಗ ಸಾವಿನ ಪ್ರಮಾಣ ಶೇ.1.5 ರಷ್ಟಿದೆ. ಅದನ್ನು ಶೇ.1ಕ್ಕೆ ಇಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಗುಣಮುಖರ ಪ್ರಮಾಣ ಶೇ.75 ರಷ್ಟಿದೆ ಎಂದು ಹೇಳಿದರು.
35 ಸಾವಿರ ಜನರ ಪರೀಕ್ಷೆ: ಗ್ರಾಮೀಣ ಪ್ರದೇಶದಲ್ಲಿ ಯಾವ ದಿನ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡುವರು ಎಂಬುದನ್ನು ಮುಂಚಿತವಾಗಿ ತಿಳಿಸಲಿದ್ದಾರೆ. ಜಿಲ್ಲೆಯಲ್ಲಿ ಒಬ್ಬ ಸೋಂಕಿನ ಪ್ರಾಥಮಿಕ ಸಂಪರ್ಕಿತರು 11 ಮಂದಿ ಎಂದು ಪರಿಗಣಿಸಲಾಗಿದ್ದು, ಜಿಲ್ಲೆಯಲ್ಲಿ ಅನುಪಾತದಂತೆ 37 ಸಾವಿರ ಪ್ರಾಥಮಿಕ ಸಂಪರ್ಕಿತರಿದ್ದು, ಅವರಲ್ಲಿ 35 ಸಾವಿರ ಜನರ ಪರೀಕ್ಷೆ ಮಾಡಲಾಗಿದೆ ಎಂದು ವಿವರ ನೀಡಿದರು.
8.30 ಲಕ್ಷ ರೂ.ದಂಡ ವಸೂಲಿ: ಕೋವಿಡ್ ಹರಡು ವುದನ್ನು ನಿಯಂತ್ರಿಸಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು, ಉಲ್ಲಂ ಸುವವರಿಗೆ ದಂಡ ವಿಧಿಸಲಾ ಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 8.30 ಲಕ್ಷ ರೂ. ದಂಡ ವಿಧಿಸಲಾಗಿದೆ. ಪ್ರತಿದಿನ 2500 ಜನರ ಪರೀಕ್ಷೆ: ಜಿಲ್ಲೆಯಲ್ಲಿ ಕಳೆದ ವಾರದವರೆಗೆ ಪ್ರತಿದಿನ 1800 ಜನರ ಪರೀಕ್ಷೆ ನಡೆಸ ಲಾಗುತ್ತಿತ್ತು. ಈಗ ಆ ಗುರಿಯನ್ನು 2500ಕ್ಕೆ ವಿಸ್ತರಿಸಲಾಗಿದೆ.ಕನಿಷ್ಠ2500 ಜನರ ಪರೀಕ್ಷೆ ಮಾಡಲೇಬೇಕು ಎಂಬ ಗುರಿ ನಿಗದಿಪಡಿಸಲಾಗಿದೆ. ಲಾಕ್‌ಡೌನ್ ತೆರ ವಾದ ನಂತರ ಜನ ಜೀವನ ಸಹಜ ಸ್ಥಿತಿಗೆ ಬಂದಿದ್ದು, ಜನರು ಕೋವಿಡ್ ಇರುವುದನ್ನೇ ಮರೆತಂತೆ ವ್ಯವ ಹರಿಸುತ್ತಿದ್ದಾರೆ. ಹಾಗಾಗಿಯೇ ಸೋಂಕು ಹೆಚ್ಚುತ್ತಿದೆ. ರೋಗ ನಿಯಂತ್ರಿಸಬೇಕಾದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಆಂತರ ಕಾಯ್ದುಕೊಳ್ಳುವುದು, ರೋಗ ಲಕ್ಷಣಗಳಿದ್ದರೆ ಪರೀಕ್ಷೆಗೊಳಪಟ್ಟು ಪಾಸಿಟಿವ್ ಬಂದರೆ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.