Advertisement
ಅಧ್ಯಯನದ ಪ್ರಕಾರ ಕೊರೊನಾ ಸೋಂಕು ದೃಢಪಟ್ಟ ತಾಯಿಯಿಂದ ಶಿಶುಗಳಿಗೆ ಎದೆ ಹಾಲುಣಿಸುವುದರಿಂದ ಸೋಂಕು ಹರಡುವುದಿಲ್ಲ ಎಂದು ಹೇಳಲಾಗಿದೆ. ಅಧ್ಯಯನಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನ ತೀವ್ರ ಉಸಿರಾಟದ ತೊಂದರೆ ಸಮಸ್ಯೆ ಯಿಂದ ಬಳಲುತ್ತಿರುವ ಸುಮಾರು 18 ಕೊರೊನಾ ಸೋಂಕಿತ ಮಹಿಳೆಯರಿಂದ ಬಯೋರೆಪೊಸಿಟರಿ ಸಂಗ್ರಹಿಸಿ 64 ಎದೆ ಹಾಲಿನ ಮಾದರಿಗಳನ್ನುಪರಿಶೀಲಿಸಿ ಈ ವರದಿ ಸಿದ್ಧಪಡಿಸಿದ್ದು, JAMA ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
Related Articles
ಲಂಡನ್: ವಿಶ್ವದೆಲ್ಲೆಡೆ ಅನ್‌ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಕೆಲವೊಂದು ದೇಶಗಳಲ್ಲಿ ಶಾಲಾ ಕಾಲೇಜುಗಳು ಶೈಕ್ಷಣಿಕ ಚಟುವಟಿಕೆಗಳಿಗೆ ತೆರೆದುಕೊಂಡಿವೆ. ಈ ಹಿನ್ನೆಲೆ ಯಲ್ಲಿಯೇ ಕಳೆದ 5 ತಿಂಗಳಿನಿಂದ ಮುಚ್ಚಿದ್ದ ಶಾಲೆಗಳನ್ನು ಮುಂದಿನ ತಿಂಗಳಿನಿಂದ ಪುನರಾರಂಭಿಸಲು ಬ್ರಿಟನ್ ಸರಕಾರ ನಿರ್ಧರಿಸಿದ್ದು, ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಪೋಷಕರಲ್ಲಿ ಮನವಿ ಮಾಡಿದೆ.
Advertisement
ಕಳೆದ ಮಾರ್ಚ್ 23ರಂದು ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬ್ರಿಟನಾದ್ಯಂತ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಜೂನ್‌ನಲ್ಲಿ ಕೆಲವು ಕಡೆ ಶಾಲೆಗಳನ್ನು ಪುನರರಾಂಭಿಸಿದರೂ. ಆದರೆ ಸರಕಾರ ಶಾಲೆಗೆ ಬರುವುದನ್ನು ಕಡ್ಡಾಯ ಗೊಳಿಸಿರದ ಕಾರಣ ಕೇವಲ ಶೇ.18ರಷ್ಟು ಮಕ್ಕಳು ಮಾತ್ರ ಶಾಲೆಗೆ ಬಂದಿದ್ದರು. ಆದರೀಗ ಕೋವಿಡ್ ನಿಂದಾಗುವ ಅಪಾಯಕ್ಕಿಂತ, ಶಾಲೆಗಳನ್ನು ಮುಚ್ಚಿರುವುದರಿಂದ ಮಕ್ಕಳ ಮೇಲಾಗುವ ಪರಿಣಾಮಗಳು ಎಷ್ಟು ಅಪಾಯಕಾರಿ ಎಂಬುದರ ಕುರಿತು ಬ್ರಿಟನ್‌ನ ಉನ್ನತಮಟ್ಟ ವೈದ್ಯ ಕೀಯ ತಜ್ಞರ ಸಲಹೆ ಮೇರೆಗೆ ಶಾಲಾ ಕಾಲೇಜುಗಳನ್ನು ಪುನ ತೆರೆಯಲು ಬ್ರಿಟನ್ ಸರಕಾರ ನಿರ್ಧರಿಸಿದೆ. ಇನ್ನು ಮಕ್ಕಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ಸೆಪ್ಟೆಂಬರ್‌ನಿಂದ ಆರಂಭವಾಗುವ ಶಾಲೆಗಳಿಗೆ ಕಳುಹಿಸಲು ಸಜ್ಜುಗೊಳಿಸುವಂತೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪೋಷಕರಿಗೆ ಕರೆ ನೀಡಿದ್ದು, ಶಾಲೆಯನ್ನು ಪುನರಾರಂಭಿಸುವುದು ಸರಕಾರದ ನೈತಿಕ ಕರ್ತವ್ಯ. ಮಕ್ಕಳು ಪುನಃ ಶಾಲೆಗೆ ಮರಳಬೇಕು. ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು ಎಂದಿದ್ದಾರೆ. ಸೋಂಕಿನ ಭೀತಿಯಿಂದಾಗಿ ಶಾಲೆಗಳಲ್ಲಿ ಮಕ್ಕಳು ಅಂತರ ಕಾಪಾಡುವುದಿಲ್ಲ ಎಂದು ಶಾಲೆ ಪುನರಾರಂಭದ ಬಗ್ಗೆ ಪೋಷಕರುಕಳವಳ ವ್ಯಕ್ತಪಡಿಸಿದ್ದು, ಶಾಲೆ ಪುನರರಾಂಭಕ್ಕೆ ಮುನ್ನ ಶಾಲೆಗಳಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟಪಡಿಸಬೇಕೆಂದು ಶೈಕ್ಷಣಿಕ ಸಂಘಟನೆಗಳು ಜಾನ್ಸನ್ ಸರಕಾರವನ್ನು ಒತ್ತಾಯಿಸಿವೆ.