Advertisement

138 ಪೊಲೀಸರು, 39 ಶಿಕ್ಷಕರಿಗೆ ಸೋಂಕು

04:08 PM Oct 20, 2020 | Suhan S |

ಕೋಲಾರ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನಿಂದ (ಕೋಲಾರ 88 ಮತ್ತು ಕೆಜಿಎಫ್ 50)138 ಮಂದಿ ಪೊಲೀಸರು, ಒಬ್ಬರು ವೈದ್ಯೆ, ಆರೋಗ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, ಒಟ್ಟು 127 ಮಂದಿ ಸೋಂಕಿತ ರಾಗಿದ್ದು, ಇಬ್ಬರು ಅಂಗನವಾಡಿ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಒಬ್ಬಅಧಿಕಾರಿ, ಶಿಕ್ಷಣ ಇಲಾ ಖೆಯ 39 ಮಂದಿ ಶಿಕ್ಷಕರು ಸೋಂಕಿಗೆ ತುತ್ತಾಗಿದ್ದರು.

Advertisement

ಕೋವಿಡ್ ವಾರಿಯರ್‌ ಎಂದು ಗುರುತಿಸಲ್ಪಟ್ಟ ಪೊಲೀಸ್‌ಇಲಾಖೆಯಲ್ಲಿ ಕೋಲಾರ ಭಾಗದಲ್ಲಿ ಮೂವರು ಹಾಗೂ ಕೆಜಿಎಫ್ ವ್ಯಾಪ್ತಿಯಲ್ಲಿಇಬ್ಬರು ಸಾವನ್ನಪ್ಪಿದ್ದು, ಆರೋಗ್ಯ ಇಲಾಖೆಯಲ್ಲಿಯೂ ಇಬ್ಬರು, ಶಿಕ್ಷಣ ಇಲಾಖೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಬೇರೆ ಯಾವ ಇಲಾಖೆಯಲ್ಲಿಯೂ ಕೋವಿಡ್‌ ಸೋಂಕಿನಿಂದ ಸಾವು ಸಂಭವಿಸಿಲ್ಲ.

ನಾಲ್ವರಿಗೆ ಪರಿಹಾರ: ಕೋವಿಡ್ ವಾರಿಯರ್‌ಗಳಿಗೆ ಸರ್ಕಾರ ಘೋಷಿಸಿದ್ದ ಪರಿಹಾರ ಮೊತ್ತವು ಪೊಲೀಸ್‌ ಇಲಾಖೆಯಲ್ಲಿ ಸಾವನ್ನಪ್ಪಿದ ಕೋಲಾರದ ಇಬ್ಬರು ಮತ್ತು ಕೆಜಿಎಫ್ನ ಇಬ್ಬರು ಪೊಲೀಸ್‌ಕುಟುಂಬಗಳಿಗೆ ತಲುಪಿದೆ. ಮತ್ತೂಂದು ಪ್ರಕರಣದಲ್ಲಿ ಸಾವು ಬೆಂಗಳೂರಿನ ಆಸ್ಪತ್ರೆಯಲ್ಲಿ ಸಂಭವಿಸಿದ್ದರಿಂದ ಬಿಬಿಎಂಪಿಅಧಿಕಾರಿಗಳಿಂದ ವರದಿ ನಿರೀಕ್ಷಿಸಲಾಗುತ್ತಿದೆ.

ಕೋಲಾರ ಪೊಲೀಸ್‌ಇಲಾಖೆ: ಕೋಲಾರ ಜಿಲ್ಲೆಯಪೊಲೀಸ್‌ ಇಲಾಖೆಯಲ್ಲಿ ಈವರೆಗೂ 88 ಮಂದಿ ಪೊಲೀಸರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಈ ಪೈಕಿ 24 ಮಂದಿ ಆಸ್ಪತ್ರೆಗಳಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.5 ಮಂದಿ ಮನೆಕ್ವಾರಂಟೈನ್‌ ನಲ್ಲಿದ್ದಾರೆ. 56 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ, 29 ಮಂದಿ ಚಿಕಿತ್ಸೆಗೊಳಪಟ್ಟಿದ್ದು, ಮೂವರು ಸಾವನ್ನಪ್ಪಿದ್ದಾರೆ.

ಶಿಕ್ಷಣ ಇಲಾಖೆ: ಕೋಲಾರ ಶಿಕ್ಷಣ ಇಲಾಖೆಯಲ್ಲಿ 39 ಮಂದಿ ಕೋವಿಡ್‌ನಿಂದ ಸೋಂಕಿತರಾಗಿದ್ದು, 20 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇವರ ಕುಟುಂಬಕ್ಕೆಪರಿಹಾರಕ್ಕಾಗಿ ಶಿಫಾರಸು ಮಾಡಲಾಗಿದೆ. 6 ಮಂದಿ ವಿವಿಧ ಕಾರಣಗಳಿಂದ ಸಾವನ್ನಪಿರುವುದರಿಂದ ಪರಿಹಾರದ ವ್ಯಾಪ್ತಿಗೆ ಬರುವುದಿಲ್ಲ.

Advertisement

ಆರೋಗ್ಯ ಇಲಾಖೆ: ಕೋಲಾರ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಒಬ್ಬ ವೈದ್ಯ ಹಾಗೂ ಒಬ್ಬ ಆರೋಗ್ಯಕಾರ್ಯಕರ್ತ ಸಾವನ್ನಪ್ಪಿದ್ದು, ಪರಿಹಾರಕ್ಕಾಗಿ ಎರಡೂಪ್ರ ಕರಣಗಳನ್ನು ಶಿಫಾರಸು ಮಾಡಲಾಗಿದೆ.ಈ ವರೆಗೂ ಬಂದಿಲ್ಲ. 127 ಮಂದಿ ಒಟ್ಟು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಸೋಂಕು ತಗುಲಿದ್ದು, ಬಹುತೇಕ ಗುಣಮುಖರಾಗಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ಕೋಲಾರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಒಬ್ಬ ಅಧಿಕಾರಿ ಹಾಗೂಇಬ್ಬರು ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್‌ ಸೋಂಕು ತಗುಲಿತ್ತು. ಮೂವರು ಗುಣಮುಖರಾಗಿದ್ದಾರೆ. ಒಬ್ಬ ಕಾರ್ಯಕರ್ತೆ ಸಾವನ್ನಪ್ಪಿದ್ದು ಕೋವಿಡ್‌ ನಿಂದ ಸಾವು ಎಂಬುದು ದೃಢಪಟ್ಟಿಲ್ಲವಾದ್ದರಿಂದ ಆರೋಗ್ಯ ಇಲಾಖೆಯಿಂದ ವರದಿ ನಿರೀಕ್ಷಿಸಲಾಗುತ್ತಿದೆ.

8 ಸಾವಿರದತ್ತ ಸೋಂಕಿತರ ಸಂಖ್ಯೆ : ಕೋಲಾರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಕರಣಗಳು 8000 ಸಮೀಪಿಸುತ್ತಿದ್ದು, 6,500 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 137 ಮಂದಿ ಸಾವನ್ನಪ್ಪಿದ್ದು, 1200 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಮುಂದಿನ ದಿನಗಳಲ್ಲಿ ಕೋವಿಡ್ ವಾರಿಯರ್‌ಗಳು ಹಾಗೂ ಸರ್ಕಾರಿ ಸೇವೆಯಲ್ಲಿರುವವರು ಹಾಗೂ ಸಾರ್ವಜನಿಕರಿಗೆ ಸೋಂಕು ಹರಡದಂತೆ ಸಾಕಷ್ಟು ಮುಂಜಾಗ್ರತಾಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ಠಾಣಾವಾರು ಸೋಂಕಿತರು :  ಕೋಲಾರ ನಗರ ಠಾಣೆಯಲ್ಲಿ ಮೂವರು, ಸಂಚಾರಠಾಣೆ 15 ಮಂದಿ, ಗಲ್‌ಪೇಟೆ ಠಾಣೆ 2, ನಂಗಲಿಯಲ್ಲಿ 1, ಮುಳಬಾಗಿಲು ಡಿವೈಎಸ್ಪಿ ಕಚೇರಿ 1, ಮುಳಬಾಗಿಲು ಗ್ರಾಮಾಂತರ ಠಾಣೆ 3, ಶ್ರೀನಿವಾಸಪುರ 1, ಸರ್ಕಲ್‌ಇನ್ಸ್‌ಪೆಕ್ಟರ್‌ಕಚೇರಿ ಶ್ರೀನಿವಾಸಪುರದಲ್ಲಿ 1, ಗೌನಿಪಲ್ಲಿಯಲ್ಲಿ 7, ಎಸ್ಪಿಕಚೇರಿ 1, ವೇಮಗಲ್‌ ಠಾಣೆ 3, ಮಹಿಳಾ ಠಾಣೆ 3,ಡಿಸಿಆರ್‌ಬಿ ವಿಭಾಗದಲ್ಲಿ 2,ಕಂಟ್ರೋಲ್‌ ರೂಂನಲ್ಲಿ 4,ಕೋಲಾರ ಸರ್ಕಲ್‌ ಇನ್ಸ್‌ಪೆಕ್ಟರ್‌ಕಚೇರಿ 1, ಮಾಸ್ತಿ ಠಾಣೆ 6,ಕೋಲಾರ ಗ್ರಾಮಾಂತರ ಠಾಣೆಯಲ್ಲಿ 8, ಸಿಇಎನ್‌ ಠಾಣೆಯಲ್ಲಿ 1, ಮಾಲೂರು ಠಾಣೆಯಲ್ಲಿ 4, ಡಿಎಆರ್‌ ವಿಭಾಗದಲ್ಲಿ 21 ಮಂದ ಕೋವಿಡ್‌ ಸೋಂಕಿತರಾಗಿದ್ದರು.

ಕೋಲಾರ ಪೊಲೀಸ್‌ ಇಲಾಖೆ ವ್ಯಾಪ್ತಿಯಲ್ಲಿ ಮೂವರುಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಪರಿಹಾರ ದೊರೆತಿದೆ. ಮತ್ತೂಬ್ಬರದ್ದು ಪರಿಹಾರಕ್ಕಾಗಿ ಶಿಫಾರಸ್ಸಾಗಿದೆ. ಪರಿಹಾರ ನೀಡಿಕೆಯಲ್ಲಿ ಯಾವುದೇ ವಿಳಂಬವಾಗಿಲ್ಲ. ಕಾರ್ತಿಕ್‌ರೆಡ್ಡಿ, ಎಸ್ಪಿ,ಕೋಲಾರ

ಕೋಲಾರ ಶಿಕ್ಷಣ ಇಲಾಖೆಯಲ್ಲಿ40 ಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದಾರೆ. ಮುಳಬಾಗಿಲುಹನುಮನಹಳ್ಳಿ ಶಿಕ್ಷಕ ಸಾವನ್ನಪ್ಪಿದ್ದು, ಕೋವಿಡ್‌ ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗುತ್ತಿದೆ. ಜಯರಾಮರೆಡ್ಡಿ, ಡಿಡಿಪಿಐ,ಕೋಲಾರ

ಆರೋಗ್ಯಇಲಾಖೆಯಲ್ಲಿಒಬ್ಬವೈದ್ಯ ಹಾಗೂ ಆರೋಗ್ಯ ಕಾರ್ಯಕರ್ತ ಸಾವನ್ನಪ್ಪಿದ್ದು, ಎರಡೂಪ್ರಕರಣಗಳನ್ನು ಕೋವಿಡ್  ವಾರಿಯರ್‌ಪರಿಹಾರಕ್ಕೆ ಶಿಫಾರಸ್ಸು ಮಾಡಲಾಗಿದೆ.ಇನ್ನೂ ಪರಿಹಾರಬಿಡುಗಡೆಯಾಗಬೇಕಿದೆ. ಡಾ.ವಿಜಯಕುಮಾರ್‌, ಜಿಲ್ಲಾ ಆರೋಗ್ಯಾಧಿಕಾರಿ,ಕೋಲಾರ

ಕೋಲಾರ ಜಿಲ್ಲೆಯಲಿ ಒಟ್ಟು 127 ಮಂದಿ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಕೋವಿಡ್‌ ಸೋಂಕು ತಗುಲಿತ್ತು. ಬಹುತೇಕ ಮಂದಿಗುಣ ಮುಖರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. -ಡಾ.ಚಾರಿಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಕೋಲಾರ

ಮಹಿಳಾಮತ್ತು ಮಕ್ಕಳಕಲ್ಯಾಣ ಇಲಾಖೆಯಲ್ಲಿ ಕೋವಿಡ್‌ನಿಂದ ಮೂವರು ಸೋಂಕಿತರಾಗಿದ್ದು, ಗುಣಮುಖರಾಗಿದ್ದಾರೆ. ಒಬ್ಬ ಆಂಗನವಾಡಿ ಕಾರ್ಯಕರ್ತೆ ಸಾವನ್ನಪ್ಪಿದ್ದುಕೋವಿಡ್‌ನಿಂದ ಎನ್ನುವುದು ದೃಢಪಟ್ಟಿಲ್ಲ. ಆರೋಗ್ಯಇಲಾಖೆಯಿಂದ ವರದಿನಿರೀಕ್ಷಿಸಲಾಗುತ್ತಿದೆ. ಡಾ.ಎಂ.ಜಿ.ಪಾಲಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

 

ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next