Advertisement

ಸೋಂಕು ಹೊತ್ತೂಯ್ದ ನೈಲ್‌ ಕ್ರೂಸ್‌ !

12:22 PM Apr 09, 2020 | mahesh |

ಈಜಿಪ್ಟ್: ಕೋವಿಡ್‌-19 ವಿವಿಧ ದೇಶಗಳಿಗೆ ಹರಡಲು ಒಂದು ಕಾರಣವಿದೆ. ಮೂಲ ವುಹಾನ್‌ ಆಗಿದ್ದರೂ ಅಲ್ಲಿಂದ ಅದು ವಿವಿಧ ರೂಪಗಳಲ್ಲಿ ಜಗತ್ತಿನಾದ್ಯಂತ ಪ್ರಸರಣಗೊಂಡಿದೆ. ಇದೀಗ ಅವುಗಳ ಪಟ್ಟಿಗೆ ನೈಲ್‌ ಕ್ರೂಸ್‌ ಹಡಗು ಸಹ ಸೇರಿದೆ.

Advertisement

ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ವೈರಸ್‌ ತಗುಲಿತ್ತು ಎಂಬ ವರದಿ ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ ಮಧ್ಯ ಮತ್ತು ಮಾರ್ಚ್‌ ಆರಂಭದ ನಡುವೆ ಡಜನ್‌ ಗಟ್ಟಲೆ ಅಮೆರಿಕನ್ನರು ಮತ್ತು ಈಜಿಪ್ಟಿನವರು ಸೇರಿದಂತೆ ನೂರಾರು ವಿದೇಶಿ ಪ್ರಯಾಣಿಕರು ಈ ವೈರಸ್‌ಗೆ ತುತ್ತಾಗಿದ್ದರು. ಆಸರಾದ ಹಡಗಿನಲ್ಲಿ ಸೋಂಕಿಗೆ ಒಳಗಾದ ಕನಿಷ್ಠ ಆರು ಅಮೆರಿಕನ್ನರು ಮೇರಿಲ್ಯಾಂಡ್‌ಗೆ ಮರಳಿದರು ಎಂದು ಗವರ್ನರ್‌ಲ್ಯಾರಿ ಹೊಗನ್‌ ಹೇಳಿದ್ದಾರೆ. ಅಲ್ಲಿನ ಸಮುದಾಯಕ್ಕೆ ಹರಡಲು ಇದು ಕಾರಣವಾಗಿರುವ ಸಾಧ್ಯತೆ ಇದೆ. ಹನ್ನೆರಡು ಮಂದಿ ಹೂಸ್ಟನ್‌ನಲ್ಲಿ ಪಾಸಿಟಿವ್‌ ಗೆ ಒಳಗಾಗಿದ್ದರು.

ಮಾರ್ಚ್‌ 1ರಂದು ಈಜಿಪ್ಟ್ ಆರೋಗ್ಯ ಅಧಿಕಾರಿಗಳಿಗೆ, ಅಸಾರಾದಲ್ಲಿ ಅಮೆರಿಕನ್‌ ಮಹಿಳೆಯೊಬ್ಬರಿಗೆ ಸೋಂಕು ತಗುಲಿತ್ತು ಎಂಬುದು ಗೊತ್ತಾಗಿತ್ತು. ಅವರಿಂದ ಹಡಗಿನಲ್ಲಿ ಇತರರಿಗೆ ಸೋಂಕು ತಗುಲಿದೆ ಎಂದು ತಿಳಿದ ಬಳಿಕವೂ ಈ ಹಡಗು ಮಾರ್ಚ್‌ 5ರಂದು ಮತ್ತೂಂದು ವಿಹಾರಕ್ಕೆ ಹೊರಟಿತ್ತು.  ಈ ಮಧ್ಯೆ ಕೆಲವರ ಕೋವಿಡ್‌-19 ಪರೀಕ್ಷೆಯ ಫಲಿತಾಂಶ ಬಂದಿರಲಿಲ್ಲ. ಹಾಗಾಗಿ ಅಧಿಕಾರಿಗಳೂ ಸುಮ್ಮನಿದ್ದರು. ಬಳಿಕ ಒತ್ತಡ ಹೆಚ್ಚಾದ ಕಾರಣ ತಪಾಸಣೆಗೆ ಒಳಪಡಿಸಲಾಯಿತು. ನಕಾರಾತ್ಮಕ ಫ‌ಲಿತಾಂಶ ಬಂದಿತು. ಒಂದು ದಿನದ ಬಳಿಕ, ಹಡಗು ಲಕ್ಸರ್‌ತಲುಪಿದಾಗ, ಪ್ರಯಾಣಿಕರಲ್ಲಿ ಗಂಟಲು ಸಮಸ್ಯೆ, ಶೀತ ಕಾಣಿಸಿಕೊಂಡಿತ್ತು. ಅಲ್ಲಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಹಾಗಾಗಿ ಕೋವಿಡ್‌-19 ಹರಡಲು ನೈಲ್‌ ಕ್ರೂಸ್‌ ಸಹ ಕಾರಣ ಎಂಬ ಆರೋಪ ಕೇಳಿಬರುತ್ತಿದೆ.

ನಾಲ್ಕು ಕ್ರೂಸ್‌ಗಳನ್ನು ಹೊಂದಿತ್ತು
ಎಂಎಸ್‌ ಅಸರಾದಲ್ಲಿರುವ ತೈವಾನೀಸ್‌ ಅಮೆರಿಕದ ಪ್ರಯಾಣಿಕರೊಬ್ಬರಲ್ಲಿ ಕೋವಿಡ್‌ ಪತ್ತೆಯಾಗಿತ್ತು. ಈ ಹಡಗು ಕನಿಷ್ಠ ನಾಲ್ಕು ಕ್ರೂಸ್‌ಗಳನ್ನು ಹೊಂದಿತ್ತು. 12 ಸಿಬಂದಿಗಳು ಸೋಂಕಿಗೆ ಒಳಗಾಗಿದ್ದರು. ಅವರೆಲ್ಲರೂ ಫೆಬ್ರವರಿ ಮತ್ತು ಮಾರ್ಚ್‌ ಆರಂಭದಲ್ಲಿ ನೌಕೆಗಳಲ್ಲಿ ಕೆಲಸ ಮಾಡಿದ್ದರು. ಈ ಮಾಹಿತಿಯನ್ನು ಕ್ಯಾರೆಂಟೈನ್‌ ನಲ್ಲಿರುವ ಸಿಬಂದಿಯೊಬ್ಬರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next