Advertisement

ಸೋಂಕಿತರ ಪ್ರದೇಶ ಸೀಲ್‌ಡೌನ್‌; ಸೂಕ್ತ ಮುನ್ನೆಚ್ಚರಿಕೆ

06:15 AM Jun 08, 2020 | Suhan S |

ಹುಕ್ಕೇರಿ: ಮಹಾರಾಷ್ಟ್ರದಿಂದ ಮರಳಿ ಬಂದಿರುವ ತಾಲೂಕಿನ ನಾನಾ ಗ್ರಾಮಗಳ 38 ಜನರಲ್ಲಿ 30 ಜನರಿಗೆ ಕೋವಿಡ್ ಸೋಂಕು ತಗಲಿರುವ ವರದಿಯಾಗಿದೆ.

Advertisement

38 ಜನರನ್ನು ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿ ಕ್ವಾರೆಂಟೈನ್‌ ಮಾಡಲಾಗಿತ್ತು. ಕ್ವಾರೆಂಟೈನ್‌ ಅವಧಿ  ಮುಗಿದ ಅವರ ಗಂಟಲುದ್ರವವನ್ನು ಪರೀಕ್ಷೆಗಾಗಿ ಕಳುಹಿಸಿದ್ದು, 30ಜನರಲ್ಲಿ ಕೋವಿಡ್‌ ದೃಢಪಟ್ಟಿದೆ ಎನ್ನಲಾಗಿದೆ. ಖವಣೆವಾಡಿ, ಕೋಟ್‌, ಅತ್ತಿಹಾಳ, ದಡ್ಡಿ, ಮಣಗುತ್ತಿ, ದೊಣಗಟ್ಟಿ, ಕರಜಗಾ, ದಡ್ಡಿ ಮತ್ತಿವಾಡಿ ಗ್ರಾಮಗಳು ಜನರು ಕೂಲಿ ಕೆಲಸಕ್ಕಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದರು. ಇವರ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದ್ದು, ಸುತ್ತಮುತ್ತಲಿನ ಗ್ರಾಮಗಳನ್ನು ಪೊಲೀಸ್‌ ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ. ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಗಣಪತಿ ಕುಗೂನೊಳಿ ಬೇರೆ ಗ್ರಾಮದ ಜನರು ಆಗಮಿಸದಂತೆ ಬ್ಯಾರಿಕೇಡ್‌ ಹಾಕಿ ಸೂಕ್ತ ಬಂದೋಬಸ್ತ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next