Advertisement

ಅನರ್ಹ ಫಲಾನುಭವಿಗಳ ತೆರವು; ಆಶ್ರಯ ಮನೆಗೆ ಬೀಗ

03:59 PM Oct 04, 2020 | Suhan S |

ಸಿಂಧನೂರು: ಸ್ಥಳೀಯ ನಗರಸಭೆ ವ್ಯಾಪ್ತಿಯ 31ನೇ ವಾರ್ಡ್‌ನ ಏಳುರಾಗಿ ಕ್ಯಾಂಪ್‌ನಲ್ಲಿನ ಆಶ್ರಯ ಮನೆಗಳಲ್ಲಿ ವಾಸವಿದ್ದ ಅನರ್ಹ ಫಲಾನುಭವಿಗಳನ್ನು ನಿವಾಸಿಗಳ ವಿರೋಧದ ಮಧ್ಯೆಯೂ ತೆರವುಗೊಳಿಸಿ 47 ಮನೆಗಳಿಗೆನಗರಸಭೆ ಮತ್ತು ಪೊಲೀಸ್‌ ಅಧಿಕಾರಿಗಳು ಬೀಗ ಜಡಿದ ಪ್ರಸಂಗ ಶನಿವಾರ ನಡೆಯಿತು.

Advertisement

ಲೋಕಾಯುಕ್ತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್‌ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ಕಾರ್ಯಾಚರಣೆ ನಡೆಸಿ ಏಳುರಾಗಿ ಕ್ಯಾಂಪ್‌ನಲ್ಲಿನ ಆಶ್ರಯ ಮನೆಗಳಲ್ಲಿ ವಾಸವಿದ್ದ ಅನರ್ಹ ಫಲಾನುಭವಿಗಳನ್ನು ತೆರವುಗೊಳಿಸಿ ಮನೆಗೆ ಬೀಗ ಜಡಿದು ನಗರಸಭೆ ವಶಕ್ಕೆ ತೆಗೆದುಕೊಳ್ಳಲಾಯಿತು.

ಈ ವೇಳೆ ನಗರಸಭೆ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಮಾತನಾಡಿ ಇಲ್ಲಿನ 180 ಆಶ್ರಯ ಮನೆಗಳಲ್ಲಿ 47 ಮನೆಗಳಲ್ಲಿ ವಾಸವಿರುವ ಅನರ್ಹರಿಗೆ ಯಾವುದೇ ಹಕ್ಕುಪತ್ರ ವಿತರಣೆ ಮಾಡಿಲ್ಲ. ಅವರ ವಿರುದ್ಧ ಯಶವಂತ ಕೋವಿ ಎಂಬವರು ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ಜಿಲ್ಲಾಧಿಕಾರಿ ಆದೇಶದಂತೆ ಕಾರ್ಯಾಚರಣೆ ನಡೆಸಲಾಗಿದೆ.  ಅರ್ಹ ಫಲಾನುಭವಿಗಳಿಗೆ ಮನೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಮನೆ ತೆರವುಗೊಳಿಸಿದ ಕುರಿತು ಲೋಕಾಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದರು.

ಸಿಪಿಐ ಜಿ.ಚಂದ್ರಶೇಖರ, ವಿಜಯಕೃಷ್ಣ, ನಗರಸಭೆ ಸಿಬ್ಬಂದಿ ಇದ್ದರು.

ವಿರೋಧ: ಏಕಾಏಕಿ ಅನರ್ಹ ಫಲಾನುಭವಿಗಳನ್ನು ಆಶ್ರಯ ಮನೆಗಳಿಂದ ಹೊರ ಹಾಕುತ್ತಿರುವ ನಗರಸಭೆ ಅಧಿಕಾರಿಗಳ ವಿರುದ್ಧ ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಹೋರಾಟಗಾರ ಡಿ.ಎಚ್‌. ಪೂಜಾರ ಮಾತನಾಡಿ, ನಗರಸಭೆ ಅಧಿಕಾರಿಗಳು ಮೇಲಾಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಏಕಾಏಕಿ ಬಡವರನ್ನು ಮನೆಯಿಂದ ಹೊರ ಹಾಕುತ್ತಿದ್ದಾರೆ. ನಿಜವಾದ ಫಲಾನುಭವಿಗಳೇ ಇಲ್ಲಿ ವಾಸವಿದ್ದು, ಅವರನ್ನು ತೆರವುಗೊಳಿಸುವುದು ಸರಿಯಲ್ಲ ಎಂದರು. ಹನುಮಂತ ಯರದಿಹಾಳ, ಚಿಟ್ಟಿಬಾಬು, ದಲಿತ ಸೈನ್ಯ ಮುಖಂಡ ಚನ್ನಬಸವ, ಬಸಮ್ಮ ಸೇರಿದಂತೆ ಅನೇಕರು ಇದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next