Advertisement

ಕೋಲ್ಕತ್ತಾದಲ್ಲಿ ಭಾರತ- ಲಂಕಾ ಕದನ: ನಿರ್ಣಾಯಕ ಟಾಸ್ ಗೆದ್ದ ಶನಕ; ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ

01:06 PM Jan 12, 2023 | Team Udayavani |

ಕೋಲ್ಕತ್ತಾ: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆದ್ದು ಆತ್ಮವಿಶ್ವಾಸದಿಂದ ಇರುವ ಭಾರತದ ತಂಡವು ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ಟಾಸ್ ಗೆದ್ದ ಶನಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.

Advertisement

ಮೊದಲ ಪಂದ್ಯದಲ್ಲಿ ನಾಯಕ ರೋಹಿತ್, ವಿರಾಟ್ ಕೊಹ್ಲಿ ಮತ್ತು ಶುಬ್ಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ನಿಂತು ಆಡಬೇಕಿದೆ.

ಇದನ್ನೂ ಓದಿ:ಹೀಗೊಂದು ನಿಯಮ; ರಜೆಯಲ್ಲಿರುವ ಸಹೋದ್ಯೋಗಿಗಳಿಗೆ ತೊಂದರೆ ನೀಡಿದರೆ 1 ಲಕ್ಷ ರೂ ದಂಡ!

ಗಾಯದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್‌ ಶರ್ಮ ಕೂಡ ಗುವಾಹಟಿಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ್ದಾರೆ. ಅವರ 83 ರನ್‌ ನೆರವಿನಿಂದ ಭಾರತ ಬೃಹತ್‌ ಮೊತ್ತ ಪೇರಿಸಿತು. ಈಡನ್‌ ರೋಹಿತ್‌ ಅವರ ನೆಚ್ಚಿನ ತಾಣವೂ ಆಗಿದೆ. ಇಲ್ಲಿ ಈ ಎರಡು ತಂಡಗಳು ಎಂಟು ವರ್ಷಗಳ ಹಿಂದೆ ಏಕದಿನ ಪಂದ್ಯದಲ್ಲಿ ಮುಖಾಮುಖೀಯಾಗಿದ್ದಾಗ ರೋಹಿತ್‌ ವಿಶ್ವ ದಾಖಲೆಯ 264 ರನ್‌ ಪೇರಿಸಿದ್ದರು. ರೋಹಿತ್‌ ದೀರ್ಘ‌ ಸಮಯದಿಂದ ಶತಕದ ಸಂಭ್ರಮ ಆಚರಿಸಿಲ್ಲ. ಅವು 2020ರ ಜನವರಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಶತಕ ಬಾರಿಸಿದ್ದರು.

ಲಂಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಪತ್ತುನ್ ನಿಸಾಂಕ ಮತ್ತು ಮಧುಶನಕ ಹೊರಗುಳಿದಿದ್ದಾರೆ. ಅವರ ಬದಲಿಗೆ ನುವಾನಿಡು ಫೆರ್ನಾಂಡೋ ಮತ್ತು ಲಹಿರು ಕುಮಾರ ಸ್ಥಾನ ಪಡೆದಿದ್ದಾರೆ. ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದು ಗಾಯಗೊಂಡಿರುವ ಯುಜಿ ಚಾಹಲ್ ಬದಲಿಗೆ ಕುಲದೀಪ್ ಯಾದವ್ ಅವಕಾಶ ಪಡೆದಿದ್ದಾರೆ.

Advertisement

ಭಾರತ: ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್(ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್.

ಶ್ರೀಲಂಕಾ: ಅವಿಷ್ಕ ಫೆರ್ನಾಂಡೋ, ನುವಾನಿಡು ಫೆರ್ನಾಂಡೋ, ಕುಸಲ್ ಮೆಂಡಿಸ್ (ವಿ,ಕೀ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ(ನಾ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಕಸುನ್ ರಜಿತ

Advertisement

Udayavani is now on Telegram. Click here to join our channel and stay updated with the latest news.

Next