Advertisement

INDvsSA; ಈ ಸರಣಿಯಲ್ಲಿ ದ್ರಾವಿಡ್, ಸೆಹವಾಗ್ ದಾಖಲೆ ಮುರಿಯಲಿದ್ದಾರೆ ವಿರಾಟ್

09:29 AM Dec 26, 2023 | Team Udayavani |

ಸೆಂಚೂರಿಯನ್: ಟಿ20 ಮತ್ತು ಏಕದಿನ ಸರಣಿಯ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭವಾಗುತ್ತಿದೆ. ಇಂದಿನಿಂದ (ಜ.26) ಸೆಂಚೂರಿಯನ್ ನಲ್ಲಿ ಮೊದಲ ಪಂದ್ಯ ನಡೆಯುತ್ತಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಸೇರಿ ಹಿರಿಯರ ಪುನಾರಗಮನದಿಂದ ಭಾರತ ತಂಡವೂ ಬಲಿಷ್ಠವಾಗಿದೆ. ಇದೇ ಮೊದಲ ಬಾರಿಗೆ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ರೋಹಿತ್ ಪಡೆ ಸಜ್ಜಾಗಿದೆ.

Advertisement

ಏಕದಿನ ವಿಶ್ವಕಪ್ ಬಳಿ ವಿಶ್ರಾಂತಿಯಲ್ಲಿದ್ದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಟೆಸ್ಟ್ ಸರಣಿಯ ಮೂಲಕ ಮತ್ತೆ ತಂಡ ಸೇರಿದ್ದಾರೆ. ಹಾಗಾಗಿ ಸಹಜವಾಗಿ ಎಲ್ಲರ ಚಿತ್ತ ಕೊಹ್ಲಿ ಮೇಲಿದೆ.

ಸೆಂಚೂರಿಯನ್ ಟೆಸ್ಟ್ ಮೂಲಕ ವಿರಾಟ್ ಕೊಹ್ಲಿ ಅವರು ದ್ರಾವಿಡ್, ಸೆಹವಾಗ್ ದಾಖಲೆ ಮುರಿಯುವ ಸಾಧ್ಯತೆಯಿದೆ. ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ 14 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ, ಇದುವರೆಗೆ 56.18 ರ ಅದ್ಭುತ ಸರಾಸರಿಯಲ್ಲಿ 1236 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ. ವಿರಾಟ್ ಇನ್ನೂ 16 ರನ್ ಗಳಿಸಿದರೆ ಅವರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ 1252 ರನ್‌ಗಳ ಮೀರುತ್ತಾರೆ. ದ.ಆಫ್ರಿಕಾ ವಿರುದ್ಧ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್‌ ಗಳ ಪಟ್ಟಿಯಲ್ಲಿ ದ್ರಾವಿಡ್ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ:KCCಗೆ ಅದ್ಧೂರಿ ತೆರೆ: ಆರು ತಂಡಗಳ ಭರ್ಜರಿ ಹಣಾಹಣಿ; ಗಣೇಶ್ ತಂಡಕ್ಕೆ ಗೆಲುವು

ಅಲ್ಲದೆ, ಈ ಸರಣಿಯಲ್ಲಿ ಕೊಹ್ಲಿ 70 ರನ್‌ ಗಳನ್ನು ಹೊಡೆದರೆ, ಅವರು ವೀರೇಂದ್ರ ಸೆಹವಾಗ್ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗುತ್ತಾರೆ. ಮಾಜಿ ಆರಂಭಿಕ ಬ್ಯಾಟರ್ ಸೆಹವಾಗ್ ದಕ್ಷಿಣ ಆಫ್ರಿಕಾ ವಿರುದ್ಧ 15 ಟೆಸ್ಟ್‌ಗಳಲ್ಲಿ 1306 ರನ್ ಗಳಿಸಿದ್ದರು.

Advertisement

ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 25 ಟೆಸ್ಟ್ ಪಂದ್ಯಗಳಲ್ಲಿ 42.46ರ ಸರಾಸರಿಯಲ್ಲಿ 1741 ರನ್ ಪೇರಿಸಿದ್ದಾರೆ. ಸಚಿನ್ ಅವರ ದಾಖಲೆ ಮುರಿಯಲು ವಿರಾಟ್ ಇನ್ನೂ 505 ರನ್ ಗಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next