Advertisement

INDvsSA ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ಸಾಯಿ ಸುದರ್ಶನ್ ಪದಾರ್ಪಣೆ

01:09 PM Dec 17, 2023 | Team Udayavani |

ಜೋಹಾನ್ಸ ಬರ್ಗ್: ಟಿ20 ಸರಣಿಯ ಬಳಿಕ ಇದೀಗ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಏಕದಿನ ಸರಣಿಗೆ ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವು ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದೆ.

Advertisement

ವಿಶ್ವಕಪ್ ಬಳಿಕ ಮೊದಲ ಬಾರಿಗೆ ಭಾರತ ತಂಡ ಏಕದಿನ ಪಂದ್ಯ ಆಡುತ್ತಿದೆ. ಪ್ರಮುಖ ಆಟಗಾರರ ಗೈರಿನ ನಡುವೆ ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ ತಮಿಳುನಾಡು ಆಟಗಾರ ಸಾಯಿ ಸುದರ್ಶನ್ ಏಕದಿನ ಪದಾರ್ಪಣೆಗೈದರು.

ಭಾರತದ ಯುವ ತಂಡಕ್ಕೆ ಏಡನ್ ಮಾರ್ಕ್ರಮ್ ಬಳಗ ಸಡ್ಡು ಹೊಡೆದಿದೆ. ವಿಶ್ವಕಪ್ ನಲ್ಲಿ ತಂಡ ಮುನ್ನಡೆಸಿದ್ದ ತೆಂಬ ಬವುಮಾ ಬದಲಿಗೆ ಮಾರ್ಕ್ರಮ್ ನಾಯಕತ್ವದ ಹೊಣೆ ಹೊತ್ತಿದ್ದಾರೆ.

ತಂಡಗಳು

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾ), ಹೆನ್ರಿಕ್ ಕ್ಲಾಸೆನ್ (ವಿ.ಕೀ), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ

Advertisement

ಭಾರತ: ಕೆಎಲ್ ರಾಹುಲ್ (ನಾ/ವಿ.ಕೀ), ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next