ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಸೆಂಚೂರಿಯನ್ ನಲ್ಲಿ ನಡೆದ ಹೈಸ್ಕೋರಿಂಗ್ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆಯು 11 ರನ್ ಅಂತರದ ಗೆಲುವು ಸಾಧಿಸಿದೆ.
ನಿರ್ಣಾಯಕ ಕೊನೆಯ ಓವರ್ ಬೌಲಿಂಗ್ ಮಾಡಿದ ಅರ್ಶದೀಪ್ ಸಿಂಗ್ (Arshadeep Singh) ತಂಡದ ಗೆಲುವಿಗೆ ನೆರವಾದರು. 19ನೇ ಓವರ್ ನಲ್ಲಿ 26 ರನ್ ಚಚ್ಚಿದ್ದ ಮಾರ್ಕೋ ಎನ್ಸನ್ ಕೊನೆಯ ಓವರ್ ನಲ್ಲಿ ತಂಡಕ್ಕೆ ಗೆಲುವು ತಂದುಕೊಡುವ ಸೂಚನೆ ನೀಡಿದ್ದರು. ಆದರೆ ಅಂತಿಮ ಓವರ್ ನಲ್ಲಿ ಬಿಗು ದಾಳಿ ನಡೆಸಿದ ಅರ್ಶದೀಪ್ ಸಿಂಗ್ ಏನ್ಸನ್ ವಿಕೆಟ್ ಕಿತ್ತಿದ್ದು ಅಲ್ಲದೆ ತಂಡಕ್ಕೆ ಜಯ ತಂದಿತ್ತರು.
ಈ ಪಂದ್ಯದಲ್ಲಿ 37 ರನ್ ನೀಡಿದ ಮೂರು ವಿಕೆಟ್ ಕಿತ್ತರು. ಇದೇ ವೇಳೆ ಅವರು ಭಾರತದ ಪರ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿದರು. ಈ ಪಂದ್ಯದ ವೇಳೆ ಅವರು ಭುವನೇಶ್ವರ್ ಕುಮಾರ್ ದಾಖಲೆ ಮುರಿದರು.
ಅರ್ಶದೀಪ್ ಅವರು 59 ಪಂದ್ಯಗಳಲ್ಲಿ 92 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಭುವನೇಶ್ವರ್ ಕುಮಾರ್ ಅವರು 87 ಪಂದ್ಯಗಳಲ್ಲಿ 90 ವಿಕೆಟ್ ಕಿತ್ತಿದ್ದರು. ಸ್ಪಿನ್ನರ್ ಚಾಹಲ್ ಅವರು 96 ವಿಕೆಟ್ ಗಳೊಂದಿಗೆ ಭಾರತೀಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಈ ಸಾಧನೆಯನ್ನು 80 ಪಂದ್ಯಗಳನ್ನು ಮಾಡಿದ್ದರು.
70 ಪಂದ್ಯಗಳಲ್ಲಿ 89 ವಿಕೆಟ್ ಪಡೆದಿರುವ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದರೆ, 108 ಪಂದ್ಯಗಳಲ್ಲಿ 88 ವಿಕೆಟ್ ಕಿತ್ತಿರುವ ಹಾರ್ದಿಕ್ ಪಾಂಡ್ಯ ಐದನೇ ಸ್ಥಾನದಲ್ಲಿದ್ದಾರೆ.