ಅಹ್ಮದಾಬಾದ್: ವಿಶ್ವದ ಅತೀ ದೊಡ್ಡ ಕ್ರೀಡಾಂಗಣ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ಜಾಗತಿಕ ಕ್ರಿಕೆಟಿನ ಬದ್ಧ ಎದುರಾಳಿಗಳ ಶನಿವಾರದ ಹೋರಾಟದಲ್ಲಿ ಪರಿಪೂರ್ಣ ಮೇಲುಗೈ ಸಾಧಿಸಿದ ಭಾರತ ಅಮೋಘ ಜಯ ದಾಖಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ರೋಹಿತ್ ಶರ್ಮ ನೇತೃತ್ವದ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
”ಟೀಮ್ ಇಂಡಿಯಾ ಎಲ್ಲಾ ರೀತಿಯಲ್ಲಿ!,ಅಹಮದಾಬಾದ್‌ನಲ್ಲಿ ಇಂದು ಅಮೋಘ ಗೆಲುವು, ಆಲ್‌ರೌಂಡ್ ಶ್ರೇಷ್ಠತೆ.ತಂಡಕ್ಕೆ ಅಭಿನಂದನೆಗಳು ಮತ್ತು ಮುಂದಿನ ಪಂದ್ಯಗಳಿಗೆ ಶುಭಾಶಯಗಳು” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗೃಹ ಸಚಿವ ಅಮಿತ್ ಶಾ ಕೂಡ ಹಾಜರಿದ್ದು ಪಂದ್ಯ ವೀಕ್ಷಿಸಿದರು. ಈ ವಿಶ್ವಕಪ್‌ನ ಹ್ಯಾಟ್ರಿಕ್ ಜಯವನ್ನು ಭಾರತ ಸ್ಮರಣೀಯವಾಗಿಸಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ ಅಗ್ರ ಸ್ಥಾನಕ್ಕೆ ಏರಿದೆ.
ಇದನ್ನೂ ಓದಿ: ODI World Cup; ಪಾಕಿಗೆ ಎಂಟನೇ ಏಟು ಕೊಟ್ಟ ಭಾರತ ಅಗ್ರ ಸ್ಥಾನದಲ್ಲಿ
1,32,000 ವೀಕ್ಷಕರ ಸಮ್ಮುಖದಲ್ಲಿ ನಡೆದ ಹಣಾಹಣಿಯಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ವೇಳೆ ಈ ಸ್ಟೇಡಿಯಂ ಹೌಸ್‌ಫುಲ್ ಆಗಿತ್ತು. ಪ್ರಮುಖವಾಗಿ ಭೀತಿ ಮೂಡಿಸಿದ್ದ ಮಳೆ ಪಂದ್ಯಕ್ಕೆ ಅಡ್ಡಿ ಪಡಿಸಲಿಲ್ಲ. ಭಾರತ ಗೆದ್ದ ನಂತರ 1 ಲಕ್ಷಕ್ಕೂ ಹೆಚ್ಚು ಜನರು ವಂದೇ ಮಾತರಂ ಹಾಡಿದರು.