Advertisement

ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್: ಮೂರು ಸ್ಪಿನ್ನರ್ ಗಳೊಂದಿಗೆ ಕಣಕ್ಕಿಳಿದ ವಿರಾಟ್

09:08 AM Feb 05, 2021 | Team Udayavani |

ಚೆನ್ನೈ: ಸುಮಾರು 330 ದಿನಗಳ ಸುದೀರ್ಘ ಬ್ರೇಕ್ ನ ನಂತರ ಭಾರತದ ನೆಲದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆರಂಭವಾಗಿದೆ. ಪ್ರವಾಸಿ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಚೆನ್ನೈ ಎಂ.ಎ. ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯುತ್ತದೆ. ಟಾಸ್ ಗೆದ್ದ ವಿರಾಟ್ ಕೊಹ್ಲಿ ಜೋ ರೂಟ್ ಮೊದಲು ಬ್ಯಾಟಿಂಗ್ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

Advertisement

ಬ್ರೇಕ್ ಪಡೆದಿದ್ದ ನಾಯಕ ವಿರಾಟ್ ಹಿಂದುರಿಗಿದ್ದು, ಇಂದು ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಮುಖ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ರವಿ ಅಶ್ವಿನ್ ತಂಡಕ್ಕೆ ಮರಳಿದ್ದಾರೆ. ಇದರಿಂದ ಟೀಂ ಇಂಡಿಯಾ ಮತ್ತಷ್ಟು ಬಲಿಷ್ಠವಾಗಿದೆ.

ಇದನ್ನೂ ಓದಿ:ಭಾರತ-ಇಂಗ್ಲೆಂಡ್‌ ಟೆಸ್ಟ್‌ ಸರಣಿ : ಭಾರತದ ರೂಟ್‌ ಸುಗಮವೇ?

ಇಂಗ್ಲೆಂಡ್ ತಂಡ ಕೂಡಾ ಉತ್ತಮವಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಯನ್ನು ವೈಟ್ ವಾಶ್ ಮಾಡಿ ಗೆದ್ದಿರುವ ಆತ್ಮವಿಶ್ವಾಸದಲ್ಲಿದೆ. ನಾಯಕ ರೂಟ್ ಭರ್ಜರಿ ಫಾರ್ಮ್ ನಲ್ಲಿದ್ದು, ಬೆನ್ ಸ್ಟೋಕ್ಸ್, ಆರ್ಚರ್ ತಂಡಕ್ಕೆ ಮರಳಿದ್ದಾರೆ. ವಿಶ್ವದರ್ಜೆಯ ಬೌಲರ್ ಆ್ಯಂಡರ್ಸನ್ ಕೂಡಾ ತಂಡದಲ್ಲಿದ್ದಾರೆ.

ಅಕ್ಷರ್ ಔಟ್: ಬಹಲ ಸಮಯದ ನಂತರ ಟೀಂ ಇಂಡಿಯಾ ಕರೆ ಪಡೆದಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯಗೊಂಡು ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

Advertisement

ಇದನ್ನೂ ಓದಿ: ಇಂಗ್ಲೆಂಡ್‌ ಜೆರ್ಸಿ ಧರಿಸಿ ಕಣಕ್ಕಿಳಿದ ಕ್ಷಣ ಸ್ಮರಣೀಯ: ಜೋ ರೂಟ್‌

ತಂಡಗಳು

ಭಾರತ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾ), ಅಜಿಂಕ್ಯ ರಹಾನೆ,  ರಿಷಭ್ ಪಂತ್, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಶಬಾಜ್ ನದೀಂ.

ಇಂಗ್ಲೆಂಡ್: ರೋರಿ ಬರ್ನ್ಸ್, ಡೊಮ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಜೋ ರೂಟ್ (ನಾ), ಬೆನ್ ಸ್ಟೋಕ್ಸ್, ಒಲಿ ಪೋಪ್, ಜೋಸ್ ಬಟ್ಲರ್ (ವಿ.ಕೀ),  ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಆ್ಯಂಡರ್ಸನ್ .

Advertisement

Udayavani is now on Telegram. Click here to join our channel and stay updated with the latest news.

Next