ನವದೆಹಲಿ: ಹಿರಿಯ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಇಂದು ಪುಣೆಯಲ್ಲಿ ನಿಧನ ಶನಿವಾರ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕೈಗಾರಿಕೋದ್ಯಮಿ ಅವರ ಹತ್ತಿರದ ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿನಿಧನ ಹೊಂದಿದ್ದಾರೆ ಎಂದು ಬಜಾಜ್ ಗ್ರೂಪ್‌ನ ಹೇಳಿಕೆ ತಿಳಿಸಿದೆ. ರಾಹುಲ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಭಾರತೀಯ ಬಿಲಿಯನೇರ್ ಉದ್ಯಮಿಯಾಗಿದ್ದ ರಾಹುಲ್ ಅವರಿಗೆ 2001 ರಲ್ಲಿ ಅವರಿಗೆ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಲಾಗಿತ್ತು.
2008 ರಲ್ಲಿ, ಅವರು ಬಜಾಜ್ ಆಟೋವನ್ನು ಮೂರು ಘಟಕಗಳಾಗಿ ವಿಭಜಿಸಿದ್ದರು. ಬಜಾಜ್ ಆಟೋ, ಹಣಕಾಸು ಕಂಪನಿ ಬಜಾಜ್ ಫಿನ್‌ಸರ್ವ್ ಮತ್ತು ಹೋಲ್ಡಿಂಗ್ ಕಂಪನಿ. ಅವರ ಮಕ್ಕಳಾದ ರಾಜೀವ್ ಬಜಾಜ್ ಮತ್ತು ಸಂಜೀವ್ ಬಜಾಜ್ ಈಗ ಕಂಪನಿಯ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದಾರೆ.
ರಾಹುಲ್ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜಮ್ನಾಲಾಲ್ ಬಜಾಜ್ ಅವರ ಮೊಮ್ಮಗ.
ಬಜಾಜ್ ನಿಧಾನಕ್ಕೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.