Advertisement

ತಿಂಗಳೊಳಗಾಗಿ ಕೈಗಾರಿಕಾ ತರಬೇತಿ ಕೇಂದ್ರ

07:23 AM Feb 04, 2019 | Team Udayavani |

ಕೋಲಾರ: ಜಿಲ್ಲೆಯಲ್ಲಿ ತಿಂಗಳೊಳಗಾಗಿ ಖಾಸ ಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು. ನಗರದ ಕೆಇಬಿ ಸಮುದಾಯ ಭವನ ದಲ್ಲಿ ದಲಿತ ಇಂಡಸ್ಟ್ರಿಯಲ್‌ ಅಸೋಸಿ ಯೇಷನ್‌ ಕರ್ನಾಟಕ ಆಯೋಜಿಸಿದ್ದ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Advertisement

ಯುಪಿಎ ಸರ್ಕಾರದಲ್ಲಿ ತಾವು ಸಚಿವರಾಗಿದ್ದಾಗ ದೇಶ ಹಿಂದೆಂದೂ ಕಾಣದಂತ ಕೈಗಾರಿಕೆ ಅಭಿವೃದ್ಧಿ ಮಾಡಲಾಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ 1 ಲಕ್ಷ ಕೈಗಾರಿಕೆಗಳನ್ನು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಈ ಉದ್ದಿಮೆಗಳಲ್ಲಿ ಪರಿಶಿಷ್ಟ ಜಾತಿಯ ಶೇ.5 ಮತ್ತು ಪರಿಶಿಷ್ಟ ಪಂಗಡದ ಶೇ.2 ಉದ್ದಿಮೆದಾರರು ಮಾತ್ರವೇ ಇದ್ದರೆಂದು ವಿಷಾದಿಸಿದರು.

ಸೂಕ್ತ ತರಬೇತಿ ಇಲ್ಲದಿರುವುದೇ ಇದಕ್ಕೆ ಕಾರಣವೆಂಬುದನ್ನು ಅರ್ಥ ಮಾಡಿಕೊಂಡ ತಾವು ಜಿಲ್ಲೆಗೆ ಕೈಗಾರಿಕೆ ತರಬೇತಿ ಕೇಂದ್ರ ಮಂಜೂರು ಮಾಡಿಸಿದ್ದಾಗಿ ವಿವರಿಸಿದರು. ದಲಿತ ಇಂಡಸ್ಟ್ರೀಸ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ಮಾಮಿಡಿ ಸುದರ್ಶನ್‌, ಕರ್ನಾಟಕದಲ್ಲಿ ಎರಡನೇ ಕಾರ್ಯಕ್ರಮ ವಾಗಿ ಆಯೋಜಿಸಲಾಗಿದೆ ಎಂದರು. ಈ ವೇಳೆ ದಲಿತ್‌ ಇಂಡಸ್ಟ್ರೀಸ್‌ ಅಸೋಸಿಯೇ ಷನ್‌ ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಲಾಲ್‌ಬಹಾದ್ದೂರ್‌ ಶಾಸ್ತ್ರೀ ಆಯ್ಕೆಯಾಗಿದ್ದಾರೆಂದು ಸಂಸದ ಕೆ.ಎಚ್.ಮುನಿಯಪ್ಪ ಘೋಷಿಸಿದರು.

ವೇದಿಕೆ ಮೇಲೆ ಜಿಲ್ಲಾ ಕೈಗಾರಿಕಾ ಕೇಂದ್ರದ ವೆಂಕಟರಮಣಪ್ಪ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಶ್ರೀನಿವಾಸರಾವ್‌, ಡಿಐಎ ಪದಾಧಿಕಾರಿಗಳಾದ ಎ.ಕೋಕಿಲ, ಚಿತ್ರ ಮದನ್‌, ಜಿಲ್ಲಾ ಕಿಸಾನ್‌ಖೇತ್‌ ಅಧ್ಯಕ್ಷ ಬುಸನಹಳ್ಳಿ ಆಂಜಿನಪ್ಪ, ಊರುಬಾಗಿಲು ಶ್ರೀನಿವಾಸ್‌, ಕುಮಾರ್‌, ಕೆ.ಜಯದೇವ್‌, ವೈ.ವಿ.ನರಸಿಂಹಮೂರ್ತಿ, ಎನ್‌.ಶ್ರೀನಿ ವಾಸ್‌, ಕೆ.ರಾಜೇಂದ್ರ ಪ್ರಸಾದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next