ಹಾವೇರಿ: ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಸುಮಾರು ಐದು ಲಕ್ಷ ಸ್ವಸಹಾಯ ಮಹಿಳೆಯರಿಗೆ ಉದ್ಯೋಗ ನೀಡುವ ಕಾರ್ಯಕ್ರಮಕ್ಕೆ ಜು.28ರಂದು ಚಾಲನೆ ನೀಡಲಾಗುತ್ತಿದ್ದು ಈ ಮೂಲಕ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ತಾಲೂಕಾ ಖರ್ಸಾಪುರ ಗ್ರಾಮದ ಹೊರವಲಯದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕಾಲ ಬದಲಾಗುತ್ತಿದೆ. ಭೂಮಿ ಎಷ್ಟಿದೇ ಅಷ್ಟೇ ಇದೆ. ಜನ ಹೆಚ್ಚಾಗುತ್ತಿದ್ದಾರೆ. ಭೂಮಿ ದೊಡ್ಡ ಮಾಡಲು ಆಗಲ್ಲ. ಭೂಮಿ ಮೆಚ್ಚಿಕೊಂಡಿವರು ಬದುಕು ಬದಲಾಯಿಸುವ ಅಗತ್ಯವಿದೆ. ರೈತ ಉಳಿದರೆ, ದೇಶ ಉಳಿಯುತ್ತದೆ. ಅವರ ಕುಟುಂಬ ಉಳಿದರೆ ದೇಶ ಉಳಿಯುತ್ತದೆ. ರೈತರ ಕುಟುಂಬದ ಆದಾಯ ಹೆಚ್ಚಾದರೆ ಎಲ್ಲರೂ ಸುಖವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಹಾಗಾಗಿ ನನ್ನ ಮೊದಲ ನಿರ್ಧಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಜಾರಿಗೆ ತಂದಿರುವೆ. ವಿದ್ಯೆ ಮತ್ತು ಉದ್ಯೋಗ ನೀಡುವುದು ನನ್ನ ಮೊದಲ ಗುರಿ. ಇಲ್ಲಿ ಉದ್ಯೋಗ ಸೃಷ್ಟಿಯಾದರೆ, ಆರ್ಥಿಕ ಸಬಲೀಕರಣ ಹೊಂದುತ್ತಾರೆ. ಯಾರು ಹೆಚ್ಚು ಉದ್ಯೋಗ ನೀಡುತ್ತಾರೋ ಅವರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದ್ದೇವೆ. ಯಾವ ಮಹಿಳೆಯರು ದುಡ್ಡಿಗಾಗಿ ಬೇರೆಯವರು ಬಳಿ ಕೈ ಚಾಚದಂತ ಬದುಕು ನೀಡಲು ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಎಲ್ಲಾ ತಾಲೂಕಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡಲಾಗುವ ಗುರಿ ಹೊಂದಿದ್ದೇವೆ. ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಲಿದ್ದೇವೆ. ಒಟ್ಟು ಈ ಕ್ಷೇತ್ರದಲ್ಲಿ 10 ಸಾವಿರ ಜನರಿಗೆ ಒಂದು ವರ್ಷದಲ್ಲಿ ಉದ್ಯೋಗ ಜವಳಿ ಪಾರ್ಕ್ ನಿಂದ ಉದ್ಯೋಗ ದೊರೆಯಲಿದೆ. ಉದ್ಯಮಿಗಳಿಗೆ ರಪ್ತು ಮಾಡಲು ಹೆಚ್ಚಿನ ಅವಕಾಶಗಳು ಇವೆ. ಇಡಿ ವಿಶ್ವ ಭಾರತದತ್ತ ನೋಡುತ್ತಿದೆ ಎಂದರು.
ಶಿಗ್ಗಾವಿ ಕ್ಷೇತ್ರದ ಜನರ ಋಣ ತೀರಿಸಲು ಸಾಧ್ಯವಿಲ್ಲ. ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ನೀವು ಮಾಡಿದ ಆರ್ಶಿವಾದದಿಂದ ಈ ಸ್ಥಾನಕ್ಕೆ ಬಂದು ನಿಮ್ಮ ಸೇವೆ ಮಾಡುತ್ತಿರುವೆ. ಬೆಂಗಳೂರಿನಲ್ಲಿ ಇದ್ದರೂ ನಿಮ್ಮ ಬಗ್ಗೆ ಸದಾಕಾಲವೂ ಚಿಂತೆ ಮಾಡುತ್ತೇನೆ. 100 ಕೋಟಿ ಹೆಚ್ಚು ರಸ್ತೆ ಅಭಿವೃದ್ಧಿ ಮಾಡುತ್ತಿರುವೆ. ರೈತರ ವಿಮೆ ಬಂದಿಲ್ಲಾ. ಅದನ್ನ ಬಗೆಹರಿಸುವೆ ಎಂದರು.
ಇದನ್ನೂ ಓದಿ:ಗುಜರಾತ್ ಗಲಭೆ ಹಿಂದೆ ಅಹ್ಮದ್ ಪಟೇಲ್, ಸೋನಿಯಾ ಪಿತೂರಿ: SIT; ಆರೋಪ ತಳ್ಳಿಹಾಕಿದ ಕಾಂಗ್ರೆಸ್
ಕಾರ್ಯಕ್ರಮದಲ್ಲಿ ಕೈಮಗ್ಗ, ಜವಳಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ರೈತರ ಮಕ್ಕಳು ಕ್ಷೇತ್ರದಲ್ಲಿ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಜವಳಿ ಪಾರ್ಕ್ ನೀಡಿದ್ದಾರೆ. ರೈತರ ಮಕ್ಕಳು ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಿದ್ದಾರೆ. ರಾಜ್ಯದ ಉದ್ದಗಲಕ್ಕೂ ರೈತರ ಮಕ್ಕಳಿಗೆ ಉದ್ಯೋಗ ನೀಡಲು ಜವಳಿ ಪಾರ್ಕ್ ಮಾಡಲು ಮುಂದಾಗಿದ್ದಾರೆ. ರೈತರ ಮಕ್ಕಳಿಗೆ ಶಿಷ್ಯ ವೇತನ, ರೈತರಿಗೆ ನೀರಾವರಿ ಯೋಜನೆ ತರುವ ಮೂಲಕ ರೈತರ ಪರವಾಗಿ ಹಗಳಿರುಳು ಶ್ರಮಿಸಲಿದ್ದಾರೆ. ಬಸವಣ್ಣನ ಪುಣ್ಯ ಭೂಮಿಗೆ 612 ಕೋಟಿ ನೀಡಿ, ಬಸವ ತತ್ವವನ್ನು ಸಾರಲು ಹೊರಟಿದ್ದಾರೆ. ಅಖಂಡ ಧಾರವಾಡ ಜಿಲ್ಲೆಯಲ್ಲಿ 15 ಸಾವಿರ ಜನರಿಗೆ ಉದ್ಯೋಗ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ ಸಿಇಓ ಮಹ್ಮದ್ ರೋಷನ್ ಇತರರು ಇದ್ದರು.