Advertisement

ಕೈಗಾರಿಕಾ ಉತ್ಪಾದನೆ 11 ತಿಂಗಳ ಗರಿಷ್ಠ: ಶೇ.8.11

06:00 AM Dec 13, 2018 | Team Udayavani |

ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆ ಶೇ.8.1ರಷ್ಟು ದಾಖಲಾಗಿದೆ. ಅದು ಕಳೆದ 11 ತಿಂಗಳ ಅವಧಿಯಲ್ಲಿಯೇ ಗರಿಷ್ಠ ಪ್ರಮಾಣದ್ದಾಗಿದೆ. ಗಣಿಗಾರಿಕೆ, ವಿದ್ಯುತ್‌ ಉತ್ಪಾದನೆ, ಉತ್ಪಾದನಾ ಕ್ಷೇತ್ರ, ಗ್ರಾಹಕರ ಬಳಕೆಯ ವಸ್ತುಗಳ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಾಡಲಾದ ಸಾಧನೆಯಿಂದ ಈ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ. ಕೇಂದ್ರ ಸಾಂಖೀಕ ಅಧಿಕಾರಿ ಬುಧವಾರ ಈ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಸೆಪ್ಟೆಂಬರ್‌ನ ಕೈಗಾರಿಕಾ ಉತ್ಪಾದನೆ ಶೇ.4.5ರಷ್ಟೇ ಇತ್ತು. ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯಲ್ಲಿ ಕೈಗಾರಿಕಾ ಕ್ಷೇತ್ರದ ಉತ್ಪಾದನೆ ಶೇ.5.6ರಷ್ಟು ಬೆಳವಣಿಗೆ ಸಾಧಿಸಿದೆ. ಹಿಂದಿನ ವಿತ್ತೀಯ ವರ್ಷದ ಅವಧಿಯ ಇದೇ ಸಮಯದಲ್ಲಿ ಅದರ ಪ್ರಮಾಣ ಶೇ.2.5 ಆಗಿತ್ತು. 

Advertisement

ಇದೇ ವೇಳೆ ಚಿಲ್ಲರೆ ಹಣದುಬ್ಬರ ಕೂಡ ಒಂದೂವರೆ ವರ್ಷದಷ್ಟು ಕಡಿಮೆಯಾಗಿದೆ. ಹೊಸ ಮಾಹಿತಿ ಪ್ರಕಾರ ನವೆಂಬರ್‌ನಲ್ಲಿ ಅದು ಶೇ.2.33ರಷ್ಟಾಗಿತ್ತು. 2017ರ ನವೆಂಬರ್‌ನಲ್ಲಿ ಅದು ಶೇ.4.88ರಷ್ಟಾಗಿತ್ತು. ಅದೇ ವರ್ಷದ ಜೂನ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ.1.46 ಆಗಿತ್ತು. ನಾಲ್ಕು ತಿಂಗಳ ಅವಧಿಯಲ್ಲಿ ಅಕ್ಕಿಯ ಬೆಲೆ ಗಣನೀಯವಾಗಿ ಕುಸಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next