Advertisement
ನಗರದಲ್ಲಿ ನೂತನ ಜಿಲ್ಲಾಡಳಿತ ಭವನ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆ ಸ್ಥಾಪನೆಗಾಗಿ ರಾಜ್ಯಾದ್ಯಂತ ಜಮೀನು ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಜಮೀನಿನಲ್ಲಿ ಎಷ್ಟು ಪ್ರಮಾಣದಲ್ಲಿ ಕೈಗಾರಿಕೆಗೆ ಬಳಸಲಾಗಿದೆ. ಎಷ್ಟು ಬಳಕೆಯಾಗದೆ ಹಾಗೆಯೇ ಉಳಿದಿದೆ ಎನ್ನುವುದನ್ನು ತಿಳಿಯಲು ಜಮೀನು ಆಡಿಟ್ ಮಾಡಲಾಗುವುದು ಎಂದರು.
Related Articles
Advertisement
ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಸಂಗ್ರಹಿಸಲು ನವಿಲೆ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಸಮಾನಾಂತರ ಜಲಾಶಯಕ್ಕೆ ಡಿಪಿಎಆರ್ ಸಿದ್ಧಗೊಂಡಿದೆ. ತುಂಗಭದ್ರಾ ಆಡಳಿತ ಮಂಡಳಿ ಅನುಮೋದನೆ ನೀಡಬೇಕಾಗಿದೆ. ಈ ಕುರಿತು ಆಂಧ್ರ ಸಿಎಂ ಬಳಿ ಚರ್ಚಿಸಿದ್ದೇನೆ. ಅವರು ತಾಂತ್ರಿಕ ತಂಡವನ್ನು ಕಳುಹಿಸಿದ್ದು, ನಮ್ಮ ರಾಜ್ಯದ ತಾಂತ್ರಿಕ ತಂಡಗಳು ಸಹ ಪರಿಶೀಲನೆ ನಡೆಸಿವೆ. ಜತೆಗೆ ಆಂಧ್ರ, ತೆಲಂಗಾಣ ರಾಜ್ಯಗಳ ನೀರಾವರಿ ಸಚಿವರೊಂದಿಗೆ ನಮ್ಮ ನೀರಾವರಿ ಸಚಿವರು, ನಾನು ಸೇರಿ ಚರ್ಚಿಸುತ್ತೇವೆ. ರಾಜ್ಯದ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ. ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಇದ್ದರು.