Advertisement

ನನಗೂ ದರ್ಶನ್ ಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆದರೆ… ಇಂದ್ರಜಿತ್ ಲಂಕೇಶ್ ಹೇಳಿದ್ದೇನು?

12:55 PM Jun 13, 2024 | Team Udayavani |

ಹುಬ್ಬಳ್ಳಿ: ನಟ ದರ್ಶನ ವಿಚಾರದಲ್ಲಿ ನಾನ್ಯಾಕೆ ಟಾಂಗ್ ನೀಡಲಿ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ‌ ಈ ಹಂತದಲ್ಲಿ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ನಿರ್ದೇಶಕ ಹಾಗು ಪತ್ರಕರ್ತ ಇಂದ್ರಜಿತ್ ಲಂಕೇಶ ಪ್ರತಿಕ್ರಿಯಿಸಿದರು.

Advertisement

ಗೌರಿ ಚಿತ್ರದ ಕುರಿತಾದ ಸುದ್ದಿಗೋಷ್ಠಿಯಲ್ಲಿ ದರ್ಶನ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದರ್ಶನ ಅವರೊಂದಿಗೆ ಎರಡು ಸಿನಿಮಾ ಮಾಡಿದ್ದೇನೆ. ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಆದರೆ ಸಮಾಜದಲ್ಲಿ ಇಂತಹ ಘಟನೆಗಳಾದಾಗ ಓರ್ವ ಪತ್ರಕರ್ತನಾಗಿ ಧ್ವನಿಯೆತ್ತಬೇಕಾಗುತ್ತಿದೆ‌. ಈ ನಿಟ್ಟಿನಲ್ಲಿ ಮಾತನಾಡಿದ್ದೇನೆಯೇ ವಿನಃ ಯಾವುದೇ ಟಾಂಗ್ ನೀಡಿಲ್ಲ. ಪ್ರಕರದ ತನಿಖೆ ಪೂರ್ಣಗೊಂಡ ನಂತರ ಎಲ್ಲವೂ ಸ್ಪಷ್ಟವಾಗಲಿದೆ. ಆಗ ಈ ಕುರಿತು ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.

ಸಾಮಾಜಿಕ ಜಾಲತಾಣಗಳು ಜನರ ಧ್ವನಿಯಾಗಿದೆ. ಅದನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕು. ಹಿಂದೆ ಓರ್ವ ಯುವಕ ನನ್ನ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ. ಅವನನ್ನು ಬಂಧಿಸುವ ಕೆಲಸ ಆಗಿತ್ತು. ಆದರೆ ಅವನ ತಂದೆ ತಾಯಿ ಕಣ್ಣೀರು ಹಾಕಿ ಕ್ಷಮಿಸುವಂತೆ ಬೇಡಿಕೊಂಡರು. ಅವರ ಕಣ್ಣೀರು ನೋಡಿ ಯುವಕನಿಗೆ ಬುದ್ದಿವಾದ ಹೇಳಿ ಕಳಿಸಿಕೊಟ್ಟಿದ್ದೆ. ಕೊಲೆಯ ಘಟನೆಯಿಂದ ಓರ್ವ ಮಹಿಳೆ ಪತಿಯನ್ನು ಕಳೆದುಕೊಂಡು ಅನ್ಯಾಯಕ್ಕೊಳಗಾಗಿದ್ದಾರೆ. ಅವರಿಗೆ ನ್ಯಾಯ ಸಿಗುವ ಕೆಲಸ ಆಗಬೇಕು. ಶೀಘ್ರದಲ್ಲಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳುವುದಾಗಿ ತಿಳಿಸಿದರು.

ಸಾಮಾಜಿಕ ಜಾಲಾತಾಣಗಳ ಬಗ್ಗೆ ಸರಕಾರ ನಿಗಾ ವಹಿಸಬೇಕು. ಈ ಕುರಿತು ಆಂದೋಲನ ಮಾದರಿಯಲ್ಲಿ ಹೋರಾಟ ಆರಂಭಿಸುತ್ತೇವೆ. ಸರಕಾರ ಸೈಬರ್ ಕ್ರೈಂ ಅಂತ ಮಾಡಿದೆ. ಅದು ಎಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಇದರಿಂದ ಯಾರಿಗೆ ಅನುಕೂಲವಾಗುತ್ತಿದೆ ಎಂಬುವುದು ಕೂಡ ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Online ನಲ್ಲಿ ಆರ್ಡರ್ ಮಾಡಿದ್ದ ಐಸ್‌ಕ್ರೀಮ್ ಕಂಡು ಆಘಾತಕ್ಕೆ ಒಳಗಾದ ಮಹಿಳೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next