Advertisement

ಬಳ್ಳ ರಾಕ್ಷಸನಿಗೆ ಇಂದ್ರ ಪ್ರಹಾರ

08:04 PM Nov 15, 2019 | Lakshmi GovindaRaju |

ಬಿಸಿಲ ನಾಡು ಬಳ್ಳಾರಿಯ ಸ್ಥಳ ಮಹಿಮೆಗೆ ಎರಡು ಕತೆಗಳಿವೆ. ಬಳ್ಳ ಎಂಬ ರಾಕ್ಷಸ ಈ ಪ್ರದೇಶದಲ್ಲಿ ವಾಸವಿದ್ದ. ಈ “ಬಳ್ಳ- ಅರಿ’ಯನ್ನು ಇಂದ್ರ ಸಂಹಾರ ಮಾಡುತ್ತಾನೆ. ಈ ತಾಣವೇ ಮುಂದೆ “ಬಳ್ಳಾರಿ’ ಆಯಿತು ಎನ್ನುವುದು ಒಂದು ಕತೆ. ಮತ್ತೂಂದು ಕತೆ ಶಿವನಿಗೆ ನಂಟು ಬೆಸೆಯುವಂಥದ್ದು. ಕೆಲವು ಶಿವಭಕ್ತರು, ಈ ಪ್ರದೇಶದಲ್ಲಿ ಒಂದು ರಾತ್ರಿ ತಂಗಿದ್ದರಂತೆ. ಮರು ಬೆಳಗಾದಾಗ ಅವರಿಗೆ ಪೂಜಿಸಲು ಶಿವಲಿಂಗವೇ ಕಾಣಿಸಲಿಲ್ಲ. ಆಗ ತಮ್ಮ ಬಳಿಯಿದ್ದ ಬಳ್ಳವನ್ನೇ (ಸೇರು), ನೆಲಮುಖವಾಗಿ ಇಟ್ಟು, ಲಿಂಗವೆಂದು ಭಾವಿಸಿ, ಪೂಜಿಸಿದರಂತೆ. ಬಳ್ಳ ಶಿವಲಿಂಗದ ಕಾರಣಕ್ಕೆ, ಮುಂದೆ ಇದು “ಬಳ್ಳಾರಿ’ ಆಯಿತು ಎನ್ನಲಾಗುತ್ತದೆ.

Advertisement

* ಸಂಗಪ್ಪ ಪಿ.ಕೆ, ಹೊಸಪೇಟೆ

Advertisement

Udayavani is now on Telegram. Click here to join our channel and stay updated with the latest news.

Next