Advertisement

ಸ್ವಚ್ಛ ನಗರಿ ಇಂದೋರ್ ಗೆ ಮತ್ತೆ ಮೊದಲ ಸ್ಥಾನ, ಮೈಸೂರಿಗೆ ಈ ಬಾರಿ 5ನೇ ಸ್ಥಾನ: ಸಮೀಕ್ಷೆ

01:50 PM Aug 20, 2020 | Nagendra Trasi |

ನವದೆಹಲಿ: 2020ರ ವಾರ್ಷಿಕ “ಸ್ವಚ್ಛ ಸರ್ವೇಕ್ಷಣಾ” ಸಮೀಕ್ಷೆಯು ಗುರುವಾರ (ಆಗಸ್ಟ್ 20, 2020) ಹೊರಬಿದ್ದಿದ್ದು, ಈ ಬಾರಿಯೂ ಮಧ್ಯಪ್ರದೇಶದ ಇಂದೋರ್ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿಕೊಂಡಿದೆ. ಇದರೊಂದಿಗೆ ಇಡೀ ದೇಶದಲ್ಲಿಯೇ ಸ್ವಚ್ಛತಾ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೈಸೂರಿಗೆ ಮೊದಲ ಸ್ಥಾನದ ಪಟ್ಟ ಕೈತಪ್ಪಿದಂತಾಗಿದೆ.

Advertisement

ಭಾರತದ ಸ್ವಚ್ಛನಗರಗಳಲ್ಲಿ ಇಂದೋರ್ ಸತತವಾಗಿ ನಾಲ್ಕನೇ ಬಾರಿ ಮೊದಲ ಸ್ಥಾನ ಪಡೆದಿದೆ. ಈ ಬಾರಿ ಗುಜರಾತ್ ನ ಸೂರತ್ ಎರಡನೇ ಸ್ವಚ್ಛ ನಗರಿ ಎಂದು ಸ್ಥಾನ ಪಡೆದಿದೆ. ಗೃಹ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲು ನಡೆಸಿದ “ಸ್ವಚ್ಛ ನಗರಿ” ಸಮೀಕ್ಷೆಯ ವರದಿಯಲ್ಲಿ ನವಿ ಮುಂಬೈ 3ನೇ ಸ್ಥಾನ ಪಡೆದಿದೆ ಎಂದು ತಿಳಿಸಿದೆ.

ದೇಶದಲ್ಲಿನ ಸ್ವಚ್ಛ ನಗರಿ ಪಟ್ಟಿಯನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಘೋಷಿಸಿದ್ದಾರೆ. ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ 2016ರ ಜನವರಿಯಲ್ಲಿ 73 ಪ್ರಮುಖ ನಗರಗಳಲ್ಲಿ ಸ್ವಚ್ಛತಾ ಸಮೀಕ್ಷೆ ನಡೆಸಿತ್ತು. ಅಲ್ಲದೇ ಈ ಸಮೀಕ್ಷೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ನಂಬರ್ ವನ್ ಸ್ಥಾನ ಪಡೆದಿತ್ತು.

ದೇಶದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಐದನೇ ಆವೃತ್ತಿಯಲ್ಲಿ ಚತ್ತೀಸ್ ಗಢದ ಅಂಬಿಕಾಪುರ್ 4ನೇ ಸ್ಥಾನ, ಕರ್ನಾಟಕದ ಮೈಸೂರು ಈ ಬಾರಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಂಧ್ರಪ್ರದೇಶದ ವಿಜಯವಾಡ 6ನೇ ಸ್ಥಾನ, ಗುಜರಾತ್ ನ ಅಹಮ್ಮದಾಬಾದ್ 7ನೇ ಸ್ಥಾನ, ನವದೆಹಲಿ ಎಂಟನೇ ಸ್ಥಾನ, ಮಹಾರಾಷ್ಟ್ರದ ಚಂದ್ರಾಪುರ್ ಒಂಬತ್ತನೇ ಸ್ಥಾನ ಹಾಗೂ ಮಧ್ಯಪ್ರದೇಶದ ಖಾರ್ಗೊನ್ ಹತ್ತನೇ ಸ್ಥಾನ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next