ಇಂದೋರ್: 36 ಜನರ ಸಾವು ನಡೆದ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಬೆಳೇಶ್ವರ ಮಹಾದೇವ್ ದೇವಸ್ಥಾನವನ್ನು ಕೆಡವಲಾಗಿದೆ. ಐದಕ್ಕೂ ಹೆಚ್ಚು ಬುಲ್ಡೋಜರ್ ಗಳು ಇಂದು ಅಕ್ರಮ ಕಟ್ಟಡವನ್ನು ಕೆಡವಿ ಹಾಕಿದೆ.
ಸೋಮವಾರ ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳ ದೊಡ್ಡ ದಂಡು ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ನಾಲ್ಕು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಘಟನಾ ಸ್ಥಳದಲ್ಲಿ ಉಪ ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಇದ್ದಾರೆ.
ಇದನ್ನೂ ಓದಿ:ವಿದ್ಯೆಗೆ ಅಡ್ಡಿಯಾಗದ ವಿಕಲಚೇತನ: ಎದ್ದು ನಡೆಯದಾತ ಎಸ್‌ಎಸ್ ಎಲ್ ಸಿ ಪರೀಕ್ಷೆ ಬರೆಯಲು ಸಿದ್ದ
ಕೆಲ ದಿನಗಳ ಹಿಂದೆ ಈ ದೇವಸ್ಥಾನದ ಒಳಗಡೆ ಕುಸಿತವಾಗಿ 36 ಜನರು ಅಸುನೀಗಿದ್ದರು. ಕುಸಿದ ದೇವಾಲಯದ ಪ್ರದೇಶವು ಅಕ್ರಮ ರಚನೆಯಾಗಿದೆ ಎಂದು ಅದನ್ನು ಮೆಟ್ಟಿಲುಬಾವಿಯ ಹೊದಿಕೆಯನ್ನು ನೆಲಸಮ ಮಾಡಲು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ಕಳೆದ ವರ್ಷ ಸೂಚಿಸಿತ್ತು. ಆದರೆ ದೇವಾಲಯದ ಟ್ರಸ್ಟ್ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದ ನಂತರ ಮುನಿಸಿಪಾಲಿಟಿ ಅದರಿಂದ ಹಿಂದೆ ಸರಿದಿತ್ತು.
ರಾಮ ನವಮಿಯಂದು ಜನಸಂದಣಿಯ ಭಾರದಿಂದ ಮೆಟ್ಟಿಲುಬಾವಿಯ ಮೇಲ್ಛಾವಣಿ ಒಡೆದು ಹೋಗಿತ್ತು. ಘಟನೆ ನಡೆದಾಗ ದೇವಸ್ಥಾನದಲ್ಲಿ ಹವನ ನಡೆಯುತ್ತಿತ್ತು.