Advertisement
2016ರಲ್ಲಿ ಕ್ರೀಡಾ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಮಂಜೂರು ಮಾಡಿದ ಈ ಹೈಟೆಕ್ ಟೆನ್ನಿಸ್ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿತಿ ಕೇಂದ್ರ ನಿರ್ಮಿಸುತ್ತಿದೆ. 2018ರ ಎಪ್ರಿಲ್‌ಗೆ ಟೆಂಡರ್ ಅವಧಿ ಪೂರ್ಣಗೊಂಡಿದ್ದರೂ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ 8 ತಿಂಗಳು ಹೆಚ್ಚುವರಿ ಅವಕಾಶ ಪಡೆದು ನಿರ್ಮಿತಿ ಕೇಂದ್ರ ಕಾಮಗಾರಿ ನಡೆಸುತ್ತಿದೆ. ಡಿ.25ರೊಳಗೆ ಕ್ರೀಡಾ ಇಲಾಖೆಗೆ ಬಿಟ್ಟುಕೊಡುವುದಾಗಿ ನಿರ್ಮಿತಿ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಹ್ಮಾವರ, ಉಡುಪಿ, ಮಣಿಪಾಲದಲ್ಲಿ ಸಾಕಷ್ಟು ಟೆನ್ನಿಸ್ ಆಟಗಾರರಿದ್ದಾರೆ. ಅವರು ಮಣ್ಣಿನ ಕೋರ್ಟ್‌ನಲ್ಲಿ ಆಡುತ್ತಿದ್ದಾರೆ. ಇದೀಗ ಹೈಟೆಕ್ ಕೋರ್ಟ್ ನಿರ್ಮಾಣ ವಾಗುತ್ತಿರುವುದರಿಂದ ಸಾಕಷ್ಟು ಅನುಕೂಲಕರವಾಗಿದೆ. ಇದರಿಂದ ಸಾಕಷ್ಟು ಯುವ ಪ್ರತಿಭೆಗಳಿಗೆ ಟೆನ್ನಿಸ್‌ನಲ್ಲಿ ಸಾಧನೆ ಮಾಡಲು ಅವಕಾಶ ದೊರೆಯುತ್ತದೆ.
Related Articles
– ಒಟ್ಟು 3.75 ಕೋ.ರೂ.
– 14600 ಚ.ಅ. ವಿಸ್ತೀರ್ಣ
– ಎರಡು ಟೆನ್ನಿಸ್ ಕೋರ್ಟ್
– ಎರಡು ತರಬೇತುದಾರರ ಕೊಠಡಿ
– 3 ಮಹಿಳಾ, 3 ಪುರುಷರ ಡ್ರೆಸ್ಸಿಂಗ್ ರೂಮ್
– 600 ಮಂದಿ ಪ್ರೇಕ್ಷಕರಿಗೆ ಅವಕಾಶ
– 600 ಎಲ್‌ಯುಕೆ ಸಾಮರ್ಥ್ಯದ ಎಲ್‌ಐಡಿ ದೀಪ
– ನಿರ್ಮಿತಿ ಕೇಂದ್ರದಿಂದ ನಿರ್ಮಾಣ
Advertisement
ಬಳಸಲಾದ ಅನುದಾನ– ಕ್ರೀಡಾ ಇಲಾಖೆಯಿಂದ 2.5 ಕೋ.ರೂ.
– ಆಸ್ಕರ್ ಫೆರ್ನಾಂಡಿಸ್ ರಾಜ್ಯಸಭಾ ಸದಸ್ಯರ ನಿಧಿಯಿಂದ 1 ಕೋ.ರೂ.
– ಜಿಲ್ಲಾಡಳಿತ 10 ಲ.ರೂ.
– ನಗರಸಭೆ 10 ಲ.ರೂ.
– ಜಿಲ್ಲಾ ಕ್ರೀಡಾ ಸಮಿತಿ 5 ಲ. ರೂ. ಟೆನ್ನಿಸ್‌ಗೆ ಪ್ರೋತ್ಸಾಹ
ನಮ್ಮಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದ್ದು, ಸೂಕ್ತ ಸೌಕರ್ಯಗಳ ಕೊರತೆಯಿತ್ತು. ಇದೀಗ ಅಜ್ಜರಕಾಡು ಕ್ರೀಡಾ ಸಂಕೀರ್ಣವಾಗಿ ಬೆಳೆದು ಎಲ್ಲ ಕ್ರೀಡೆಗಳಿಗೂ ಅವಕಾಶ ಸಿಕ್ಕಿದೆ. ಈ ಒಳಾಂಗಣ ಕ್ರೀಡಾಂಗಣದಲ್ಲಿ ಉತ್ತಮ ಕೋಚ್ ಸಿಕ್ಕಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರ ನಿರ್ಮಾಣ ಸಾಧ್ಯ.
– ದೇವಾನಂದ, ಉಡುಪಿ ಲೇನ್ ಟೆನ್ನಿಸ್ ಅಸೋಸಿಯೇಶನ್ ಅಧ್ಯಕ್ಷ ವರ್ಷದ ಅಂತ್ಯದೊಳಗೆ ಉದ್ಘಾಟನೆ
ಡಿ. 15ರೊಳಗೆ ನಿರ್ಮಿತಿ ಕೇಂದ್ರ ಒಳಾಂಗಣ ಟೆನ್ನಿಸ್ ಕೋರ್ಟ್‌ನ್ನು ಬಿಟ್ಟುಕೊಟ್ಟಲ್ಲಿ ಈ ವರ್ಷಾಂತ್ಯದೊಳಗೆ ಉದ್ಘಾಟನೆಗೊಳ್ಳಲಿದೆ.
– ಡಾ| ರೋಶನ ಕುಮಾರ್ ಸ. ನಿರ್ದೇಶಕ, ಕ್ರೀಡಾ ಇಲಾಖೆ