ಜಕಾರ್ತ: ಎಲ್ಲಿ ನೋಡಿದರಲ್ಲಿ ಕೆಂಪು ನೀರು. ಇಡೀ ಹಳ್ಳಿಯೇ ಕೆಂಬಣ್ಣದಲ್ಲಿ ತೊಯ್ದಂತೆ…! ಇದು ಇಂಡೋನೇಷ್ಯಾದ ಪೆಕಲಾಂಗನ್ ಸಮೀಪದ ಜೆನ್ ಗಾಟ್ ಹಳ್ಳಿಯ ವರ್ಣಮಯ ದೃಶ್ಯ.
ಇದೇ ಹಳ್ಳಿ ಕೆಲ ದಿನಗಳ ಹಿಂದೆ ಕಡುನೀಲಿ, ನೆರಳೆ ಬಣ್ಣಗಳಿಗೂ ತಿರುಗಿತ್ತು. ಅರೆ! ಇದೇನು ಊಸರವ(ಹ)ಳ್ಳಿಯೇ? ಖಂಡಿತಾ ಅಲ್ಲ. ಪೆಕಲಾಂಗನ್ ಪಟ್ಟಣ ದೇಶದ ಅತಿ ದೊಡ್ಡ “ಬಾಟಿಕ್ ಜವಳಿ ಕೈಗಾರಿಕಾ ಹಬ್’. ಅತ್ಯದ್ಭುತ ಕುಸರಿ ಕಲೆಯನ್ನೊಳಗೊಂಡ ಬಾಟಿಕ್ ಬಟ್ಟೆಗಳಿಗೆ ವಿವಿಧ ಬಣ್ಣ ಬಳಸಲಾಗುತ್ತದೆ.
ಅಧಿಕ ಮಳೆಯಿಂದ ಪ್ರವಾಹ ನುಗ್ಗಿದಾಗ, ಆ ಬಣ್ಣವನ್ನೆಲ್ಲ ಕರಗಿಸಿಕೊಂಡು, ನೀರು ವರ್ಣಮಯವಾಗುತ್ತದೆ. ಅಂದ ಹಾಗೆ ಈ ಬಣ್ಣ ನೈಸರ್ಗಿಕವಾಗಿರುವ ಕಾರಣ, ಸ್ಥಳೀಯರಿಗೆ “ರಾಸಾಯನಿಕ ಭೀತಿ’ ಕಾಡುವುದಿಲ್ಲ. “ಒಂದು ಮಳೆ ಬಿದ್ರೆ ನೀರಿನ ಬಣ್ಣ ಬದಲಾಗುತ್ತೆ’ ಅಂತಾರೆ ಸ್ಥಳೀಯರು.
ಇದನ್ನೂ ಓದಿ:ಬೆಳಗ್ಗೆ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ್ದ ಸದಸ್ಯೆ ಸಂಜೆಯಾಗುತ್ತಲೇ ಮತ್ತೆ ಕಾಂಗ್ರೇಸ್ ಗೆ