Advertisement

ಕ್ವಾರ್ಟರ್‌ ಫೈನಲ್‌ಗೆ ಸೇನ್‌, ಸಿಂಧು

11:13 PM Jun 09, 2022 | Team Udayavani |

ಜಕಾರ್ತಾ: ಇಂಡೋನೇಷ್ಯಾ ಮಾಸ್ಟರ್ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್‌ ಮತ್ತು ಪಿ.ವಿ. ಸಿಂಧು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್‌ ಡೆನ್ಮಾರ್ಕ್‌ನ ರಾಸ್ಮಸ್‌ ಜಿಮೆR ವಿರುದ್ಧ 21-18, 21-15 ಅಂತರದ ಗೆಲುವು ಸಾಧಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಲಕ್ಷ್ಯ ಸೇನ್‌ ವಿಶ್ವದ 13ನೇ ರ್‍ಯಾಂಕಿಂಗ್‌ ಆಟಗಾರನೆದರು 54 ನಿಮಿಷಗಳ ಕಾಲ ಹೋರಾಡಿದರು. ಇದು ಸೇನ್‌-ಜಿಮ್ಕೆ ನಡುವಿನ ಮೊದಲ ಮುಖಾಮುಖಿಯಾಗಿತ್ತು. ಕೂಟದಲ್ಲಿ 7ನೇ ಶ್ರೇಯಾಂಕ ಪಡೆದಿರುವ ಭಾರತೀಯ ಆಟಗಾರನ ಮುಂದಿನ ಎದುರಾಳಿ ಚೈನೀಸ್‌ ತೈಪೆಯ ಚೊ ಟೀನ್‌ ಚೆನ್‌.

ಪಿ.ವಿ. ಸಿಂಧು ಆತಿಥೇಯ ದೇಶದ ಗ್ರೆಗೊರಿಯಾ ಮರಿಸ್ಕಾ ಟುನ್‌ಜುನ್‌ ವಿರುದ್ಧ 3 ಗೇಮ್‌ಗಳ ಕಠಿನ ಹೋರಾಟದ ಬಳಿಕ 23-21, 20-22, 21-11 ಅಂತರದಿಂದ ಗೆದ್ದು ಬಂದರು.

Advertisement

Udayavani is now on Telegram. Click here to join our channel and stay updated with the latest news.

Next