Advertisement

ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌: ಸಿಂಧು, ಲಕ್ಷ್ಯ ಗೆಲುವಿನ ಆರಂಭ

08:11 PM Nov 16, 2021 | Team Udayavani |

ಬಾಲಿ(ಇಂಡೋನೇಷ್ಯಾ): ಒಲಿಂಪಿಕ್ಸ್‌ ಅವಳಿ ಪದಕ ವಿಜೇತೆ ಭಾರತದ ಸ್ಟಾರ್‌ ಶಟ್ಲರ್‌ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್‌ ಅವರು ಮಂಗಳವಾರ ಆರಂಭವಾದ ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಗೆಲುವಿನ ಆರಂಭ ಮಾಡಿದ್ದಾರೆ.

Advertisement

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸಿಂಧು ಥಾಯ್ಲೆಂಡ್‌ನ‌ ಸುಪಿನಿದಾ ಕೇಟ್‌ಥೋಂಗ್‌ ಅವರನ್ನು 21-15, 21-19 ನೇರ ಗೇಮ್‌ಗಳಿಂದ ಮಣಿಸಿ ದ್ವಿತೀಯ ಸುತ್ತಿಗೆ ಏರಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಯುವ ಆಟಗಾರ ಲಕ್ಷ್ಯ ಸೇನ್‌ ವಿಶ್ವದ ನಂ. 10 ಶ್ರೇಯಾಂಕಿತ ಜಪಾನಿನ ಕೆಂಟಾ ತ್ಸುನೆಯಾಮ ಅವರನ್ನು 21-17, 18-21, 21-17 ಅಂತರದಿಂದ ಮಣಿಸಿದರು.

ಇದನ್ನೂ ಓದಿ:ಜಾಕೀರ್‌ ಸಂಸ್ಥೆ ಮೇಲಿನ ನಿಷೇಧ ಮತ್ತೆ 5 ವರ್ಷ ವಿಸ್ತರಣೆ

ಇವರಿಬ್ಬರ ಹೋರಾಟ ಒಂದು ಗಂಟೆ, 8 ನಿಮಿಷದ ವರೆಗೆ ಸಾಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next