Advertisement

ಇಂಡೋನೇಷ್ಯಾ: ದಾಖಲೆ ಏರಿಕೆ ; ಇಂಡೋನೇಷ್ಯಾ ಒಂದೇ ದಿನ 1043 ಪಾಸಿಟಿವ್‌ ಕೇಸು

02:20 PM Jun 10, 2020 | mahesh |

ಜಕಾರ್ತಾ: ಲಾಕ್‌ಡೌನ್‌ ಸಡಿಲಗೊಳಿಸಿದ ಬಳಿಕ ಇಂಡೋನೇಷ್ಯಾದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಏರಿಕೆ ಕಂಡಿವೆ.  ಮಂಗಳವಾರ ಒಂದೇ ದಿನ 1043 ಪಾಸಿಟಿವ್‌ ಕೇಸುಗಳು ಪತ್ತೆಯಾಗಿವೆ. ಇಂಡೋನೇಷ್ಯಾದ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ 33076 ಪ್ರಕರಣಗಳು ಕಂಡು ಬಂದಿದ್ದು, 1923 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು 14414 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

Advertisement

ಈ ಮೊದಲು ಜಕಾರ್ತದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಇಳಿಕೆಯಾಗುತ್ತಿವೆ ಎಂದು ಹೇಳಲಾಗುತ್ತಿತ್ತು. ಆದರೆ ಒಂದೇ ದಿನ 232 ಕೇಸುಗಳು ಪತ್ತೆಯಾಗಿದ್ದು ಇಡೀ ನಗರವನ್ನು ಬೆಚ್ಚಿ ಬೀಳಿಸಿವೆ. ಲಾಕ್‌ಡೌನ್‌ ಸಡಿಲವಾದ್ದರಿಂದ ಇಲ್ಲಿನ ಜನಜೀವನ ಸಹಜ ಸ್ಥಿತಿಗೆ ಬರುತ್ತಿದ್ದು, ಜನರ ಓಡಾಟವೂ ಹೆಚ್ಚಿತ್ತು ಎಂದು ಹೇಳಲಾಗಿದೆ. ಲಾಕ್‌ಡೌನ್‌ ಅನ್ನು ತರಾತುರಿಯಲ್ಲಿ ಸಡಿಲಗೊಳಿಸಿರುವುದು ಮತ್ತು ಸರಕಾರದ ಕ್ರಮಗಳಿಂದಾಗಿ ಪ್ರಕರಣಗಳು ದೇಶದ ವಿವಿಧೆಡೆ ಏರಿಕೆ ಕಂಡಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದರಲ್ಲೂ ರಾಜಧಾನಿ ಜಕಾರ್ತದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವುದು ನಗರ ವಾಸಿಗಳನ್ನು ಬೆಚ್ಚಿ ಬೀಳಿಸಿದೆ.  ಇನ್ನು ಪೂರ್ವ ಜಾವಾದಲ್ಲಿ 180 ಪ್ರಕರಣಗಳು ಕಂಡು ಬಂದಿದ್ದು, ದಕ್ಷಿಣ ಕಲಿಮಂತನ್‌ನಲ್ಲಿ 91 ಪ್ರಕರಣಗಳು ಕಂಡು ಬಂದಿವೆ.

ಈ ಮೊದಲು ಶನಿವಾರ ದೇಶದಲ್ಲಿ 993 ಪ್ರಕರಣ ಗಳು ಕಂಡು ಬಂದಿದ್ದು ಇದು ಈವರೆಗಿನ ಸರ್ವಾಧಿಕ ದಾಖಲೆಯಾಗಿತ್ತು.  ಕೋವಿಡ್‌ ಲಾಕ್‌ಡೌನ್‌ ತೆರವುಗೊಂಡ ಬಳಿಕ ಪ್ರತ್ಯೇಕ ನಿಯಮಗಳನ್ನು ಇಂಡೋನೇಷ್ಯಾ ಸರಕಾರ ಜಾರಿ ಮಾಡಿದ್ದು, ಸಮೂಹಕ್ಕೆ ಅನ್ವಯವಾಗುವಂತಹ ಕಾನೂನುಗಳನ್ನು ಜಾರಿಗಳಿಸಿತ್ತು. ಅದರಂತೆ ಎ.10ರಿಂದ ಈ ನಿಯಮಗಳು ಜಾರಿ ಯಾಗಿದ್ದವು. ಶಾಲೆ, ಕಚೇರಿ, ಧಾರ್ಮಿಕ ಕೇಂದ್ರಗಳು ಮುಚ್ಚಿದ್ದವು. ಸೋಮವಾರದಿಂದ ಇವುಗಳನ್ನು ತೆರೆಯಲು ಉದ್ದೇಶಿಸಲಾಗಿತ್ತ. ಅದರಂತೆ ರೆಸ್ಟೋರೆಂಟ್‌ಗಳು, ಕಚೇರಿಗಳು, ಮೃಗಾಲಯಗಳು ತೆರೆದುಕೊಂಡಿದ್ದವು.

ಜಕಾರ್ತ ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ಆರಂಭಿಸಲು ಅನುಮತಿ ನೀಡಿತ್ತು. ವಾಹನಗಳ ಓಡಾಟಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿತ್ತು.  ಕೋವಿಡ್‌ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ ಜಕಾರ್ತದಲ್ಲಿ ರೆಡ್‌ಝೋನ್‌ಗಳಿಂದ ಗ್ರೀನ್‌ ಝೋನ್‌ಗಳಿಗೆ ಮತ್ತು ಯಲ್ಲೋ ಝೋನ್‌ಗಳಿಗೆ ಸಾರ್ವಜನಿಕ ಸಾರಿಗೆ ಮತ್ತು ವಾಹನಗಳ ಓಡಾಟಕ್ಕೆ ಅನುಮತಿ ಕಲ್ಪಿಸಿದ್ದಾಗಿ ಅಲ್ಲಿನ ಗವರ್ನರ್‌ ಅನೀಸ್‌ ಬಾಸ್ವೀಡನ್‌ ಅವರು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next