Advertisement

ಇಂಡೋ-ವೆಸ್ಟರ್ನ್ ಫ್ಯೂಷನ್‌ ಡ್ರೆಸ್ಸುಗಳು

03:35 AM Jul 14, 2017 | |

ಹೆಸರಿಗೆ ತಕ್ಕಂತೆ ಇವು ಭಾರತೀಯ ಮತ್ತು ಪಾಶ್ಚಿಮಾತ್ಯ ವಿನ್ಯಾಸಗಳ ಸಮ್ಮಿಲನದಿಂದ ಉಗಮವಾದಂತಹ ದಿರಿಸುಗಳು. ಬಹಳ ಹಿಂದಿನಿಂದಲೂ ಈ ಬಗೆಯ ಫ್ಯೂಷನ್‌ ಡ್ರೆಸ್ಸುಗಳು ಮಾರುಕಟ್ಟೆಯಲ್ಲಿ ಬರುತ್ತಲೇ ಇವೆ. ಆದರೆ ಹಲವು ಹೊಸ ಪ್ರಯೋಗಗಳ ಮತ್ತು ಹೊಸ ಬಗೆಯದಾದ ಸೃಜನಶೀಲತೆಯ ಫ‌ಲವಾಗಿ ಇಂದು ಈ ಇಂಡೋ-ವೆಸ್ಟೆರ್ನ್ ಬಟ್ಟೆಗಳು ಫ್ಯಾಷನ್‌ ಲೋಕವನ್ನು ಆಳುತ್ತಿವೆ. ಜನರ ವಿಭಿನ್ನ ಅಭಿರುಚಿಗಳಿಗೆ ತಕ್ಕಂತಹ ಮಾದರಿಗಳನ್ನು ತಯಾರಿಸುವ ಅನೇಕ ಫ್ಯಾಶನ್‌ ಡಿಸೈನಿಂಗ್‌ ಕಂಪೆನಿಗಳೇ ಹುಟ್ಟಿಕೊಂಡಿವೆ. 

Advertisement

ಕಾಲಕ್ಕೆ ತಕ್ಕಂತೆ ಮಾರ್ಪಾಡುಗಳನ್ನು ಮಾಡಿ ತಯಾರಿಸಿದ ಮಾದರಿಗಳನ್ನು ಫ್ಯಾಷನ್‌ ಶೋಗಳ ಮೂಲಕ ಪರಿಚಯಿಸುತ್ತಲೇ ಇರುತ್ತವೆ. ಒಂದೊಂದು ಬಗೆಯ ಮಾದರಿಯ ಹಿಂದೆಯೂ ಒಬ್ಬೊಬ್ಬ ಡಿಸೈನರ್‌ನ ಶ್ರಮವಿರುತ್ತದೆೆ. ಭಾರತೀಯ ಮತ್ತು ಪಾಶ್ಚಿcಮಾತ್ಯ ಉಡುಗೆಗಳ ರಿಮಿಕ್ಸಿನಂತಿರುವ ಈ ಡ್ರೆಸ್ಸುಗಳು ಹಲವಾರು ವಿಧಗಳಲ್ಲಿ ಮಾರುಕಟ್ಟೆಗೆ ಬರುತ್ತಿರುತ್ತವೆ. ಅವುಗಳಲ್ಲಿ ಕೆಲವನ್ನು ಸಧ್ಯದ ಟ್ರೆಂಡನ್ನು ಗಮನಿಸಿಕೊಂಡು ವಿವರಿಸಲಾಗಿದೆ.

ಜಾಕೆಟ್‌ ಮತ್ತು ಲೆಹೆಂಗ
ಸಾಧಾರಣ ಲೆಹೆಂಗಕ್ಕೆ ಟ್ರೆಂಡಿ ಲುಕ್ಕನ್ನು ಕೊಡುವ ಸಲುವಾಗಿ ಡಿಸೈನ್‌ ಮಾಡಲಾದ ದಿರಿಸು ಈ ಜಾಕೆಟ್‌ ವಿಥ್‌ ಲೆಹೆಂಗ. ಇವುಗಳು ಟಿಪಿಕಲ್‌ ಲೆಹೆಂಗಾ-ಟಾಪ್‌(ಬ್ಲೌಸ್‌) -ದುಪ್ಪಟ್ಟ ಕಾಂಬಿನೇಶನ್ನಿಗಿಂತ ಭಿನ್ನವಾದುದು. ಸ್ಟೈಲಿಶ್‌ ಮತ್ತು ಟ್ರೆಂಡಿಯಾದ ಉಡುಪಾಗಿದೆ. ಇವುಗಳಲ್ಲಿ ಮತ್ತೆ ಹಲವಾರು ಬಗೆಯ ಡಿಸೈನುಗಳು ಲಭ್ಯವಿದ್ದು ಆಯ್ಕೆಗೆ ಅವಕಾಶಗಳಿವೆ. ಇವುಗಳನ್ನು ಬೇರೆಬೇರೆ ಯಾಗಿಯೂ ಖರೀದಿಸಬಹುದು. ಲೆಹಂಗಾಕ್ಕೆ ಹೊಂದುವಂತಹ ಜಾಕೆಟ್ಟುಗಳನ್ನು ಮ್ಯಾಚ್‌ ಮಾಡಿಕೊಳ್ಳಬಹುದು. ಫ್ರಂಟ್‌ ಸ್ಲಿಟ್‌, ಸೈಡ್‌ ಸ್ಲಿಟ್‌, ಹೈಯ್‌-ಲೊ ಕುರ್ತಾಗಳನ್ನು ಜಾಕೆಟ್ಟಿನಂತೆ ಮಾದರಿಗೊಳಿ ಸಲಾಗಿರುತ್ತದೆ. ಕ್ಯಾಶುವಲ್‌ ಮತ್ತು ಫ‌ಂಕ್ಷನ್‌ ದಿರಿಸುಗಳು ಎರಡೂ ಮಾದರಿಗಳಲ್ಲಿ ಲಭಿಸುತ್ತವೆ. ಇವುಗಳು ಇಂಡೋ-ವೆಸ್ಟೆರ್ನ್ ಡ್ರೆಸ್ಸಾಗಿರುವುದರಿಂದ ಮದುವೆ ಸಮಾರಂಭಗಳಿಗೆ ಹಾಗೂ ಮೆಹೆಂದಿ ಇನ್ನಿತರ ಸೆಮಿ-ವೆಸ್ಟೆರ್ನ್ ಸಮಾರಂಭಗಳಲ್ಲಿಯೂ ಧರಿಸಬಹುದು. ಈ ಬಗೆಯ ಉಡುಪುಗಳಿಗೆ ವಯಸ್ಸಿನ ಮಿತಿಯಿರುವುದಿಲ್ಲ.
 
ಎಥಿ°ಕ್‌ ಕ್ರಾಪ್‌ ಟಾಪ್‌
ಲಾಂಗ್‌ ಸ್ಕರ್ಟ್‌ ಅಥವ ಲೆಹೆಂಗಾಗಳಿಗೆ ಕ್ರಾಪ್‌ ಟಾಪ್‌ಗ್ಳನ್ನು ಧರಿಸುವುದು ಸದ‌Âದ ಲೇಟೆಸ್ಟ್‌ ಟ್ರೆಂಡಾಗಿದೆ. ಮೊದಲು ಸೆಲೆಬ್ರೆಟಿಗಳಿಂದ ಪ್ರಚಲಿತವಾಗಿ ಸದ‌Âದಲ್ಲಿ ಜನಸಾಮಾನ್ಯರ ವರೆಗೂ ಬಂದು ರನ್ನಿಂಗ್‌ ಫ್ಯಾಷನ್‌ ಎನಿಸಿದೆ. ಸಾಂಪ್ರದಾಯಿಕ  ಸಮಾರಂಭಗಳಿಗೆ ಸೂಕ್ತವಾದುದು. ಟ್ರೆಡಿಶನಲ್‌ ಟಚ್‌ ಇದ್ದರೂ ಮಾಡರ್ನ್ ಲುಕ್‌ ಕೊಡುವ ಇವುಗಳು ತೊಡಲು ಮತ್ತು ನೋಡಲು ಸುಂದರವಾಗಿರುತ್ತವೆ. ಸಿಲ್ಕ್, ಡೂಪಿಯಾನ್‌, ಜಾರ್ಜೆಟ್‌, ಕಾಟನ್‌ ಎಲ್ಲಾ ಬಗೆಯ ಬಟ್ಟೆಗಳಲ್ಲಿಯೂ ದೊರೆಯುವ ಇವುಗಳು ಕಾಂಟ್ರಾಸ್ಟ್‌ ಕಲರ್‌ ಮತ್ತು ಕಾಂಟ್ರಾಸ್ಟ್‌ ಡಿಸೈನುಗಳಲ್ಲಿ ಲಭಿಸುತ್ತವೆ. ಸ್ಕರ್ಟ್‌ ಡಿಸೈನದ್ದಾದರೆ ಕ್ರಾಪ್‌ಟಾಪ್‌ ಪ್ಲೆ„ನ್‌ ಆಗಿದ್ದು, ಕ್ರಾಪ್‌ಟಾಪ್‌ ಡಿಸೈನದ್ದಾಗಿದ್ದರೆ ಸ್ಕರ್ಟ್‌ ಪ್ಲೆ„ನ್‌ ಆಗಿರುತ್ತವೆ.

ಫ್ಯೂಷನ್‌ ಸೀರೆಗಳು
ಸೀರೆಗೆ ಮಾಡರ್ನ್ ಟಚ್‌ ಕೊಡುವುದರ ಮೂಲಕ ಫ್ಯೂಷನ್‌ ವೇರ್‌ ಆಗಿ ಪರಿಣಮಿಸಿರುವ ಈ ಬಗೆಯ ದಿರಿಸುಗಳು ಹೆಚ್ಚಾಗಿ ಸೆಲೆಬ್ರಿಟಿಗಳಿಂದ ಬಳಸಲ್ಪಡುತ್ತಿದೆ. ಸೀರೆ‌ಯನ್ನು ವಿಭಿನ್ನ ಬಗೆಯಲ್ಲಿ ಟ್ವಿಸ್ಟ್‌ ಮಾಡಿದಂತಿರುವ ಈ ಬಗೆಯ ಡ್ರೆಸ್ಸುಗಳು ಸಖತ್‌ ಸ್ಟೈಲಿಶ್‌ ಆಗಿರುತ್ತವೆ. ಮತ್ತು ಸೀರೆಯಲ್ಲಿ ಹೊಸ ಸ್ಟೈಲ್‌ ಸ್ಟೇಟೆ¾ಂಟನ್ನು ಸೃಷ್ಟಿಸುವಂತದ್ದಾಗಿದೆ. ಇವುಗಳು ಸೀರೆಗಳಂತೆ ಧರಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಪಾರ್ಟಿಗಳಿಗೆ ಹೇಳಿಮಾಡಿಸಿದಂತಿರುತ್ತವೆ.

ಸಲ್ವಾರ್‌ ಜಂಪ್‌ ಸೂಟ್‌
ಇವುಗಳು ಸಲ್ವಾರ್‌ ಮತ್ತು ಮಾಡರ್ನ್ ಜಂಪ್‌ ಸೂಟುಗಳ ಫ‌ೂಷನ್‌ ಡ್ರೆಸ್ಸಾಗಿದೆ.  ಈ ಬಗೆಯ ಉಡುಪಿನ ಕೆಳಭಾಗ ಧೋತಿ ಪ್ಯಾಂಟ್‌ಗೆ ಹೋಲುವಂತಿದ್ದರೆ ಟಾಪ್‌ಗೆ ಅಟ್ಯಾಚ್‌ ಆಗಿರುತ್ತವೆ. ಇವುಗಳ ಮೇಲೆ ಬೇಕಾದ ವೇಸ್ಟ್‌ ಕೋಟನ್ನು ಧರಿಸುವುದು ಫ್ಯಾಷನ್ನಾಗಿದೆ. ಇವುಗಳನ್ನು ನುರಿತ ಟೈಲರ್‌ ಬಳಿ ನಾವೇ ಹೊಲಿಸಿಕೊಳ್ಳಬಹುದು. ಹೆಚ್ಚಾಗಿ ಶಿಫಾನ್‌ ಅಥವಾ ಜಾರ್ಜೆಟ್‌ ಬಟ್ಟೆಯಲ್ಲಿ ಈ ಬಗೆಯ ಡ್ರೆಸ್ಸುಗಳು ಹೆಚ್ಚು ಅಂದವಾಗಿ ಮೂಡಿಬರುತ್ತವೆ. ಇವುಗಳಿಗೆ ನಿಮಗೆ ಬೇಕಾದ ಬಟ್ಟೆಗಳಿಂದಾದ ಕೋಟುಗಳನ್ನು ಧರಿಸಬಹುದು. ಕ್ಯಾಶುವಲ್‌ವೇರ್‌ ಅಥವ ಸಣ್ಣಪುಟ್ಟ ಪಾರ್ಟಿಗಳಿಗೆ  ಸೂಕ್ತವೆನಿಸುತ್ತವೆ.

Advertisement

ಲಾಂಗ್‌ ಕುರ್ತಾಗಳು ವಿದ್‌ ಫ್ರಂಟ್‌ ಸ್ಲಿಟ್‌ ಮತ್ತು ಟ್ಯುಲಿಪ್‌ಗ್ಳು (ಧೋತಿ  ಪ್ಯಾಂಟುಗಳು) ಅಥವಾ ಪ್ರಿಂಟೆಡ್‌ ಲೆಗ್ಗಿಂಗುಗಳ ಜೋಡಿ ಲಾಂಗ್‌ ಕುರ್ತಾಗಳು ಕೇವಲ ಸೈಡ್‌ ಸ್ಲಿಟ್‌ ಅಷ್ಟೇ ಅಲ್ಲದೆ ಫ್ರಂಟ್‌ ಸ್ಲಿಟ್‌ ಮಾದರಿಯಲ್ಲಿಯೂ ದೊರೆಯುತ್ತವೆ ಇವಕ್ಕೆ ಸಾಧಾರಣ ಲೆಗ್ಗಿಂಗುಗಳನ್ನು ಧರಿಸುವ ಬದಲು ಈ ಬಗೆಯ ಕುರ್ತಾಗಳಿಗೆ ಟ್ಯುಲಿಪ್‌ಗ್ಳನ್ನು (ಧೋತಿ ಅಥವ ಪೈಜಾಮ ಸ್ಟೈಲಿನಲ್ಲಿರುವ ಪ್ಯಾಂಟುಗಳು) ಧರಿಸುವುದರಿಂದ ಇಂಡೋ-ವೆಸ್ಟರ್ನ್ ಲುಕ್ಕನ್ನು ಕೊಡುತ್ತವೆ. ಈ ಟ್ಯುಲಿಪ್‌ಗ್ಳಿಗೆ ಕುರ್ತಾ ಅಷ್ಟೇ ಅಲ್ಲದೆ ಟ್ಯುನಿಕ್‌ಗಳನ್ನು ಧರಿಸಬಹುದು. ಫ್ರಂಟ್‌ ಸ್ಲಿಟೆಡ್‌ ಕುರ್ತಾದೊಂದಿಗೆ ಕಾಂಟ್ರಾಸ್ಟ್‌ ಪ್ರಿಂಟೆಡ್‌ ಜೆಗ್ಗಿಂಗುÕಗಳು ಬಹಳ ಸ್ಟೈಲಿಶ್‌ ಆಗಿ ಕಾಣುತ್ತವೆ. 

ಪೆಪ್ಲಮ್‌ ಬ್ಲೌಸು, ಕೇಪ್‌ ಬ್ಲೌಸು, ಆಫ್ ಸ್ಲಿàವ್‌ ಬ್ಲೌಸು, ಹಾಫ್ ನೆಟ್‌ ಬ್ಲೌಸು ಮತ್ತು ಸೀರೆಗಳು
ಸಾಂಪ್ರದಾಯಿಕ ದಿರಿಸಾದ ಸೀರೆಯನ್ನು ಬೇರೆ ಬೇರೆ ಮಾದರಿಯ ಬ್ಲೌಸುಗಳನ್ನು ಬಳಸಿ ವೆಸ್ಟರ್ನ್ ಲುಕ್‌ ಕೊಡುವಂತೆ ಮಾಡ‌ಬಹುದು. ಪೆಪ್ಲಮ್‌, ಕೇಪ್‌, ಆಫ್ಸ್ಲಿàವ್‌, ಸ್ಲಿàವ್‌ಲೆಸ್‌, ಹಾಫ್ ನೆಟ್‌ ಬ್ಲೌಸ್‌ ಇನ್ನಿತರೆ ಮಾಡರ್ನ್ ಟಚ್‌ ಇರುವ ಬ್ಲೌಸ್‌ಗಳನ್ನು ಬಳಸಿ ಸೀರೆಯನ್ನೂ ಇಂಡೋವೆಸ್ಟರ್ನೈಸ್‌ ಗೊಳಿಸಬಹುದಾಗಿದೆ. ಪಾರ್ಟಿಗಳಿಗೆ ಬಹಳ ಚೆನ್ನಾಗಿ ಒಪ್ಪುತ್ತವೆ. ವಯೋಮಾನದ ಮಿತಿಯಿರುವುದಿಲ್ಲ.

ಡ್ರೆಸ್‌ ಮಾದರಿಯ ಅನಾರ್ಕಲಿ ಕುರ್ತಾಗಳು
ಅನಾರ್ಕಲಿ ಕುರ್ತಾಗಳ ಟ್ರೆಂಡ್‌ ಮುಗಿದು ಇದೀಗ ಅನಾರ್ಕಲಿ ಡ್ರೆಸ್ಸಿನ ಹೊಸ ವರ್ಶನ್ನಿನಂತಿರುವ ಡ್ರೆಸ್ಸುಗಳು ಮಾರುಕಟ್ಟೆಗೆ ಬಂದಿವೆ. ಲಾಂಗ್‌ ಗೌನಿಗೆ ಹೋಲುವ ಇವುಗಳು ಅನಾರ್ಕಲಿ ಶೈಲಿಯನ್ನು ಹೊಂದಿರುತ್ತವೆ. ಹಲವಾರು ನೆಕ್‌ ಡಿಸೈನುಗಳಿಂದ, ಬಗೆ ಬಗೆಯ ಬಟ್ಟೆಗಳಿಂದ ತಯಾರಾಗುವ ಇವುಗ‌ಳು ಮಲ್ಟಿಲೇಯರ್ಡ್‌ ಆಗಿಯೂ ದೊರೆಯುತ್ತವೆ. ಫ‌ಂಕ್ಷನ್‌ ವೇರಾಗಿ ಬಳಸಬಹುದು.

ಇನ್ನೂ ಅನೇಕ ಬಗೆಯ ದಿರಿಸುಗಳು ದಿನದಿಂದ ದಿನಕ್ಕೆ ಮಾರುಕಟ್ಟೆಗೆ ಬರುತ್ತಿವೆ. ಇವುಗಳು ಸದ‌Âದ ಟ್ರೆಂಡಿ ಉಡುಪುಗಳಾಗಿವೆ.

– ಪ್ರಭಾ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next