Advertisement

ರಕ್ಷಣೆ ಸೇರಿ 8 ಒಪ್ಪಂದಗಳಿಗೆ ಭಾರತ-ನೇಪಾಳ ಸಹಿ

07:55 AM Aug 25, 2017 | |

ಹೊಸದಿಲ್ಲಿ: ರಕ್ಷಣಾ ಸಹಕಾರ ಸಹಿತ 8 ಮಹತ್ವದ ಒಪ್ಪಂದಗಳಿಗೆ ಗುರುವಾರ ಭಾರತ- ನೇಪಾಲ ಸಹಿ ಹಾಕಿವೆ. 
ಇದೇ ಸಂದರ್ಭ, ಭಾರತಕ್ಕೆ ವಿರುದ್ಧವಾದ ಯಾವುದೇ ಚಟುವಟಿಕೆಗೆ ತನ್ನ ನೆಲದಲ್ಲಿ ಅವಕಾಶ ಕೊಡುವುದಿಲ್ಲ ಎಂದು ನೇಪಾಲ ಭರವಸೆ ನೀಡಿದೆ. 4 ದಿನಗಳ ಭಾರತ ಪ್ರವಾಸದಲ್ಲಿರುವ ನೇಪಾಲ ಪ್ರಧಾನಿ ಶೇರ್‌ ಬಹಾದ್ದೂರ್‌ ದೇವುಬಾ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಸ್ತೃತ ಮಾತುಕತೆ ನಡೆಸಿದ್ದಾರೆ. 

Advertisement

ಈ ವೇಳೆ ಇಬ್ಬರೂ ನಾಯಕರು ಭದ್ರತಾ ಪಡೆಗಳು ಮತ್ತು ರಕ್ಷಣೆ ವಿಚಾರದಲ್ಲಿ ಹೆಚ್ಚು ಸಹಕಾರ ನೀಡುವ ಬಗ್ಗೆ ಒಮ್ಮತಕ್ಕೆ ಬಂದಿದ್ದಾರೆ. ಜತೆಗೆ ಭಾರತ-ನೇಪಾಲ ಗಡಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರು ವುದರ ವಿರುದ್ಧ, ನೇಪಾಲದಲ್ಲಿ ಭೂಕಂಪ ಬಳಿಕ ಪುನರ್‌ನಿರ್ಮಾಣ, ಮಾದಕ ವಸ್ತು ಕಳ್ಳಸಾಗಣೆ ತಡೆ ವಿರುದ್ಧ ಒಪ್ಪಂದಕ್ಕೆ ಬರಲಾಗಿದೆ. ಮಾತುಕತೆ ಬಳಿಕ ನಡೆದ ಮಾಧ್ಯಮಗೋಷ್ಠಿ ಯಲ್ಲಿ ಮಾತನಾಡಿದ ಪ್ರಧಾನಿ ಮೋದಿ “ರಕ್ಷಣಾ ಒಪ್ಪಂದ ಮತ್ತು ಭದ್ರತಾ ಸಹಕಾರ ನಮ್ಮ ಸಹಕಾರದಲ್ಲಿ ಮಹತ್ವದ್ದಾಗಿದೆ. 

ರಕ್ಷಣಾ ವಲಯದಲ್ಲಿ ನಮ್ಮ ಆಸಕ್ತಿಗಳು ಪರಸ್ಪರ ಅವಲಂಬನೆ ಹೊಂದಿದ್ದು, ಸಂಪರ್ಕ ಹೊಂದಿವೆ ಎಂದು ಹೇಳಿದ್ದಾರೆ. ಅಲ್ಲದೇ ತಮ್ಮ ಸಹವರ್ತಿ ಬೆಂಬಲ, ನೆರವು, ಸಹಕಾರ ನೀಡುವುದಾಗಿ ಭರವಸೆಯಿತ್ತಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ. ನಾಯಕರ ಮಾತುಕತೆ ವೇಳೆ ಪ್ರವಾಹ ನಿರ್ವಹಣೆ, ನೀರಾವರಿ ವ್ಯವಸ್ಥೆಯ ಬಗ್ಗೆಯೂ ಚರ್ಚೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next