Advertisement

ಭಾರತ-ಲಂಕಾ ವಿಶ್ವಕಪ್‌ ಫೈನಲ್‌ ಫಿಕ್ಸ್‌ !

01:58 AM Jun 19, 2020 | Sriram |

ಕೊಲಂಬೊ: ಕ್ರಿಕೆಟ್‌ನಲ್ಲಿ ಯಾವಾಗ ಮ್ಯಾಚ್‌ ಫಿಕ್ಸಿಂಗ್‌, ಸ್ಪಾಟ್‌ ಫಿಕ್ಸಿಂಗ್‌ ಅವ್ಯವಹಾರಗಳು ಕಾಣಿಸಿಕೊಂಡವೋ, ಅಂದಿನಿಂದ ಪ್ರತಿಯೊಂದು ಗೆಲವು ಮತ್ತು ಸೋಲನ್ನು ಅನುಮಾನದಿಂದಲೇ ಕಾಣಬೇಕಾದ ಪರಿಸ್ಥಿತಿ ಎದುರಾಗಿದೆ.

Advertisement

ಇದೀಗ 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಸರದಿ. ಮುಂಬಯಿಯಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಈ ಮುಖಾಮುಖೀ ಫಿಕ್ಸ್‌ ಆಗಿತ್ತು ಎಂಬುದಾಗಿ ಲಂಕೆಯ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮಗೆ ಸ್ಫೋಟಕ ಹೇಳಿಕೆ ಯೊಂದನ್ನು ನೀಡಿದ್ದಾರೆ!2011ರ ವಿಶ್ವಕಪ್‌ ಫೈನಲ್‌ ವೇಳೆ ಮಹಿಂದಾನಂದ ಶ್ರೀಲಂಕಾದ ಕ್ರೀಡಾ ಸಚಿವ ರಾಗಿದ್ದರು. ಮಹೇಂದ್ರ ಸಿಂಗ್‌ ಧೋನಿ ಪಡೆ ಈ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದಿತ್ತು. ಭಾರತ 28 ವರ್ಷಗಳ ಬಳಿಕ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

ಹೊರಗಿನವರು ಭಾಗಿ
“ಇದರಲ್ಲಿ ಕ್ರಿಕೆಟಿಗರೂ ಸೇರಿಕೊಂಡಿದ್ದಾರೆ ಎಂದು ಹೇಳಲು ನಾನು ಬಯಸುವುದಿಲ್ಲ. ಆದರೆ ಖಂಡಿತವಾಗಿಯೂ ಹೊರಗಿನ ಕೆಲವು ನಿರ್ದಿಷ್ಟ ತಂಡಗಳು ಫಿಕ್ಸಿಂಗ್‌ನಲ್ಲಿ ಭಾಗಿ ಯಾಗಿವೆ’ ಎಂಬುದಾಗಿ “ನ್ಯೂಸ್‌ ಫ‌ಸ್ಟ್‌’ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಚಿವ ಮಹಿಂದಾನಂದ ಹೇಳಿದ್ದಾರೆ.

“ಇದನ್ನು ನಾನು ಕ್ರೀಡಾ ಸಚಿವನಾಗಿದ್ದಾಗಲೇ ಹೇಳಿದ್ದೆ. ದೇಶದ ಹಿತಾಸಕ್ತಿಯಿಂದ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಷಯವನ್ನು ಬಹಿ ರಂಗಗೊಳಿಸಲಾಗದು. ಅಲ್ಲದೇ ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯೂ ಇದೆ. ಆದರೆ ಈ ಪಂದ್ಯವನ್ನು ಶ್ರೀಲಂಕಾ ಗೆಲ್ಲಬಹುದಿತ್ತು, ಅಷ್ಟೇ…’ ಎಂದು ದ್ವೀಪರಾಷ್ಟ್ರದ ಮಾಜಿ ಕ್ರೀಡಾ ಸಚಿವರು ಹೇಳಿದರು.

ತವರಲ್ಲೇ ವಿಶ್ವಕಪ್‌
ಈ ಪಂದ್ಯವನ್ನು ಗೆಲ್ಲುವ ಮೂಲಕ ತವರಲ್ಲೇ ವಿಶ್ವಕಪ್‌ ಎತ್ತಿದ ಮೊದಲ ತಂಡವೆಂಬ ಹಿರಿಮೆಗೆ ಭಾರತ ಭಾಜನವಾಯಿತು. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರಿಗೆ ವಿಶ್ವಕಪ್‌ ಟ್ರೋಫಿಯನ್ನು ಅರ್ಪಿಸಬೇಕೆಂಬ ಎಷ್ಟೋ ವರ್ಷಗಳ ಯೋಜನೆ ಅವರ ಹುಟ್ಟೂರಿನ ಅಂಗಳದಲ್ಲೇ ಸಾಕಾರಗೊಂಡಿತ್ತು.

Advertisement

ಜಯವರ್ಧನ, ಸಂಗಕ್ಕರ ಕಿಡಿ
ಮಾಜಿ ಕ್ರೀಡಾ ಸಚಿವರ ಈ ಹೇಳಿಕೆಗೆ ಅಂದಿನ ಲಂಕಾ ತಂಡದ ಸದಸ್ಯ ಮಾಹೇಲ ಜಯವರ್ಧನ, ನಾಯಕ ಕುಮಾರ ಸಂಗಕ್ಕರ ಕಿಡಿಕಾರಿದ್ದಾರೆ. “ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ನಾನಾ ರೀತಿಯ ಸರ್ಕಸ್‌ ಕೂಡ ಆರಂಭವಾದಂತಿದೆ. ವಿಶ್ವಕಪ್‌ ಫೈನಲ್‌ ಫಿಕ್ಸ್‌ ಆಗಿದೆ ಎಂಬುದನ್ನು ಅವರು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ನಿರೂಪಿಸಲಿ’ ಎಂದು ಜಯವರ್ಧನ ಸವಾಲೆಸೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next