Advertisement

ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ 

02:26 PM Mar 19, 2019 | |

ಪುಣೆ: ನ್ಯೂ ಕಬಡ್ಡಿ ಫೆಡರೇಶನ್‌ ಆಶ್ರಯದಲ್ಲಿ ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಕಬಡ್ಡಿ ಪಂದ್ಯಾಟಕ್ಕೆ ಮಾ. 15ರಿಂದ ಮಾ. 17ರ ವರೆಗೆ ಪುಣೆಯ ಬಾಲೆವಾಡಿಯ ಛತ್ರಪತಿ ಶಿವಾಜಿ ಮಹಾರಾಜ್‌ ಕ್ರೀಡಾ ಸಂಕುಲದಲ್ಲಿ ಆಟಗಾರರ ಗ್ರೇಡಿಂಗ್‌ ಮತ್ತು ಬಿಡ್ಡಿಂಗ್‌  ಪ್ರಕ್ರಿಯೆ  ನಡೆದಿದ್ದು, ಮಾ. 16ರಂದು ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.

Advertisement

ಈ ಸಂದರ್ಭ ಇಂಡೋ ಇಂಟರ್‌ ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಇದರ ಮುಖ್ಯ ಪ್ರವರ್ತಕರಾದ ಹಾಗೂ ಎನ್‌ಕೆಎಫ್‌ ಸಂಸ್ಥೆಯ ಕಾರ್ಯದರ್ಶಿ ಎಂ. ವಿ. ಪ್ರಸಾದ್‌ ಬಾಬು ಮಾತನಾಡಿ, ದೇಶಾದ್ಯಂತ ಆಯ್ಕೆಗೊಂಡಿರುವ 170 ಆಟಗಾರರನ್ನು ಗ್ರೇಡಿಂಗ್‌ ಮತ್ತು ಬಿಡ್ಡಿಂಗ್‌ ಮೂಲಕ 8 ಫ್ರಾಂಚೈಸಿ ಮಾಲಕರಿಗೆ ವಿವಿಧ ತಂಡಗಳಲ್ಲಿ ಹಂಚುವ ಪ್ರಕ್ರಿಯೆ ನಡೆಯುತ್ತಿದ್ದು ಆಟಗಾರರನ್ನು ನಾಲ್ಕು ಶ್ರೇಣಿಗಳಲ್ಲಿ ಗುರುತಿಸಿಕೊಳ್ಳಲಾಗುವುದು. ಎ ಕೆಟಗರಿಯಲ್ಲಿ ಬರುವ ಆಟಗಾರರಿಗೆ ತಲಾ ರೂ. ಹತ್ತು ಲಕ್ಷ, ಬಿ ಕೆಟಗರಿಯಲ್ಲಿ ಬರುವ ಆಟಗಾರರಿಗೆ ರೂ. 8 ಲಕ್ಷ, ಸಿ ಕೆಟಗರಿ ಹಾಗೂ ಡಿ ಕೆಟಗರಿಯಲ್ಲಿ ಬರುವ ಆಟಗಾರರಿಗೆ ಕ್ರಮವಾಗಿ ತಲಾ ರೂ. 6 ಲಕ್ಷ ಮತ್ತು 2 ಲಕ್ಷ ರೂ. ಹಣವನ್ನು ನೀಡಲಾಗುವುದು ಎಂದು ನುಡಿದು ಶುಭ ಹಾರೈಸಿದರು .

ಪಂದ್ಯಾಟದಲ್ಲಿ ಒಟ್ಟು ಎಂಟು  ತಂಡಗಳು ಭಾಗವಹಿಸಲಿದ್ದು,  ದೇಶಾದ್ಯಂತ ಐದು ಆಯ್ಕೆ ಪ್ರಕ್ರಿಯೆಯ ಮೂಲಕ ಆಟಗಾರ ರನ್ನು ಆಯ್ಕೆಗೊಳಿಸಲಾಗಿದೆ. ಸೇಲಂ ತಮಿಳ್ನಾಡು, ಕೇರಳ, ಪಾಂಡಿಚೇರಿ, ವಿಜಯವಾಡ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ, ದೆಹಲಿ, ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್‌, ಉತ್ತರಾಖಂಡ್‌ ಹಾಗೂ ಮಹಾರಾಷ್ಟ್ರಗಳಲ್ಲಿ ಆಯ್ಕೆ ಪ್ರಕ್ರಿಯೆಗಳನ್ನು ನಡೆಸಲಾಯಿತು.

ರೈಲ್ವೆಯ 22 ಆಟಗಾರರು, ಐಟಿಬಿಪಿ ಹಾಗೂ ಸಿಆರ್‌ಪಿಎಫ್‌ನಿಂದಲೂ ಆಟಗಾರ ರನ್ನು ಆಯ್ಕೆಗೊಳಿಸಲಾಗಿದೆ. ಐಐಪಿಕೆಎಲ್‌ ಇದರ ಪ್ರತಿಯೊಂದು ಪಂದ್ಯಾಟಗಳಲ್ಲಿ ಮೂರು ಅಂತಾರಾಷ್ಟ್ರೀಯ ಆಟಗಾರರನ್ನು ಒಳಗೊಂಡಿದ್ದು ಅವರಿಗೆ ತಲಾ ರೂ. ಹತ್ತು ಲಕ್ಷ ನೀಡಲಾಗುವುದು. ಇದೇ ಸಂದರ್ಭದಲ್ಲಿ ಮಹಿಳಾ ಪಂದ್ಯಾಟವನ್ನು ಇದರೊಂದಿಗೆ ನಡೆಸಲಾಗುವುದು. ಒಲಿಂಪಿಕ್ಸ್‌ನಲ್ಲಿ ಕಬಡ್ಡಿ ಪಂದ್ಯಾಟವನ್ನು ಒಳ
ಗೊಳ್ಳುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದ್ದು ನಮ್ಮ ಲೀಗ್‌ನ ಮೂಲಕ ಅರ್ಜುನ ಅವಾರ್ಡ್‌ ಪಡೆದ ಆಟಗಾರರು ಹಾಗೂ ಸುಮಾರು 36 ಅಂತಾರಾಷ್ಟ್ರೀಯ ಆಟಗಾರರ ತಂಡವನ್ನು ರಚಿಸಲಾಗಿದ್ದು  ಐಐಪಿಕೆಎಲ… ಯಶಸ್ವಿಯಾಗಿ ಆಯೋಜನೆಗೊಳ್ಳಲು ಇವರು ಶ್ರಮ ವಹಿಸಲಿ¨ªಾರೆ. ನಮ್ಮ ಲೀಗ್‌ನ ಮೂಲಕ ಈಗಾಗಲೇ 9 ಅಂತಾರಾಷ್ಟ್ರೀಯ ಪಂದ್ಯಾಟಗಳಲ್ಲಿ ಆಟಗಾರರು ಪಾಲ್ಗೊಂಡಿ ¨ªಾರೆ. ಮೇ. 4ರಿಂದ ಜೂ. 8ರವರೆಗೆ ಪಂದ್ಯಾಟವನ್ನು ಆಯೋಜಿಸಲು ಬಹು ತೇಕವಾಗಿ ತೀರ್ಮಾನಿಸಲಾಗಿದ್ದು  ಅಂತಿಮ
ದಿನಾಂಕವನ್ನು ಇನ್ನಷ್ಟೇ ಅಂತಿಮ ಗೊಳಿಸಲಾಗುವುದು. ನಮ್ಮ ಪಂದ್ಯಾಟದಲ್ಲಿ ಗಳಿಸಿದ ಲಾಭಾಂಶದ ಶೇ. 20 ರಷ್ಟು ಹಣವನ್ನು ನಮ್ಮ ಆಟಗಾರರಿಗೆ ಹಂಚಲಾಗುವುದು. ಶೇ.  20 ನ್ನು ಫ್ರಾಂಚೈಸಿಗಳಿಗೆ, ಶೇ.  10ರಷ್ಟನ್ನು ನಿವೃತ್ತ ಆಟಗಾರರಿಗೆ, ಶೇ.  10ರಷ್ಟನ್ನು  ಕಬಡ್ಡಿ ಅಭಿವೃದ್ಧಿ ನಿಧಿಗಾಗಿ ಹಾಗೂ ಶೇ. 10 ರಷ್ಟನ್ನು  ಪುಲ್ವಾಮಾ ಘಟನೆಯಲ್ಲಿ ಹುತಾತ್ಮ ಯೋಧರ ಕುಟುಂಬಕ್ಕಾಗಿ ನೀಡಲಾಗುವುದು ಎನ್‌ಕೆಎಫ್‌ ಸಂಸ್ಥೆಯ ಕಾರ್ಯದರ್ಶಿ ಎಂ. ವಿ. ಪ್ರಸಾದ್‌ ಬಾಬು ತಿಳಿಸಿದರು.

ಮೊದಲಿಗೆ ತಂಡದ ಆಯ್ಕೆ ಪ್ರಕ್ರಿಯೆ ಸಮಿತಿಯ ಸದಸ್ಯರಾದ ಶಿವಛತ್ರಪತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಶನ್‌ ಇದರ ಮಾಜಿ ಸಿಇಓ ಜಯ ಎ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ ಕಬಡ್ಡಿ ಆಟಗಾರರಿಗೆ ಅವಕಾಶಗಳನ್ನು ಕಲ್ಪಿಸುವುದಕ್ಕಾಗಿ ಐಐಪಿಕೆಎಲ… ಪ್ರಯತ್ನಿಸುತ್ತಿದೆ. ಕಳೆದ ಒಂದು ವರ್ಷದಿಂದ ನಾವೆಲ್ಲರೂ ಇದರೊಂದಿಗೆ ಕೈಜೋಡಿಸಿದ್ದೇವೆ. ಪ್ರಸಾದ್‌ ಬಾಬುರವರು ಇದರ ಮುಖ್ಯ ಪ್ರವರ್ತಕರಾಗಿದ್ದು ಲೀಗ್‌ನ ಯಶಸ್ಸಿಗಾಗಿ ಅಪಾರವಾಗಿ ಶ್ರಮಿಸುತ್ತಿ¨ªಾರೆ. ಇಲ್ಲಿ ಫ್ರಾಂಚೈಸಿಯವರೊಂದಿಗೆ ನಾವೆಲ್ಲರೂ ಯಾವುದೇ ಭೇದ ಭಾವ ಮಾಡದೆ ಒಗ್ಗಟ್ಟಿನಿಂದ ಒಂದೇ ಕುಟುಂಬದಂತೆ ಕಬಡ್ಡಿ ಆಟವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ  ಶ್ರಮಿಸುತ್ತಿದ್ದೇವೆ ಎಂದರು.

Advertisement

ಈ ಸಂದರ್ಭದಲ್ಲಿ  ಐಐಪಿಕೆಎಲ್‌ ಅಧ್ಯಕ್ಷರಾದ ಸರ್ವೇಶ್‌ ಕುಮಾರ್‌, ಕಾರ್ಯಾಧ್ಯಕ್ಷರಾದ ಎಂ. ಎಸ್‌. ವೆಂಕಟೇಶ್‌, ನಿರ್ದೇಶಕರಾದ ರವಿ ಕಿರಣ್‌, ಅರ್ಜುನ ಅವಾರ್ಡ್‌ ಪುರಸ್ಕೃತ ಆಟಗಾರರಾದ ರಾಜರತ್ನಂ, ಹೊನ್ನಪ್ಪ, ತೀರ್ಥರಾಜ್‌, ಅಂತಾರಾಷ್ಟ್ರೀಯ ಆಟಗಾರರಾದ ಸುಬ್ರಮಣಿ, ಜಯವಂತ್‌ ಬೋಡೆR, ತಾರಕ್‌ ರಾವಲ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು. 

ಚಿತ್ರ -ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next