Advertisement

ಐಪಿಎಲ್‌ ಮುಗಿಯಿತು, ಇನ್ನು ಬಂಡಾಯ ಕಬಡ್ಡಿ!

09:21 AM May 14, 2019 | keerthan |

ಪುಣೆ: ನ್ಯೂ ಕಬಡ್ಡಿ ಫೆಡರೇಷನ್‌ (ಎನ್‌ಕೆಎಫ್ಐ) ವತಿಯಿಂದ ಪ್ರೊ ಕಬಡ್ಡಿಗೆ ಸಡ್ಡು ಹೊಡೆಯುವ ಯೋಜನೆಯೊಂದಿಗೆ ಆರಂಭಿಸಿರುವ ಇಂಡೊ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ (ಐಐಪಿಕೆಎಲ್‌) ಮೊದಲ ಆವೃತ್ತಿಗೆ ಸೋಮವಾರ ಪುಣೆಯಲ್ಲಿ ಚಾಲನೆ ದೊರೆಯಲಿದೆ.

Advertisement

ಈ ಕೂಟದಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು, ಒಂದೊಂದು ತಂಡದಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ಅವಕಾಶವಿದೆ. ಪಂದ್ಯಾವಳಿ ಮೇ 13ರಿಂದ ಜೂನ್‌ 4ರ ತನಕ ಕ್ರಮವಾಗಿ ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾಗಲಿದೆ.

ಪುಣೆ-ಹರ್ಯಾಣ ಮೊದಲ ಪಂದ್ಯ
“ಶಿವ ಛತ್ರಪತಿ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆಯಲಿರುವ ಬಂಡಾಯ ಲೀಗ್‌ನ ಮೊದಲ ಪಂದ್ಯದಲ್ಲಿ ಆತಿಥೇಯ ಪುಣೆ ಪ್ರೈಡ್‌ ತಂಡವನ್ನು ಹರ್ಯಾಣ ಹೀರೋಸ್‌ ಎದುರಿಸಲಿದೆ.

ಮೇ 21ರ ತನಕ ಪುಣೆ ಲೆಗ್‌ ಪಂದ್ಯಗಳು ನಡೆಯಲಿವೆ. ಮೇ 24ರಿಂದ ಮೇ 29ರ ತನಕ ಮೈಸೂರು ಆವೃತ್ತಿ ಹಾಗೂ ಜೂನ್‌ ಒಂದರಿಂದ 4ರ ತನಕ ಬೆಂಗಳೂರು ಆವೃತ್ತಿ ಪಂದ್ಯಗಳು ಸಾಗಲಿವೆ. ರಾತ್ರಿ 8ರಿಂದ 10ರ ವರೆಗೆ 2 ಪಂದ್ಯಗಳು ನಡೆಯಲಿವೆ. ಕೆಲವು ದಿನ 3 ಪಂದ್ಯಗಳು ನಡೆಯಲಿದ್ದು, ರಾತ್ರಿ 11ರ ತನಕ ದಿನದಾಟ ಸಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಕೂಟದಲ್ಲಿ ಬೆಂಗಳೂರು ಸೇರಿದಂತೆ ಒಟ್ಟಾರೆ 8 ತಂಡಗಳು ಭಾಗವಹಿಸುತ್ತಿವೆ.

ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ವಿ. ವಿಮಲ್‌ ರಾಜ್‌, ಸುನೀಲ್‌ ಜೈಪಾಲ್‌, ಶಶಾಂಕ್‌ ವಾಂಖೇಡೆ, ಪ್ರವೀಣ್‌ ಕುಮಾರ್‌, ವಿಪಿನ್‌ ಮಲಿಕ್‌, ಅರ್ಮುಗಂ ಸೇರಿದಂತೆ ಅನೇಕ ತಾರಾ ಆಟಗಾರರು ಇಲ್ಲಿ ಆಡಲಿದ್ದಾರೆ.

Advertisement

ವಿಜೇತರಿಗೆ 1.25 ಕೋಟಿ ರೂ.
ಕೂಟದ ವಿಜೇತರು 1.25 ಕೋಟಿ ರೂ. ನಗದು ಬಹುಮಾನ ಪಡೆಯಲಿದ್ದಾರೆ. ರನ್ನರ್‌ಅಪ್‌ಗೆ 75 ಲಕ್ಷ ರೂ., 3ನೇ ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ಕ್ರಮವಾಗಿ 50 ಲಕ್ಷ ರೂ. ಹಾಗೂ 25 ಲಕ್ಷ ರೂ. ಪಡೆಯಲಿವೆ. “ಡಿನ್ಪೋರ್ಟ್ಸ್ ‘ನಲ್ಲಿ ಕೂಟದ ನೇರ ಪ್ರಸಾರ ಮೂಡಿಬರಲಿದೆ.

ತಂಡಗಳು
1. ಬೆಂಗಳೂರು ರನೋಸ್‌
2. ಚೆನ್ನೈ ಚಾಲೆಂಜರ್
3. ದಿಲೇರ್‌ ದಿಲ್ಲಿ
4. ಹರ್ಯಾಣ ಹೀರೋಸ್‌
5. ಮುಂಬೈ ಚೆ ರಾಜೆ
6. ಪಾಂಡಿಚೇರಿ ಪ್ರಿಡಾಟರ್
7. ಪುಣೆ ಪ್ರೈಡ್‌
8. ತೆಲುಗು ಬುಲ್ಸ್‌

Advertisement

Udayavani is now on Telegram. Click here to join our channel and stay updated with the latest news.

Next