ಎಣ್ಣೆ-ಅಗತ್ಯವಿದ್ದಷ್ಟು
ಹಕ್ಕ ನೂಡಲ್ಸ್-1 ಪ್ಯಾಕ್
ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ
ಈರುಳ್ಳಿಯ ಬಿಳಿಭಾಗ-2 ಚಮಚ
ಕ್ಯಾಬೇಜ್-1 ಕಪ್
ಸಣ್ಣಗೆ ಹಚ್ಚಿದ ಕ್ಯಾರೆಟ್-ಅರ್ಧ ಕಪ್
ಸಣ್ಣಗೆ ಹಚ್ಚಿದ ಕ್ಯಾಪ್ಸಿಕಮ್-ಅರ್ಧ ಕಪ್
ಸೋಯಾ ಸಾಸ್-1 ಚಮಚ
ಟೊಮೇಟೋ ಸಾಸ್-3 ಚಮಚ
ವಿನೆಗರ್-ಅರ್ಧ ಚಮಚ
ಶೆಜ್‌ವಾನ್ ಚಟ್ನಿ-2 ಟೇಬಲ್ ಚಮಚ
ಉಪ್ಪು ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ:ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿದ ನೀರಿಗೆ ಒಂದು ಚಮಚ ಎಣ್ಣೆ ಹಾಕಿ ಕಲಸಿ. 1 ಪ್ಯಾಕ್ ಹಕ್ಕ ನೂಡಲ್ಸ್ ಅದಕ್ಕೆ ಹಾಕಿ 5 ನಿಮಿಷ ಕುದಿಸಿ. ಬಳಿಕ ನೀರನ್ನೆಲ್ಲ ಬಸಿಯಿರಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಕುದಿಸಲು ಇಡಿ. ಕುದಿದ ಎಣ್ಣೆಗೆ ನೀರು ಬಸಿದ ನೂಡಲ್ಸ್‌ನ್ನು ಹಾಕಿ ಕೆಂಪಗಾಗುವ ತನಕ ಕರಿಯಿರಿ. ಬಳಿಕ ಕೆಂಪಾದ ನೂಡಲ್ಸ್‌ನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ. ಇನ್ನು ಪ್ರತ್ಯೇಕ ಪಾತ್ರೆಯಲ್ಲಿ ಮೂರು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಕುದಿಸಿರಿ. ಎಣ್ಣೆ ಕುದಿದ ಬಳಿಕ ಅದಕ್ಕೆ 1 ಚಮಚ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, 2 ಚಮಚ ಈರುಳ್ಳಿಯ ಬಿಳಿಭಾಗವನ್ನು ಹಾಕಿ ಕರಿಯಿರಿ. ಒಂದು ಕಪ್ ಕ್ಯಾಬೇಜ್, ಸಣ್ಣಗೆ ತೆಳ್ಳಗೆ ಹೆಚ್ಚಿದ ಅರ್ಧ ಕಪ್ ಕ್ಯಾರೆಟ್, ಅರ್ಧ ಕಪ್ ಕ್ಯಾಪ್ಸಿಕಮ್‌ನ್ನು ಹಾಕಿ ಮತ್ತೆ ದೊಡ್ಡ ಉರಿಯಲ್ಲಿ 3 ನಿಮಿಷ ಕರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಇದಕ್ಕೆ ಹಾಕಿಕೊಳ್ಳಿ. ಬಳಿಕ 1 ಚಮಚ ಸೋಯಾ ಸಾಸ್, 3 ಚಮಚ ಟೊಮೇಟೋ ಸಾಸ್, ಅರ್ಧ ಚಮಚ ವಿನೆಗರ್, ಶೆಜ್ವಾನ್ ಚಟ್ನಿ 2 ಟೇಬಲ್ ಚಮಚ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿ ಆಗಲೇ ಹುರಿದಿಟ್ಟ ನೂಡಲ್ಸ್‌ನ್ನು ತುಂಡು ಮಾಡಿ ಚೆನ್ನಾಗಿ ಕಲಸಿ. ಇಂಡೋ-ಚೈನೀಸ್ ಭೇಲ್ ರೆಡಿ.